ಮಂಗಳೂರು: ಜನತಾ ಬಝಾರ್ ಬಳಿಯ ಕಟ್ಟಡಕ್ಕೆ ಬೆಂಕಿ; ಅಪಾರ ನಷ್ಟ
ಮಂಗಳೂರು, ಸೆ. 27: ನಗರದ ಜಿ ಎಚ್ ಎಸ್ ರಸ್ತೆಯ ಜನತಾ ಬಝಾರ್ ಬಳಿಯ ಸೆಲೆಕ್ಷನ್ ಸೆಂಟರ್ ಬಟ್ಟೆ ಅಂಗಡಿಯಲ್ಲಿ ಗುರುವಾರ ಬೆಳಗ್ಗೆ ಬೆಂಕಿ ಆಕಸ್ಮಿಕ ಉಂಟಾಗಿದೆ.
ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರುವುದಾಗಿ ಅಂದಾಜಿಸಲಾಗಿದೆ. ಘಟನೆಯಿಂದ ಅಪಾರ ನಷ್ಟವಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯತ್ನಿಸುತ್ತಿದ್ದಾರೆ.
Next Story