ಸೆ.28-30: ಭಾರತೀಯ ಚಿನ್ನಾಭರಣ- ಜೀವನ ಶೈಲಿ ಮೇಳ
ಮಂಗಳೂರು, ಸೆ. 27: ಫ್ಯಾಷನ್ ಸ್ಟೋರಿಯ 48ನೇ ಆವೃತ್ತಿಯ ಭಾರತೀಯ ಚಿನ್ನಾಭರಣ ಹಾಗೂ ಜೀವನ ಶೈಲಿ ಮೇಳ ನಗರದ ಟಿಎಂಎ ಪೈ ಇಂಟರ್ ನ್ಯಾಷನಲ್ ಕನ್ವೆನ್ಷನ್ ಸೆಂಟರ್ನಲ್ಲಿ ಸೆ. 28ರಿಂದ 30ರವರೆಗೆ ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಫ್ಯಾಷನ್ ಸ್ಟೋರಿಯ ಸಂಸ್ಥಾಪಕ ರವಿ, ಚಿನ್ನ ಹಾಗೂ ವಜ್ರಾಭರಣಗಳು, ಗೃಹಲಂಕಾರಿಕ ವಸ್ತುಗಳು ಸೇರಿದಂತೆ ದೇಶದ ಅಗ್ರಗಣ್ಯ 50 ಬ್ರಾಂಡ್ಗಳ ಉತ್ಪನ್ನಗಳು ಮೇಳದ ಒಂದೇ ಸೂರಿನಡಿ ಲಭ್ಯವಾಗಲಿವೆ ಎಂದರು.
ಬೆಂಗಳೂರಿನ ಈವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯಾಗಿರುವ ಫ್ಯಾಷನ್ ಸ್ಟೋರಿ ವತಿಯಿಂದ ಮಂಗಳೂರಿನಲ್ಲಿ ನಡೆಯಲಿರುವ ಈ ಪ್ರದರ್ಶನ ಮತ್ತು ಮಾರಾಟದಲ್ಲಿ ದೇಶದ 50 ಪ್ರಮುಖ ಬ್ರಾಂಡ್ಗಳ ಉತ್ಪಾದಕರು, ಪೂರೈಕೆದಾರರು, ರಿಟೇಲರ್ಗಳು ಭಾಗವಹಿಸಲಿದ್ದಾರೆ. ಮಂಗಳೂರಿನಲ್ಲಿ ಮೊದಲ ಬಾರಿಗೆ ಜೀವಶೈಲಿ ಉತ್ಪನ್ನಗಳನ್ನು ಪರಿಚಯಿಸಲಾಗುವುದು. ಕಲಾತ್ಮಕ ಕರಕುಶಲ ಆಭರಣಗಳು, ಟೆಂಪಲ್ ಜುವೆಲರಿ, ಆ್ಯಂಟಿಕ್ ಜುವೆಲರಿ, ಆಕರ್ಷಕ ಮಂಗಳಸೂತ್ರಗಳ ಸಂಗ್ರಹ, ಬೆಳ್ಳಿಯ ಸಮಗ್ರಿಗಳು, ಬೆಳ್ಳಿ ಆಭರಣಗಳು, ಕಾಂಚಿವರಂ ಸಿಲ್ಕ್ ಸೀರೆಗಳು, ಮದುವೆಯ ಗೌನ್ಗಳು, ಮದುವೆಯ ಘಾಗ್ರಾಗಳು, ಕುರ್ತಿಗಳು, ವಿನ್ಯಾಸದ ಲೆಹೆಂಗಾ, ಪಾಕಿಸ್ತಾನಿ ಸೂಟ್ಗಳು, ಡಿಸೈನರ್ ಸೂಟ್ಗಳು, ಅನಾರ್ಕಲಿಸ್, ವೆಸ್ಟನ್ ವೇರ್, ಡ್ರೆಸ್ ಮೆಟೀರಿಯಲ್ ಗಳು, ಗೃಹಲಂಕಾರ ವಸ್ತುಗಳು, ಗೃಹಬಳಕೆ ಸಾಮಗ್ರಿಗಳು, ಒಳಾಂಗಣ ಪೀಠೋಪಕರಣಗಳು, ಮಹಿಳೆಯರ ಬಳಕೆ ಉತ್ಪನ್ನಗಳು, ಆಕರ್ಷಕ ವಿನ್ಯಾಸದ ಪಾದರಕ್ಷೆಗಳು ಗಮನ ಸೆಳೆಯಲಿವೆ. ಭಾರತೀಯ ಪಾರಂಪರಿಕ ಕಲಾತ್ಮಕತೆ ಹಾಗೂ ಸಮಕಾಲೀನ ವರ್ಣಗಳ, ಆಧುನಿಕ ವಿನ್ಯಾಸಗಳಿಂದ ಕೂಡಿ ಉತ್ಪನ್ನಗಳು ಇಲ್ಲಿ ಲಭ್ಯವಾಗಲಿವೆ.
ಗುಣಮಟ್ಟ ಹಾಗೂ ವಿನ್ಯಾಸಕ್ಕೆ ಪ್ರಸಿದ್ಧಿಗಳಿಸಿರುವ ಗಣೇಶ ಡೈಮಂಡ್ಸ್ ಆ್ಯಂಡ್ ಜುವೆಲರಿ, ನಿಖಾರಾ ಜೆವೆಲ್ಸ್ ಪ್ರೈವೇಟ್ ಲಿಮಿಟೆಡ್, ನಿಯತಿ ಜೆವೆಲರಿ, ಗರ್ವ್ ಸಿಲ್ವರ್, ತ್ರಿವೇಣಿ ಸಿಲ್ವರ್ ಜೆವೆಲರಿ, ಕೊಕೆ ಲಕ್ಷರಿ ಇಂಟರ್ನ್ಯಾಷನಲ್ ಸಮ್ಯಕ್, ಮೆನ್ಸ್ ಅವೆನ್ಯೂ, ಹರ್ಷಿಣಿ ಸಾರೀಸ್, ಸಖಿ ಬೈ ಚಂದ್ರಾ, ಸೇಫ್ಟಿ ಪಿನ್ಜ್, ಸ್ತ್ರೀ ಕಲೆಕ್ಷನ್ಸ್, ವದಂತಮಂ, ಸಿಕ್ಶ್ ಯಾರ್ಡ್ಸ್ ಸಿಲ್ಕ್ಸ್, ಗೋಲ್ಡನ್ ವೇವ್ಸ್, ಎಥೆರಲ್ ಫ್ಯಾಷನ್ಸ್, ಮುದ್ರಕ, ಕಾಶ್ಮೀರ ಸಿಲ್ಕ್ ಹೌಸ್, ಪಮ್ಮಿವಾಲಿಯಾ, ರೂಮರ್ಸ್, ಎಲಿಗನ್ಸ್, ಅದ್ಕಾಸ್, ರಶ್ ಟು ಡೆನಿಮ್, ಮೀರಾ ಫ್ಯಾಷನ್ ಜೆವೆಲರಿ, ಬಹ್ನು ಫ್ಯಾಷನ್ಸ್, ಎಥೆರಲ್ ಸೇರಿದಂತೆ 50ಕ್ಕೂ ಅಧಿಕ ಖ್ಯಾತ ಸಂಸ್ಥೆಗಳ ಉತ್ಪನ್ನಗಳು ಪ್ರದರ್ಶನಗೊಳ್ಳಲಿವೆ ಎಂದು ರವಿ ತಿಳಿಸಿದರು.
ಗೋಷ್ಠಿಯಲ್ಲಿ ಪೂರ್ಣಿಮಾ ಉಪಸ್ಥಿತರಿದ್ದರು.