‘ಹೌಸಿಂಗ್ ಫಾರ್ ಆಲ್-2022’ ನೂತನ ಆಭಿಯಾನ
ಉಡುಪಿ, ಸೆ.24: ಕೇಂದ್ರ ಸರಕಾರದ ವಸತಿ ಮತ್ತು ನಗರ ಬಡತನ ನಿರ್ಮೂಲನಾ ಮಂತ್ರಾಲಯ ಪ್ರತಿ ನಾಗರಿಕರಿಗೂ ಸೂರು ಒದಗಿಸುವ ಘನ ಧ್ಯೇಯೋದ್ದೇಶದೊಂದಿಗೆ ‘ಹೌಸಿಂಗ್ ಫಾರ್ ಆಲ್-2022’ ಎಂಬ ನೂತನ ಆಭಿಯಾನವನ್ನು ಜಾರಿಗೊಳಿಸಿದೆ.
ನಗರ ವ್ಯಾಪ್ತಿಯಲ್ಲಿ ವಾಸಿಸುವ ವಸತಿ ರಹಿತ ಕುಟುಂಬಗಳಿಗೆ 2022ರೊಳಗೆ ವಸತಿ ಸೌಲ್ಯ ಒದಗಿಸಲು, ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಕ್ರೆಡಿಟ್ ಲಿಂಕ್ ಸಬ್ಸಿಡಿ ಸ್ಕೀಂ ಎಂಬ ಉಪ ಘಟಕವನ್ನು ಜಾರಿಗೊಳಿಸಿದೆ. ಈ ಯೋಜನೆಯ ಉದ್ದೇಶವು ಗರಿಷ್ಠ 18 ಲಕ್ಷ ರೂ.ವರೆಗೆ ಆದಾಯ ಹೊಂದಿರು ವವರು ಹೊಸ ಮನೆಯನ್ನು ನಿರ್ಮಿಸಿಕೊಳ್ಳಲು, ಖರೀದಿಸಲು, ರಿಪೇರಿ ಇರುವ ಮನೆಗೆ ಹೆಚ್ಚುವರಿ ಕೊಠಡಿಗಳನ್ನು (ಕೊಠಡಿ, ಅಡುಗೆ ಮನೆ, ಶೌಚಾಲಯ, ಸ್ನಾನದ ಮನೆ) ನಿರ್ಮಿಸಲು ಅನುಕೂಲವಾಗುವಂತೆ ಬ್ಯಾಂಕ್ ಸಾಲ ಸೌಲ್ಯ ವಿದ್ದು, ಸಾಲದ ಮೊತ್ತಕ್ಕೆ ವಿಧಿಸಲಾಗುವ ಬಡ್ಡಿ ದರದಲ್ಲಿ ಸಹಾಯಧನ ಒದಗಿಸಲಾಗುತ್ತದೆ.
ನಗರ ಪ್ರದೇಶದ ಮಿತಿಯೊಳಗೆ ವಾಸಿಸುವ ಕುಟುಂಬಗಳಷ್ಟೇ ಅಲ್ಲದೇ, ಪ್ಲಾನಿಂಗ್ ಏರಿಯಾ/ಡೆವಲಪ್ಮೆಂಟ್ ಏರಿಯಾ/ಸ್ಪೆಷಲ್ ಏರಿಯಾ/ಇಂಡಸ್ಟ್ರೀಯಲ್ ಏರಿಯಾಗಳಲ್ಲಿ ವಾಸಿಸುವ ಕುಟುಂಬಗಳು ಕೂಡಾ ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗಿರುತ್ತಾರೆ. ಆದ್ದರಿಂದ ಕ್ರೆಡಿಟ್ ಲಿಂಕ್ ಸಬ್ಸಿಡಿ ಸ್ಕೀಂನ ಯೋಜನೆಯಡಿಯಲ್ಲಿ ಮನೆ ನಿರ್ಮಿಸಿಕೊಳ್ಳಲು ಆಸಕ್ತಿ ಹೊಂದಿರುವವರು ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುವಂತೆ ನಗರಸಭೆಯ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.