ಬೊಂದೇಲ್ ಲಾಫ್ಟರ್ ಕ್ಲಬ್ನ 5,000ನೇ ಕಾರ್ಯಕ್ರಮ
ಮಂಗಳೂರು, ಅ.4: ಜಾನ್ ಬಿ.ಮೊಂತೆರೊ 2002ರಲ್ಲಿ ಆರಂಭಿಸಿದ ಬೊಂದೇಲ್ ಲಾಫ್ಟರ್ ಕ್ಲಬ್ನ 5,000ನೇ ಕಾರ್ಯಕ್ರಮ ಇತ್ತೀಚೆಗೆ ಬೊಂದೇಲ್ನ ಪಿಡಬ್ಲುಡಿ ಮೈದಾನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕುಟುಂಬ ವೈದ್ಯ ಡಾ.ರಾಮಚಂದ್ರ ರಾವ್, ಮಾತನಾಡಿ ಇಂತಹ ಲಾಫ್ಟರ್ ಕ್ಲಬ್ಗಳ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಸ್ಥಾಪಕ ಜಾನ್ ಮೊಂತೆರೊ ಮಾತನಾಡಿ, ಸ್ಥಳೀಯ ಮರಾಠ ಸಂಘದ ಸಮುದಾಯ ಭವನದ ಸಹಕಾರದಿಂದ ಬೊಂದೇಲ್ ಲಾಫ್ಟರ್ ಕ್ಲಬ್ ಎಲ್ಲಾ ಋತುಮಾನಗಳಲ್ಲೂ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ ಎಂದರು.
ಬಳಿಕ ವ್ಯಾಯಾಮ ಹಾಗೂ ಲಾಫ್ಟರ್ ಅನುಕ್ರಮಗಳನ್ನು ನಿರ್ವಹಿಸಲಾಯಿತು.
ಕ್ಲಬ್ ಸಂಸ್ಥಾಪಕ ಸದಸ್ಯ ಪ್ರೊ. ಖಾಲಿದ್ ವಂದಿಸಿದರು.
Next Story