ಅಕ್ರಮ ಗಾಂಜಾ ಮಾರಾಟ: ಇಬ್ಬರ ಬಂಧನ
ಉಡುಪಿ, ಸೆ. 27: ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸು ತ್ತಿದ್ದ ಇಬ್ಬರನ್ನು ಉಡುಪಿ ಸೆನ್ ಅಪರಾಧ ಪೊಲೀಸರು ಹೆರ್ಗಾ ಗ್ರಾಮದ ಈಶ್ವರ ನಗರ ಎಂಬಲ್ಲಿರುವ ಐಡಿಯಲ್ ಅಪಾರ್ಟ್ಮೆಂಟ್ ಬಳಿ ಸೆ.26ರಂದು ಬೆಳಗ್ಗೆ 11.45ರ ಸುಮಾರಿಗೆ ಬಂಧಿಸಿದ್ದಾರೆ.
ತೆಲಂಗಾಣ ರಾಜ್ಯದ ರಾಜ್ ಪ್ರಶಾಂತ ಸಿಂಗ್(21), ಶಾಂತನ್ ರೆಡ್ಡಿ(21) ಬಂಧಿತ ಆರೋಪಿಗಳು. ಇವರಿಂದ 1 ಕಿಲೋ 166 ಗ್ರಾಂ ತೂಕದ ಗಾಂಜಾ, ಬ್ಯಾಗ್ ಮತ್ತು ಎರಡು ಮೊಬೈಲ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ 42,000ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story