ಅ.7ರಿಂದ ಪಿಲಿಕುಳ ತಾರಾಲಯದಲ್ಲಿ ಹೊಸ ಪ್ರದರ್ಶನ
ಮಂಗಳೂರು, ಅ.7: ಪಿಲಿಕುಳದ ಸ್ವಾಮಿ ವಿವೇಕಾನಂದ ತಾರಾಲಯದಲ್ಲಿ ಜಗತ್ತಿನ ನಾನಾ ರಹಸ್ಯಗಳು, ಬಾಹ್ಯಾಕಾಶದ ರಹಸ್ಯಗಳನ್ನು ಉಪಗ್ರಹದ ಮೂಲಕ ತಿಳಿಯುವ ‘ಯಂತ್ರಮಾನವರ ಅನ್ವೇಷಣೆ’ ಎಂಬ 3ಡಿ ಪ್ರದರ್ಶನವು ಅ.7ರಿಂದ ನಡೆಯಲಿದೆ.
ರವಿವಾರ, ಮಂಗಳವಾರ, ಗುರುವಾರ, ಶನಿವಾರ ಕಾಣದ ಜಗತ್ತಿನ ರಹಸ್ಯಗಳು ಮತ್ತು ಸೋಮವಾರ ಬುಧವಾರ, ಶುಕ್ರವಾರ ಬಾಹ್ಯಾಕಾಶದ ರಹಸ್ಯಗಳನ್ನು ಉಪಗ್ರಹದ ಮೂಲಕ ತಿಳಿಯಬಹುದಾಗಿದೆ.
ಸಂದರ್ಶಕರು ಬುಕ್ ಮೈ ಶೋ ತಂತ್ರಾಂಶದ ಮೂಲಕ ಸೀಟುಗಳನ್ನು ಕಾದಿರಿಸಬಹುದು. ಶಾಲಾ-ಕಾಲೇಜುಗಳ ಬೇಡಿಕೆಗೆ ಅನುಗುಣವಾಗಿ ಕನ್ನಡದಲ್ಲಿ ಮತ್ತು ರಜಾದಿನಗಳಲ್ಲಿ ಹೆಚ್ಚುವರಿ ಪ್ರದರ್ಶನಗಳು ನಡೆಯಲಿದೆ.
ದಸರಾ ಪ್ರಯುಕ್ತ ಪಿಲಿಕುಳದ ಎಲ್ಲಾ ಆಕರ್ಷಣೆಗಳು ಅ.8 ಮತ್ತು ಅ.15ರ ಸೋಮವಾರ ಕೂಡಾ ಇತರ ದಿನಗಳಂತೆ ತೆರೆದಿರುತ್ತದೆ ಎಂದು ಪ್ರಕಟನೆ ತಿಳಿಸಿದೆ.
Next Story