ಪಾಲ್ದನೆ ಚರ್ಚ್ಗೆ ವಿದೇಶಿಯರ ಭೇಟಿ
ಮಂಗಳೂರು, ಸೆ,24: ನಗರದ ಪಾಲ್ದನೆಯಲ್ಲಿರುವ ಸಂತ ತೆರೆಝಾ ಚರ್ಚ್ ವ್ಯಾಪ್ತಿಯಲ್ಲಿರುವ ಹ್ಯಾಂಡ್ ಮೇಡ್ಸ್ ಆಫ್ ಸೇಕ್ರೆಡ್ ಹಾರ್ಟ್ ಆಫ್ ಜೀಸಸ್ ಕಾನ್ವೆಂಟಿಗೆ ಸ್ಪೇನ್ ದೇಶದ ಮದರ್ ಜನರಲ್ ಸಿ. ರೊಸಾರಿಯೊ ಫೆರ್ನಾಂಡಿಸ್, ಅಸಿಸ್ಟೆಂಟ್ ಜನರಲ್ ಸಿ. ಇನ್ನಿಸ್ ಓಲಾಗಾ ಹಾಗೂ ಪೋರ್ಚುಗಲ್ ದೇಶದ ಸಿ. ಮರಿಯಾ ವಾಸ್ ಪಿಂಟೋ ಹಾಗೂ ಎಲಂಟೈಯ ಸಿ. ಮಾರ್ಗರೆೀಟ್ ಡ್ಯುರೋಮ್ ಭೇಟಿ ನೀಡಿದರು.
ಚರ್ಚ್ನ ಪ್ರಧಾನ ಧರ್ಮಗುರು ವಂ.ಫಾ.ವಿನ್ಸೆಂಟ್ ವಿಕ್ಟರ್ ಮಿನೇಜಸ್ ವಿದೇಶಿಯರನ್ನು ಸ್ವಾಗತಿಸಿದರು. ಈ ಸಂದರ್ಭ ಮಂಗಳೂರು ಧರ್ಮಪ್ರಾಂತದ ಜ್ಯುಡಿಷಿಯಲ್ ವಿಕಾರ್ ವಂ.ವಾಲ್ಟರ್ ಡಿಮೆಲ್ಲೊ, ಸ್ಥಳೀಯ ಕಾನ್ವೆಂಟಿನ ಸಿ. ಸುವರ್ಣ, ಸಿ.ಡೊರೊತಿ ಮತ್ತಿತರರು ಉಪಸ್ಥಿತರಿದ್ದರು.
....
Next Story