ತರಕಾರಿ ವ್ಯಾಪಾರಿ ನಾಪತ್ತೆ
ಮಂಗಳೂರು, ಅ.5: ಬಲ್ಮಠ ನಿವಾಸಿ, ಜಪ್ಪು ನಂದಿಗುಡ್ಡೆಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ ಮುಹಮ್ಮದ್ ಜಬೀವುಲ್ಲಾ (31) ಸೆ.29ರಿಂದ ಕಾಣೆಯಾಗಿದ್ದಾರೆ.
ಬಲ್ಮಠದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಅವರು, ಸೆ.29ರಂದು ಅಂಗಡಿಗೆ ಹೋಗದೆ ಮನೆಯಲ್ಲಿಯೇ ಇದ್ದು, ಮಧ್ಯಾಹ್ನ 3 ಗಂಟೆಗೆ ಮೊಬೈಲ್ ಮನೆಯಲ್ಲಿಯೇ ಬಿಟ್ಟು ಹೊರಗೆ ಹೋದವರು ವಾಪಸಾಗದೆ ನಾಪತ್ತೆಯಾಗಿದ್ದಾರೆ.
ಚಹರೆ: 5.4 ಅಡಿ ಎತ್ತರ, ಗೋಧಿ ಮೈಬಣ್ಣ, ಗ್ರೇ ಬಣ್ಣದ ಶರ್ಟ್ ಮತ್ತು ನೀಲಿ ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ. ಕನ್ನಡ ಮತ್ತು ಉರ್ದು ಭಾಷೆ ಮಾತನಾಡುತ್ತಾರೆ. ವ್ಯಕ್ತಿ ಪತ್ತೆಯಾದಲ್ಲಿ ಕದ್ರಿ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಪ್ರಕಟನೆ ತಿಳಿಸಿದೆ.
Next Story