ವಿದ್ಯುತ್ ಕಂಬಕ್ಕೆ ಲಾರಿ ಢಿಕ್ಕಿ; ಹಾನಿ
ಮಂಗಳೂರು, ಅ.5: ವಿದ್ಯುತ್ ಕಂಬಕ್ಕೆ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಮೆಸ್ಕಾಂಗೆ ಸಾವಿರಾರು ರೂ. ನಷ್ಟ ಉಂಟಾದ ಘಟನೆ ನಗರದ ದಕ್ಷಿಣ ದಕ್ಕೆಯ ಬಳಿ ಶುಕ್ರವಾರ ನಡೆಸಿದೆ.
ದಕ್ಕೆಯ ಭಾರತೀಯ ಶೌಚಾಲಯ ಮತ್ತು ಸ್ನಾನದ ಗೃಹ ಕಟ್ಟಡದ ಎದುರು ಅಳವಡಿಸಲಾಗಿದ್ದ ಮೆಸ್ಕಾಂಗೆ ಸೇರಿದ ವಿದ್ಯುತ್ ಕಂಬಕ್ಕೆ ಲಾರಿಯೊಂದು ಢಿಕ್ಕಿ ಹೊಡೆದಿದೆ. ಪರಿಣಾಮ ವಿದ್ಯುತ್ ಕಂಬ ಮುರಿದು ಬಿದ್ದು 65,860 ರೂ. ಹಾನಿ ಸಂಭವಿಸಿದೆ.
ಈ ಕುರಿತು ನಗರ ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story