ಮಲ್ಲೂರು ಬದ್ರಿಯಾ ಮಸೀದಿಗೆ ಶಾಸಕ ಲಾಲಾಜಿ ಆರ್. ಮೆಂಡನ್ ಭೇಟಿ
ಕಾಪು, ಅ.6: ಮಜೂರು ಮಲ್ಲೂರಿನ ಬದ್ರಿಯಾ ಜುಮಾ ಮಸೀದಿಗೆ ಇತ್ತೀಚೆಗೆ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಭೇಟಿ ನೀಡಿದರು.
ಈ ಸಂದರ್ಭ ಶಾಸಕರು ಮಸೀದಿಯ ಮಿಂಬರ್ ಮೆಹಾರಬ್ನ ಪುನರ್ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದರು. ಮಸೀದಿಗೆ ಸರಕಾರದ ವತಿಯಿಂದ ಹಾಗೂ ವೈಯಕ್ತಿಕವಾಗಿ ಸಹಾಯ, ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಮಸೀದಿಯ ಅಧ್ಯಕ್ಷ ಎಂ.ಎಚ್.ಅಬ್ದುಲ್ ಹಮೀದ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಫಾರೂಕ್ ಚಂದ್ರ ನಗರ, ಕಾರ್ಯದರ್ಶಿ ಶಂಸುದ್ದೀನ್ ಕರಂದಾಡಿ, ಕೋಶಾಧಿಕಾರಿ ಪಿ.ಎಂ.ಇಬ್ರಾಹೀಂ, ಉಪಾಧ್ಯಕ್ಷರಾದ ಅಬ್ದುಲ್ ರಝಾಕ್ ಕೊವ್ವೆಲ್ತೋಟ, ಅಝೀಝ್ ಮಜೂರು, ಜಮಾಅತ್ ಸದಸ್ಯರು ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
ಮಸೀದಿಯ ಖತೀಬ್ ಅಬ್ದುರ್ರಶೀದ್ ಸಖಾಫಿ ಸ್ವಾಗತಿಸಿ, ವಂದಿಸಿದರು.
Next Story