ಉಡುಪಿ: ದಫನ ಭೂಮಿಗಳ ಕುರಿತು ಮಾಹಿತಿ
ಉಡುಪಿ, ಅ.5: ಉಡುಪಿ ಜಿಲ್ಲೆಯ ಪ್ರತಿಯೊಂದು ಗ್ರಾಮಗಳಲ್ಲಿರುವ ಮಸೀದಿಗೆ ಸಂಬಂಧಪಟ್ಟ ಧಪನ ಭೂಮಿಯ ಕುರಿತು ಮಾಹಿತಿಗಳನ್ನು ಉಡುಪಿ ಜಿಲ್ಲಾ ವಕ್ಫ್ ಸಲಹಾ ಮಂಡಳಿಯಿಂದ ಸಂಗ್ರಹಿಸಲಾಗುತ್ತಿದೆ.
ಮಸೀದಿಗೆ ದಫನ ಭೂಮಿ ಇದೆಯೊ, ಇಲ್ಲವೊ ಮತ್ತು ದಫನ ಭೂಮಿ ಇದ್ದರೂ ಸೂಕ್ತ ದಾಖಲೆ ಪತ್ರಗಳಿಲ್ಲದ ಮಸೀದಿಗಳ ಹೆಸರು ಮತ್ತು ವಿಳಾಸ, ಗ್ರಾಮ, ಸರ್ವೆ ನಂಬರ್ ಇತ್ಯಾದಿ ಮಾಹಿತಿಯನ್ನು ಜಿಲ್ಲಾ ವಕ್ಫ್ ಕಚೇರಿಗೆ ಕಳುಹಿಸಬೇಕು.
ಹೆಚ್ಚಿನ ಮಾಹಿತಿಗಾಗಿ ವಕ್ಫ್ ಕಚೇರಿಯ ದೂರವಾಣಿ ಸಂಖ್ಯೆ 0820-2575803ನ್ನು ಸಂಪರ್ಕಿಸುವಂತೆ ಸಮಿತಿಯ ಅಧ್ಯಕ್ಷ ಹಾಜಿ ಕೆ.ಪಿ. ಇಬ್ರಾಹಿಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story