ಮಂಗಳೂರು: ಮಹಿಳೆ ನಾಪತ್ತೆ
ಮಂಗಳೂರು, ಅ.4: ನಗರದ ಬೋಳಾರ ಫ್ಲಾಟ್ನಲ್ಲಿದ್ದ ಮಹಿಳೆಯೊಬ್ಬರು ನಾಪತ್ತೆಯಾದ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಯಿಶಾ ನಿಲೋರ್ (22) ನಾಪತ್ತೆಯಾದವರು.
ಅ.3ರಂದು ಬೆಳಗ್ಗೆ 11ಗಂಟೆಯಿಂದ ನಾಪತ್ತೆಯಾಗಿದ್ದಾರೆ. ಇವರನ್ನು ಸಂಬಂಧಿಕ ಮನೆ ಸೇರಿದಂತೆ ಇತರ ಕಡೆಗಳಲ್ಲಿ ಹುಡುಕಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಅವರ ಪತಿ ಮುಹಮ್ಮದ್ ಟಿ. ಬಂದರು ಠಾಣೆಗೆ ದೂರು ನೀಡಿದ್ದಾರೆ.
ಚಹರೆ: 5.7 ಅಡಿ ಎತ್ತರ, ಗೋಧಿ ಮೈಬಣ್ಣ, ದೃಢಕಾಯ ಶರೀರ, ಕುತ್ತಿಗೆಯಲ್ಲಿ ಕಪ್ಪು ಮಚ್ಚೆ, ನೀಲಿ ಬಣ್ಣದ ಚೂಡಿದಾರ್ ಮತ್ತು ಕಪ್ಪು ಬಣ್ಣದ ಬುರ್ಖಾ ಧರಿಸಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ಮಲೆಯಾಳಂ, ಬ್ಯಾರಿ ಭಾಷೆ ಮಾತನಾಡುತ್ತಾರೆ.
Next Story