ನಂದಾವರ: ಶಾಲಾಭಿವೃದ್ದಿ ಸಮಿತಿಗೆ ಆಯ್ಕೆ
ವಿಟ್ಲ, ಸೆ.29: ನಂದಾವರದ ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿಯ ನೂತನ ಅಧ್ಯಕ್ಷರಾಗಿ ಅಬ್ದುಲ್ ಕರೀಂ ಸತತ ಐದನೇ ಬಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಶಾಲೆಯಲ್ಲಿ ನಡೆದ ಶಾಲಾ ವಿದ್ಯಾರ್ಥಿಗಳ ಪೋಷಕರ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಉಪಾಧ್ಯಕ್ಷರಾಗಿ ಅಬ್ದುಲ್ ರಹಿಮಾನ್, ಸದಸ್ಯರಾಗಿ ಹೈದರಲಿ, ಶಾಹುಲ್ ಹಮೀದ್, ಅಬ್ದುಲ್ ಹಮೀದ್, ಅಬ್ದುಲ್ ಖಾದರ್, ಶಾಲಿನಿ, ಮಿಸ್ರಿಯಾ, ಅಫ್ಸಾ, ಸೆಲಿಕಾ, ರಹ್ಮತ್, ರಶೀದಾ ಬಾನು, ಆಯಿಶಾ, ಮೈಮೂನ, ಜೈನಾಬಿ, ನಝೀಮ, ರತಿ ಹಾಗೂ ರಾಜೀವಿ ಆಯ್ಕೆಯಾದರು.
ನಾಮ ನಿರ್ದೇಶಿತ ಸದಸ್ಯರಾಗಿ ಸ್ಥಳೀಯ ಜನಪ್ರತಿನಿಧಿ ಮುಹಮ್ಮದ್ ಶರೀಫ್, ಸಹ ಶಿಕ್ಷಕಿ ಮಮತಾ ಆರ್. ಶೇಟ್, ವಿದ್ಯಾರ್ಥಿ ನಾಯಕ ತಿಲಕ್ ರಾಜ್ ಹಾಗೂ ಪದನಿಮಿತ ಸದಸ್ಯರಾಗಿ ಸದಸ್ಯ ಕಾರ್ಯದರ್ಶಿ, ಶಾಲಾ ಮುಖ್ಯ ಶಿಕ್ಷಕ ಹರೀಶ್ ಕುಮಾರ್ ಬಿ.ಎಂ., ಆರೋಗ್ಯ ಕಾರ್ಯಕರ್ತೆ ಸುಮನಾ ಕುಮಾರಿ ಕ್ರಾಸ್ತಾ, ಅಂಗನವಾಡಿ ಕಾರ್ಯಕರ್ತೆ ಗಾಯತ್ರಿ ನೇಮಕಗೊಂಡರು.
Next Story