ಕಾರ್ಕಳ: ಮುಸ್ಲಿಮ್ ಒಕ್ಕೂಟದ ಪದಾಧಿಕಾರಿಗಳ ಆಯ್ಕೆ
ಮುಹಮ್ಮದ್ ಗೌಸ್
ಕಾರ್ಕಳ, ಅ.1: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಕಾರ್ಕಳ ತಾಲೂಕು ಅಧ್ಯಕ್ಷರಾಗಿ ಮುಹಮ್ಮದ್ ಗೌಸ್ ಮಿಯಾರು ಆಯ್ಕೆಯಾಗಿದ್ದಾರೆ.
ಒಕ್ಕೂಟದ ಜಿಲ್ಲಾಧ್ಯಕ್ಷ ಯಾಸೀನ್ ಮಲ್ಪೆ ಹಾಗೂ ಪ್ರಧಾನ ಕಾರ್ಯದರ್ಶಿ ಎಂ.ಎ.ವೌಲಾ ಉಸ್ತುವಾರಿಯಲ್ಲಿ ಇಂದು ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಕಾಸಿಂ ಬಾರಕೂು, ಶಾಹಿದಾಲಿ ತೋನ್ಸೆ ಹಾಜರಿದ್ದರು.
ಕಾರ್ಕಳ ತಾಲೂಕು ಉಪಾಧ್ಯಕ್ಷರಾಗಿ ಸುಲೈಮಾನ್ ಬಜಗೋಳಿ, ಕಾರ್ಯ ದರ್ಶಿಯಾಗಿ ಸಯ್ಯದ್ ಹಸನ್ ಕಾರ್ಕಳ, ಜತೆ ಕಾರ್ಯದರ್ಶಿಯಾಗಿ ಸಯ್ಯದ್ ಅಬ್ಬಾಸ್ ಅಂಚಿಕಟ್ಟೆ, ಕೋಶಾಧಿಕಾರಿಯಾಗಿ ನಸೀರುದ್ದೀನ್ ಕುಕ್ಕುಂದೂರು, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಶ್ಫಕ್ ಅಹ್ಮದ್ ಕಾರ್ಕಳ, ಹೈದರ್ ಎಣ್ಣೆಹೊಳೆ, ಶೌಕತ್ ಹುಸೈನ್ ಕಾಬೆಟ್ಟು, ಶೇಕ್ ಶಬ್ಬೀರ್ ಮಿಯಾರು, ಫಝೀಲ್ ಬಂಗ್ಲೆಗುಡ್ಡೆ, ಕೆ.ಎಂ.ಮುಸ್ತಾಫ ಜಯಂತಿನಗರ, ಹಸನಬ್ಬ ಕಂಪಾನ್, ನೂರ್ ನವಾಝ್ ಬೈಲೂರು, ಎಸ್.ರಜಬ್ ತೆಳ್ಳಾರ್, ನಾಸೀರ್ ಶೇಕ್ ಕಾಬೆಟ್ಟು, ಮುಹಮ್ಮದ್ ಶರೀಫ್ ಬಂಗ್ಲೆಗುಡ್ಡೆ, ನಾಸೀರ್ ಶೇಕ್ ಬೈಲೂರು, ಮೊದಿನ್ ರಂಜಾಳ, ಅಝೀಝುದ್ದೀನ್ ರಿಝ್ವೆನ್ ಕಾರ್ಕಳ, ಅನ್ವರ್ ಅಜೆಕಾರ್, ಸಮದ್ ಖಾನ್ ಸಾಣೂು ಅವರನ್ನು ಆಯ್ಕೆ ಮಾಡಲಾಯಿತು.