ಹೋಮ್ಸ್ಟೇಗೆ ನುಗ್ಗಿ ನಗನಗದು ಕಳವು
ಬೈಂದೂರು, ಸೆ. 28: ಬೈಂದೂರು ಕಳವಾಡಿ ಎಂಬಲ್ಲಿರುವ ಮಾತೃಭೂಮಿ ಎಂಬ ಹೋಮ್ಸ್ಟೇಗೆ ಸೆ.27ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ನಗ ನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಮಹಾಬಲ ಮೊಗವೀರ ಎಂಬವರ ಹೋಮ್ಸ್ಟೇನ ಎದುರಿನ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಬೆಡ್ರೂಮಿನ ಕಪಾಟಿನಲ್ಲಿದ್ದ ಒಟ್ಟು ಒಂದು ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು 10ಸಾವಿರ ರೂ. ನಗದನ್ನು ಕಳವು ಮಾಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story