ಅ.20-21: ಚಮನ್ ಶಾ ವಲಿಯುಲ್ಲಾಹಿ ಉರೂಸ್ ಮುಬಾರಕ್
ಮೂಡುಬಿದಿರೆ, ಅ.4: ಕೋಟೆಬಾಗಿಲಿನಲ್ಲಿ ಅಂತ್ಯ ವಿಶ್ರಮಗೊಂಡಿರುವ ಹಝ್ರತ್ ಚಮನ್ ಶಾ ವಲಿಯುಲ್ಲಾಹಿಯವರ ಮಖಾಂ ಉರೂಸ್ ಮುಬಾರಕ್ ಸಮಾರಂಭ ಅ. 20 ಮತ್ತು 21ರಂದು ನಡೆಯಲಿದೆ.
ಅ.20ರಂದು ಅಸರ್ ನಮಾಝ್ ಬಳಿಕ ಕುರ್ಆನ್ ಪಾರಾಯಣ ನಡೆಯಲಿದೆ ಹಾಗೂ ಗುಸ್ಲ್ ಕಾರ್ಯಕ್ರಮ ನಡೆಯಲಿದೆ. ಇಶಾ ನಮಾಝ್ ಬಳಿಕ ಉತ್ತರ ಪ್ರದೇಶದ ಫಝಿಯಾಬಾದ್ನ ಮುಫ್ತಿ ಕಮಾಲ್ ಅಖ್ತರ್ ಮುಖ್ಯ ಭಾಷಣ ಮಾಡುವರು.
ಅ.21ರಂದು ಮಗ್ರಿಬ್ ನಮಾಝ್ ಬಳಿಕ ಗೌರಿಕೆರೆ ಉಸ್ಮಾನ್ ಮಂಝಿಲ್ ಅವರ ಮನೆಯಿಂದ ಸಂದಲ್ ಮೆರವಣಿಗೆ ನಡೆಯಲಿದೆ. ಬಳಿಕ ಹಝ್ರತ್ ಶಮನ್ ಶಾ ವಲಿಯುಲ್ಲಾಹಿಯವರ ದರ್ಗಾ ಝಿಯಾರತ್ ನಡೆಯಲಿದೆ.
ಇಶಾ ನಮಾಝ್ ಬಳಿಕ ಹುಬ್ಬಳ್ಳಿಯ ಮುಫ್ತಿ ಅನ್ವರ್ ಅಲಿ ಸಾಹೇಬ್ ಉರ್ದುವಿನಲ್ಲಿ ಹಾಗೂ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಕನ್ನಡದಲ್ಲಿ ಪ್ರವಚನ ನೀಡುವರು. ಬಳಿಕ ಡಾ.ಫಾಝಿಲ್ ರಝ್ವಿ ಕಾವಲ್ ಕಟ್ಟೆ ನೇತೃತ್ವದಲ್ಲಿ ಜಲಾಲಿಯ್ಯ ದ್ಸಿಕ್ರ್ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story