ಕಾಸರಗೋಡು: ಗುಡುಗು ಮಿಂಚು ಸಹಿತ ಭಾರೀ ಮಳೆ
ಕುಸಿದುಬಿದ್ದ ಮೊಬೈಲ್ ಟವರ್
ಕಾಸರಗೋಡು, ಅ. 4: ಜಿಲ್ಲೆಯ ಹಲವೆಡೆ ಇಂದು ಸಂಜೆ ಗುಡುಗು ಮಿಂಚು ಸಹಿತ ಭಾರೀ ಮಳೆ ಜೊತೆಗೆ ಬೀಸಿದ ಸುಂಟರ ಗಾಳಿಗೆ ಭಾರೀ ಹಾನಿ ಉಂಟಾಗಿದೆ. ನಗರದ ಹೊಸ ಬಸ್ಸು ನಿಲ್ದಾಣ ಪರಿಸರದಲ್ಲಿ ಹಲವು ಮಳಿಗೆಗಳ ಮೇಲ್ಛಾವಣಿ ಗಾಳಿಯ ರಭಸಕ್ಕೆ ಹಾರಿಹೋಗಿವೆ.
ಕಟ್ಟಡ ಮೇಲೆ ಅಳವಡಿಸಲಾಗಿದ್ದ ಮೊಬೈಲ್ ಟವರ್ ಧರಾಶಾಯಿಯಾಗಿದೆ.
ಹಲವೆಡೆ ಮರಗಳು ಮುರಿದು ಬಿದ್ದಿವೆ. ಕಾರು, ಬೈಕ್ ಸೇರಿದಂತೆ ಹಲವು ವಾಹನಗಳು ಜಖಂ ಗೊಂಡಿವೆ. ಕಟ್ಟಡದ ಕೆಳಗಡೆ ನಿಲುಗಡೆಗೊಳಿಸಲಾಗಿದ್ದ ವಾಹನಗಳ ಮೇಲೆ ಶೀಟ್ ಗಳು ಉರುಳಿ ಬಿದ್ದಿವೆ.
ಕಾಸರಗೋಡು ಹೊಸಬಸ್ಸು ನಿಲ್ದಾಣ ಸಮೀಪದ ಕೋಟೆಕಣಿ ರಸ್ತೆಯಲ್ಲಿ ಮರ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿತು. ಅಗ್ನಿ ಶಾಮಕ ದಳ ಸಿಬ್ಬಂದಿ ಮರ ತೆರವುಗೊಳಿಸಿದರು. ಅಮೈ ಕಾಲನಿಯಲ್ಲಿ ಹಲವಾರು ಮನೆಗಳಿಗೆ ಹಾನಿ ಉಂಟಾಗಿವೆ.
ಅರ್ಧ ಗಂಟೆಗೂ ಅಧಿಕ ಸಮಯ ಮಳೆ ಜೊತೆ ಗಾಳಿ ಅಬ್ಬರಿಸಿದ್ದು, ಜಿಲ್ಲೆಯ ಇತರ ಕಡೆಗಳಲ್ಲೂ ನಾಶ ನಷ್ಟ ಉಂಟಾದ ಬಗ್ಗೆಯೂ ವರದಿಯಾಗಿದೆ.
Next Story