ಉದ್ಯಮಿ ಮೊಯ್ದಿನ್ ಕುಂಞಿಪಕ್ಕಿ ನಿಧನ
ಮಂಗಳೂರು, ಸೆ. 30: ದಿವಂಗತ ಸಿ. ಕುಂಞಿಪಕ್ಕಿ ಅವರ ಪುತ್ರ ಉದ್ಯಮಿ ಮೊಯ್ದಿನ್ ಕುಂಞಿಪಕ್ಕಿ (66) ಅಲ್ಪಕಾಲದ ಅಸೌಖ್ಯದಿಂದ ನಗರದ ಕಂದಕ್ನ ಸ್ವಗೃಹದಲ್ಲಿ ರವಿವಾರ ರಾತ್ರಿ ನಿಧನರಾದರು.
ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತದೇಹವನ್ನು ಸೋಮವಾರ ಮಧ್ಯಾಹ್ನದ ನಂತರ ಮಂಗಳೂರಿನ ಕೇಂದ್ರ ಮಸೀದಿ ಬಳಿ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಕುಟುಂಬದ ಮೂಲ ತಿಳಿಸಿದೆ.
ಸಂತಾಪ: ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್, ಯೆನೆಪೊಯ ಅಬ್ದುಲ್ಲಾ ಕುಂಞಿ, ಕಾರ್ಪೊರೇಟರ್ ಅಬ್ದುಲ್ ಲತೀಫ್ ಮತ್ತಿತರರು ಸಂತಾಪ ಸೂಚಿಸಿದ್ದಾರೆ.
Next Story