ಉಡುಪಿ ಎಲ್ಐಸಿ ಮೆನೇಜರ್ ಮನೆಯಲ್ಲಿ ಕಳವು
ಉಡುಪಿ, ಅ.1: ನಗರದ ಅಜ್ಜರಕಾಡುವಿನಲ್ಲಿರುವ ಎಲ್ಐಸಿ ವಿಭಾಗೀಯ ಕಛೇರಿಯ ವಿಭಾಗೀಯ ಮೆನೇಜರ್ ಜಿ.ಲಕ್ಷ್ಮೀನರಸಿಂಹನ್ ಎಂಬವರ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ವೌಲ್ಯದ ನಗ ನಗದು ಕಳವಾಗಿರುವ ಬಗ್ಗೆ ವರದಿಯಾಗಿದೆ.
ಇವರು ಸೆ.22ರಂದು ಮನೆಗೆ ಬೀಗ ಹಾಕಿ ತನ್ನ ಹೆಂಡತಿಯೊಂದಿಗೆ ಉತ್ತರ ಭಾರತ ಪ್ರವಾಸಕ್ಕೆ ಹೋಗಿದ್ದರು. ಅ.1ರಂದು ಬೆಳಗ್ಗೆ 8ಗಂಟೆಗೆ ವಾಪಾಸು ಮನೆಗೆ ಬಂದು ನೋಡಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಈ ಮಧ್ಯಾವಧಿಯಲ್ಲಿ ಮನೆಯ ಮುಖ್ಯದ್ವಾರವನ್ನು ಮುರಿದು ಒಳನುಗ್ಗಿದ ಕಳ್ಳರು ಮನೆಯ ದೇವರ ಕೋಣೆಯೊಳಗಿನ ಗೋಡ್ರೇಜ್ ಕಾಪಾಟಿನಲ್ಲಿದ್ದ 1,60,000 ರೂ. ಮೌಲ್ಯದ 64 ಗ್ರಾಂ ಚಿನ್ನಾಭರಣ ಹಾಗೂ 30,000ರೂ. ನಗದು ಕಳವು ಮಾಡಿದ್ದಾರೆನ್ನಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Next Story