ಕೋಟ: ರೈಲಿನಡಿಗೆ ಸಿಲುಕಿ ಅಪರಿಚಿತ ಮೃತ್ಯು
ಕೋಟ, ಸೆ.30: ಕೆದೂರು ಗ್ರಾಮದ ರೈಲ್ವೆ ಹಳಿಯಲ್ಲಿ ಸೆ.30ರಂದು ಮಧ್ಯಾಹ್ನ ವೇಳೆ ಸುಮಾರು 35ರಿಂದ 40ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹವು ರೈಲಿಗೆ ಸಿಲುಕಿ ರುಂಡ ಹಾಗೂ ಮುಂಡ ಪ್ರತ್ಯೇಕ ಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತರು ಗೋಧಿ ಮೈಬಣ್ಣ ಹೊಂದಿದ್ದು, ಮೀಸೆ ಮತ್ತು ಗಡ್ಡ ಬೋಳಿಸಿರು ವುದು ಕಂಡು ಬಂದಿದೆ. ಇವರು ಕಪ್ಪುಬಣ್ಣದ ಟೀಶರ್ಟ್, ಗ್ರೇ ಬಣ್ಣದ ಪ್ಯಾಂಟ್ ಧರಿಸಿದ್ದರು. ಬಲ ಕೈಗೆ ಕೆಂಪು ದಾರ ಕಟ್ಟಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story