ಬ್ರಹ್ಮಾವರ: ಮುಸ್ಲಿಮ್ ಒಕ್ಕೂಟದ ಪದಾಧಿಕಾರಿಗಳ ಆಯ್ಕೆ
ಇಬ್ರಾಹಿಂ
ಬ್ರಹ್ಮಾವರ, ಅ.5: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಬ್ರಹ್ಮಾವರ ತಾಲೂಕು ಅಧ್ಯಕ್ಷರಾಗಿ ಇಬ್ರಾಹಿಂ ಕೋಟ ಆಯ್ಕೆಯಾಗಿದ್ದಾರೆ.
ಒಕ್ಕೂಟದ ಜಿಲ್ಲಾಧ್ಯಕ್ಷ ಯಾಸೀನ್ ಮಲ್ಪೆ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಇಕ್ಬಾಲ್ ಕುಂಜಾಲು, ಕಾರ್ಯದರ್ಶಿಯಾಗಿ ತಾಜುದ್ದೀನ್ ಇಬ್ರಾಹಿಂ ಬ್ರಹ್ಮಾವರ, ಜತೆ ಕಾರ್ಯದರ್ಶಿಯಾಗಿ ಅಬ್ದುರ್ರಹ್ಮಾನ್ ಹಂಗಾರಕಟ್ಟೆ, ಕೋಶಾಧಿಕಾರಿಯಾಗಿ ರೆಹಮತುಲ್ಲಾ ಸಾಸ್ತಾನ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಮುಹಮ್ಮದ್ ಇಲ್ಯಾಸ್ ಸಾಸ್ತಾನ, ಕೆ.ಎಂ.ಮುಹಮ್ಮದ್ ಬ್ರಹ್ಮಾವರ, ಜಿ.ಎಂ.ಶರೀಫ್ ಕೋಟ, ಅಸ್ಲಾಮ್ ಹೈಕಾಡಿ, ಜಮಾಲುದ್ದೀನ್ ಶೇಕ್ ಉಪ್ಪಿನಕೋಟೆ, ಸಯ್ಯದ್ ಅಝೀಮ್ ಬ್ರಹ್ಮಾವರ, ಕೆ.ಪಿ.ಇಬ್ರಾಹಿಂ ಮಟಪಾಡಿ, ಆಲಂ ರಝಾಕ್ ಬ್ರಹ್ಮಾವರ, ಉಮರ್ ಫಾರೂಕ್ ಬ್ರಹ್ಮಾವರ, ಶೇಕ್ ಮುಹಮ್ಮದ್ ಸಿರಾಜ್ ಉಪ್ಪಿನಕೋಟೆ, ಎಂ.ಜಮಾಲ್ ಹೈದರ್ ಇಂದಿರಾನಗರ, ಅಲ್ತಾಫ್ ಮಟಪಾಡಿ, ಅಬ್ದುಲ್ ಶುಕೂರ್ ಹೊನ್ನಾಳ, ದಾವೂದ್ ಬಿ.ಕೆ.ಕೋಟ ಪಡು ಕೆರೆ, ಸುಬಾನ್ ಹೊನ್ನಾಳ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎ.ಮೌಲಾ, ಸಹಕಾರ್ಯ ದರ್ಶಿ ಅಬ್ದುಲ್ ಅಝೀಝ್ ಉದ್ಯಾವರ, ಜತೆ ಕೋಶಾಧಿಕಾರಿ ಕಾಸಿಂ ಬಾರಕೂರು ಹಾಜರಿದ್ದರು.