ಬಾಲಕಿಗೆ ಲೈಂಗಿಕ ಕಿರುಕುಳ : ಆಟೋ ಚಾಲಕನ ವಿರುದ್ಧ ಪ್ರಕರಣ ದಾಖಲು
ಮಂಜೇಶ್ವರ,ಸೆ.25 : ಏಳನೇ ತರಗತಿ ವಿದ್ಯಾರ್ಥಿನಿಯನ್ನು ಆಟೋ ರಿಕ್ಷಾದಲ್ಲಿ ಕರೆದೊಯ್ದು ಕಿರುಕುಳ ನೀಡಲು ಯತ್ನಿಸಿದ ಪ್ರಕರಣದ ಆರೋಪದಲ್ಲಿ ಆಟೋ ಚಾಲಕನ ವಿರುದ್ಧ ಕುಂಬಳೆ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಮಳ್ಳಂಗೈ ನಿವಾಸಿ ಬಂದ್ಯೋಡಿನಲ್ಲಿ ಆಟೋ ಚಲಾಯಿಸುತ್ತಿರುವ ಗಂಗಾಧರ(46) ಆರೋಪಿ.
ಆರೋಪಿ ಬಾಲಕಿಯನ್ನು ಆಟೋದಲ್ಲಿ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಬಳಿಕ ಮನೆಗೆ ತಲುಪಿಸಿದ್ದನು. ಬಾಲಕಿ ಮನೆಯವರಲ್ಲಿ ಘಟನೆ ಕುರಿತು ತಿಳಿಸಿದ್ದು ಇದರಂತೆ ಮನೆಯವರು ಚೈಲ್ಡ್ ಲೈನ್ ಗೆ ಮಾಹಿತಿ ನೀಡಿದ್ದರು. ಚೈಲ್ಡ್ ಲೈನ್ ನಡೆಸಿದ ತನಿಖೆಯಲ್ಲಿ ಘಟನೆ ಕುರಿತು ಬಾಲಕಿಯಿಂದ ಹೇಳಿಕೆ ಪಡೆದು ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿದ ಕುಂಬಳೆ ಪೊಲೀಸರು ಈತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸು ದಾಖಲಿಸಿದ್ದಾರೆ.
Next Story