ಮಂಗಳೂರು: ಅಲ್ ಹನ್ಝ್ ಬುಟಿಕ್ ಶುಭಾರಂಭ
ಮಂಗಳೂರು, ಸೆ.30: ನಗರದ ಬೆಂದೂರ್ವೆಲ್ನ ಕುನಿಲ್ ಕಾಂಪ್ಲೆಕ್ಸ್ನ ತಳಮಹಡಿಯಲ್ಲಿ ಮಹಿಳೆಯರಿಗಾಗಿನ ನೂತನ ಡಿಸೈನರ್ ಬುಟಿಕ್ ಮಳಿಗೆ ‘ಅಲ್ ಹನ್ಝ್’ ಇಂದು ಶುಭಾರಂಭಗೊಂಡಿತು.
ನಗರ ಪೊಲೀಸ್ ಆಯುಕ್ತರ ಪತ್ನಿ ಗಾಯತ್ರಿ ಎಸ್.ಅವರು ನೂತನ ಮಳಿಗೆಯನ್ನು ಉದ್ಘಾಟಿಸಿದರು.
ಈ ಸಂದರ್ಭ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಚಿತ್, ಆ್ಯಪಲ್ ಪ್ಲೈವುಡ್ ಮಾಲಕ ಎ.ಕೆ. ಅಹ್ಮದ್, ಫಿಸ್ಮಿಲ್ನ ಆಡಳಿತ ನಿರ್ದೇಶಕ ಪಿ.ಸಿ. ಅಲವಿ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ನ ಅಬ್ದುಲ್ ರವೂಪ್ ಪುತ್ತಿಗೆ, ಆಝಾದ್ ಹಾರ್ಡ್ವೇರ್ನ ಮನ್ಸೂರ್ ಅಹ್ಮದ್, ಸಿ.ಆರ್. ಫ್ರೂಟ್ಸ್ನ ಸಿ.ಆರ್. ಅಬೂಬಕರ್, ವುಡ್ವರ್ತ್ ಕನ್ಸ್ಟ್ರಕ್ಷನ್ನ ಶರೀಫ್ ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಮಳಿಗೆಯು ಪ್ರತ್ಯೇಕವಾಗಿ ಮಹಿಳೆಯರ ವಿನ್ಯಾಸಭರಿತ ವಸ್ತ್ರಗಳಿಗೆ ಮೀಸಲಾಗಿದ್ದು, ಇಲ್ಲಿ ಮದುಮಗಳಿಗೆ ಅಗತ್ಯವಾದ ಎಲ್ಲಾ ರೀತಿಯ ಶೃಂಗಾರಭರಿತ ಬಟ್ಟೆ ಬರೆಗಳು ಲಭ್ಯವಿದೆ. ಅದರಲ್ಲೂ ವಿಶೇಷವಾಗಿ ರಾಜಸ್ತಾನ, ಡೆಲ್ಲಿ ಹಾಗೂ ಜೈಪುರದ ವಸ್ತ್ರಗಳು ಲಭ್ಯ ಎಂದು ಮಾಲಕ ಅಬ್ದುಲ್ ಹಮೀದ್ ತಿಳಿಸಿದ್ದಾರೆ.