ಉಡುಪಿ ಜಿಲ್ಲೆಯಾದ್ಯಂತ ಮೆಡಿಕಲ್ ಸಂಪೂರ್ಣ ಬಂದ್
ಉಡುಪಿ, ಸೆ.28: ಆನ್ಲೈನ್ ಮೂಲಕ ಔಷಧ ಖರೀದಿಗೆ ಅವಕಾಶ ನೀಡ ದಂತೆ ಆಗ್ರಹಿಸಿ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘದ ಕರೆಯಂತೆ ಇಂದು ಉಡುಪಿ ಜಿಲ್ಲೆಯಾದ್ಯಂತ ಎಲ್ಲ ಮೆಡಿಕಲ್ ಅಂಗಡಿಗಳು ಸಂಪೂರ್ಣ ಮುಚ್ಚಿ ಬಂದ್ ಆಚರಿಸಿದವು.
ಔಷಧ ಮಾರಾಟಗಾರರು ಬೆಳಗ್ಗೆಯಿಂದ ರಾತ್ರಿಯವರೆಗೆ ಜಿಲ್ಲೆಯ ಸುಮಾರು 400ಕ್ಕೂ ಅಧಿಕ ಮೆಡಿಕಲ್ ಅಂಗಡಿಗಳಲ್ಲಿನ ಸೇವೆಯನ್ನು ಸ್ಥಗಿತ ಗೊಳಿಸುವ ಮೂಲಕ ಆನ್ಲೈನ್ನಲ್ಲಿ ಔಷಧ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದರು. ಆದರೆ ಆಸ್ಪತ್ರೆ, ನರ್ಸಿಂಗ್ ಹೋಮ್ಗಳಲ್ಲಿರುವ ವೆುಡಿಕಲ್ ಶಾಪ್ಗಳು ಎಂದಿನಂತೆ ತೆರೆದಿದ್ದವು.
ಈ ಕುರಿತ ಮನವಿಯನ್ನು ಉಡುಪಿ ಜಿಲ್ಲಾ ಔಷಧ ಮಾರಾಟಗಾರರ ಸಂಘ ಉಡುಪಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿತು. ಮನವಿಯನ್ನು ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ, ಕಾರ್ಯದರ್ಶಿ ವಿ.ಜಿ.ಶೆಟ್ಟಿ ಉಪಸ್ಥಿತರಿದ್ದರು.
ಆನ್ಲೈನ್ನಲ್ಲಿ ಔಷಧಿ ಖರೀದಿಗೆ ಅವಕಾಶ ಕಲ್ಪಿಸುವುದರಿಂದ ಹಲವು ಅನಾಹುತಗಳಿಗೆ ಕಾರಣವಾಗುತ್ತದೆ. ಔಷಧಿಗಳ ದುರುಪಯೋಗ ಕೂಡ ನಡೆ ಯಲಿದೆ. ಅಲ್ಲದೆ ಔಷಧ ವ್ಯಾಪಾರ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬೀಳಲಿದೆ. ಇದನ್ನು ವಿರೋಧಿಸಿ ಇಂದು ಉಡುಪಿ ಜಿಲ್ಲೆಯಾದ್ಯಂತ ನಡೆದ ಮೆಡಿಕಲ್ ಬಂದ್ ಯಶಸ್ವಿಯಾಗಿದೆ. ಆದುದರಿಂದ ಸರಕಾರ ಕೂಡಲೇ ಈ ನಿರ್ಧಾರವನ್ನು ಕೈಬಿಡ ಬೇಕು ಎಂದು ಕಾರ್ಯದರ್ಶಿ ವಿ.ಜಿ.ಶೆಟ್ಟಿ ಆಗ್ರಹಿಸಿದರು.