ಕಕ್ಕಿಂಜೆ: ಎಟಿಎಂ ದರೋಡೆಗೆ ವಿಫಲ ಯತ್ನ
ಕೋಳಿ ಅಂಗಡಿ, ಗೂಡಂಗಡಿಗಳಿಂದ ಕಳವು
ಬೆಳ್ತಂಗಡಿ, ಅ.6: ಕಕ್ಕಿಂಜೆ ಪೇಟೆಯಲ್ಲಿರುವ ಸಿಂಡಿಕೇಟ್ ಬ್ಯಾಂಕಿನ ಎ.ಟಿ.ಎಂಗೆ ನುಗ್ಗಿದ ಕಳ್ಳರು ಎಟಿಎಂ ಒಡೆಯಲು ಪ್ರಯತ್ನಿಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಎಟಿಎಂನೊಳಗೆ ನುಗ್ಗಿ ಅದನ್ನು ಒಡೆಯಲು ವಿಫಲ ಯತ್ನ ಮಾಡಲಾಗಿದೆ. ಅಲ್ಲದೆ ಸಮೀಪವೇ ಇರುವ ಕೋಳಿ ಅಂಗಡಿಗೆ ನುಗ್ಗಿರುವ ಕಳ್ಳರು ಅಲ್ಲಿದ್ದ ಕಾಣಿಕೆ ಡಬ್ಬಿ ಹಾಗೂ ಚಿಲ್ಲರೆ ಹಣವನ್ನು ಕದ್ದೊಯ್ದಿದ್ದಾರೆ. ಸಮೀಪದ ಗೂಡಂಗಡಿಯಿಂದಲೂ ಕಳವು ನಡೆದಿದೆ.
ಇಂದು ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕಾಗಮಿಸಿದ ಧರ್ಮಸ್ಥಳ ಪೊಲೀಸರು, ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಎಟಿಎಂನ ಸಿಸಿಟಿವಿ ಕ್ಯಾಮೆರಾದಲ್ಲಿ ಕೃತ್ಯ ದಾಖಲಾಗಿರುವುದಾಗಿ ತಿಳಿದುಬಂದಿದ್ದು, ಪೊಲೀಸರು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
Next Story