ಸುಂಡೇಕೆರೆ: ಮುಅಲ್ಲಿಮ್ ಡೆ ಕಾರ್ಯಕ್ರಮ
ಸುಂಡೇಕೆರೆ, ಸೆ. 28: ಎಂಜೆಎಂ ಸುಂಡೇಕೆರೆ ಇದರ ಆಶ್ರಯದಲ್ಲಿ ಮುಅಲ್ಲಿಮ್ ಡೆ ಕಾರ್ಯಕ್ರಮದ ಧ್ವಜಾರೋಹಣವನ್ನು ಜಮಾಅತ್ ಕಮಿಟಿ ಅಧ್ಯಕ್ಷ ಯೂಸುಫ್ ಸಾಹಿಬ್ ನೆರವೇರಿಸಿದರು.
ಖತೀಬ್ ನೌಶಾದ್ ಫೈಝಿ ದುಆ ನೆರವೇರಿಸಿದರು. ಸಂಜೆ ಜಮಾಹತ್ ಸದಸ್ಯರು, ವಿದ್ಯಾರ್ಥಿಗಳು, ಅಧ್ಯಾಪಕರಿಂದ ಕಬ್ ರ್ ಝಿಯಾರತ್ ನಡೆಯಿತು. ನಂತರ ಮಜ್ಲಿಸುನ್ನೂರ್ ಆಧ್ಯಾತ್ಮಿಕ ಸಂಗಮ ಹಾಗೂ ಸ್ವಲಾತ್ ಮಜ್ಲಿಸ್ ನಡೆಯಿತು.
ಈ ಸಂದರ್ಭ ಮದರಸದ 5, ಹಾಗೂ7 ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಕ್ಯಾಶ್ ಅವಾರ್ಡ್ ವಿತರಿಸಲಾಗುವುದು.
Next Story