ಬಂಟ್ವಾಳ: ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ
ಬಂಟ್ವಾಳ, ಸೆ. 29: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾ ಕಚೇರಿಯಿಂದ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಬಂಟ್ವಾಳ ತಾಲೂಕಿನ ಕಾಪಿಕಾಡು, ಹೆನ್ನೂರಪದವು, ಅಡ್ಕ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆ ಹುದ್ದೆಗೆ ಮತ್ತು ಉಪ್ಪುಗುಡ್ಡೆ, ಕಾರಾಜೆ, ಮಂಜಲ್ಪಾದೆ, ಸಣ್ಣಕುಕ್ಕು, ಹೆಗ್ಗಣಗುಳಿ, ಮುಗ್ದಾಲ್ಗುಡ್ಡೆ, ಬೊಗ್ರಾಮೇರು, ಕರ್ಪೆ ಕುಟ್ಟಿಕಳ, ಕೆರೆಬಳಿ, ನಂದರಬೆಟ್ಟು ಅಂಗನವಾಡಿ ಕೇಂದ್ರಗಳ ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ವೆಬ್ ಸೈಟ್ನಲ್ಲಿ ಅರ್ಜಿ ಆಹ್ವಾನಿಸಿದ್ದು, ಅ. 25 ಕೊನೆಯ ದಿನಾಂಕವಾಗಿದೆ. ಈ ಬಗ್ಗೆ ಬಿ.ಸಿ.ರೋಡ್ ಕಚೇರಿ 08255-232465 ಕಚೇರಿ ವೇಳೆ ಸಂಪರ್ಕಿಸಬಹುದೆಂದು ಯೋಜನಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story