ಕೋಮುವಾದಕ್ಕೆ ಸಮಾಜವಾದವೇ ಮದ್ದು
ಹಸನ್ ನಯೀಂ ಸುರಕೋಡ
ಸಮಾಜವಾದ, ಮಾರ್ಕ್ಸ್‌ವಾದ, ಗಾಂಧಿವಾದ, ಅಂಬೇಡ್ಕರ್ ವಾದಗಳನ್ನು ಪೊಲಿಟಿಕಲ್ ಪಾರ್ಟ್‌ನಲ್ಲಿ ಹುಡುಕದೆ ಸಮಾಜದಲ್ಲಿ ಹುಡುಕಬೇಕು. ಹಣ್ಣುಹಣ್ಣು ಮುದುಕರನ್ನು ಜೀವದ ಹಂಗುತೊರೆದು ರಕ್ಷಿಸಿದ ನನ್ನ ಗೆಳೆಯರೊಬ್ಬರು ಆ ಹೃದಯ ವಿದ್ರಾವಕ ಘಟನೆಯನ್ನು ನಿರೂಪಿಸಿದಾಗ ಸಮೂಹ ಸನ್ನಿ ಸೃಷ್ಟಿಸಿ ಒಂದು ಕೋಮಿನ ಜನರಿಗೆ ‘ಪಾಠ ಕಲಿಸಿಯೂ ನಾವು ಸುರಕ್ಷಿತವಾಗಿರಬಹುದು’ ಎನ್ನುವ ಹುನ್ನಾರ ಎಷ್ಟು ಅಮಾನುಷವಾದುದು ಎನಿಸಿತು. ಮರುದಿನ ಮಸೀದಿಯ ಗೋಡೆಗಳಿಗೆ ಸುಣ್ಣ ಸಾರಿಸಿದ್ದರಿಂದ ಗೋಡೆಯ ಮೇಲಿನ ರಕ್ತದ ಕಲೆಗಳು ಮಾಯವಾಗಿದ್ದವು. ಆದರೆ ಮನಸ್ಸಿಗಾದ ಗಾಯದ ಗುರುತುಗಳು ಮಾಯಲಾರವೇನೋ ಅನ್ನಿಸಿತು.
ಇದೇ ಸೆಪ್ಟಂಬರ್ 23 ರಂದು ಲಡಾಯಿ, ಮುಸ್ಲಿಂ ಚಿಂತಕರ ಚಾವಡಿ, ದಲಿತ ಕಲಾ ಮಂಡಳಿ, ಜನಮುಖಿ, ಸಮುದಾಯ, ಧ್ವನಿ, ಶಾಲ್ಮಲ, ಅನನ್ಯ, ಅಕ್ಷರ ಮೊದಲಾದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆಗಳು ಹಸನ್ ನಯೀಂ ಸುರಕೋಡ ಅವರಿಗೆ ಧಾರವಾಡದಲ್ಲಿ ಆತ್ಮೀಯವಾದ ಅಭಿನಂದನೆಯನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಸುರಕೋಡರ ಬದುಕು ಬರಹದ ಬಗೆಗೆ ಆಪ್ತ ಸಂವಾದಗಳು ನಡೆದವು. ಸ್ವತಃ ಸುರಕೋಡರು ‘ನಾನು ವಿದ್ವಾಂಸರು ಇರುವ ಮನೆಯಲ್ಲಿ ಹುಟ್ಟಲಿಲ್ಲ, ಮನುಷ್ಯರಿರುವ ಮನೆಯಲ್ಲಿ ಹುಟ್ಟಿದೆ, ನನಗಷ್ಟು ಸಾಕು ಎಂದು ಮಾರ್ಮಿಕವಾಗಿ ನುಡಿದರು. ಸುರಕೋಡರು ಸಾದತ್ ಹಸನ್ ಮಂಟೋ, ಪೈಝ್ ಅಹ್ಮದ್ ಪೈಝ್, ಸಾಹಿರ್ ಲೂಧಿಯಾನ್ವಿ, ಅಮೃತಾ ಪ್ರೀತಂ, ಪಾಕಿಸ್ತಾನಿ ಕವಯಿತ್ರಿ ಸಾರಾ ಶಗುಪ್ತಾ, ಅಸ್ಗರ್ ಅಲಿ ಇಂಜಿನಿಯರ್, ಲೋಹಿಯಾ, ಕಿಷನ್ ಪಟ್ನಾಯಕ್, ಮಧುಲಿಮಯೆ, ಕರ್ಪೂರಿ ಠಾಕೂರ್, ವಿಭೂತಿ ನಾರಾಯಣರಾವ್ ಮೊದಲಾದವರನ್ನು ಕನ್ನಡದ ಮನಸ್ಸುಗಳಿಗೆ ಕಸಿ ಮಾಡಿದವರು. ಹೀಗೆ ಅನುವಾದ ಮಾಡುತ್ತಲೆ, ಕನ್ನಡದ ಸಂದರ್ಭದಲ್ಲಿ ಸುರಕೋಡರ ಅನುವಾದ ಮೀಮಾಂಸೆಯೊಂದು ರೂಪುಗೊಂಡಿದೆ. ಲೋಹಿಯಾ, ಮಾಂಟೋ, ಸಾಹಿರ್, ಅಮೃತ ಪ್ರೀತಮ್, ಪೈಝ್ ಅವರನ್ನು ಸುರಕೋಡರು ಕೇವಲ ಅನುವಾದಿಸುವುದಿಲ್ಲ, ಬದಲಾಗಿ ಇವರುಗಳ ಸಂಗಾತಿಯೂ ಆಗುತ್ತಾರೆ. ಈ ಸಾಂಗತ್ಯವನ್ನು ಓದುಗರಿಗೂ ದಾಟಿಸುತ್ತಾರೆ. ಈ ಪ್ರಕ್ರಿಯೆ ಎಲ್ಲಾ ಅನುವಾದಕರಿಗೂ ಸಾಧ್ಯವಾಗದ ಒಂದು ವಿಶಿಷ್ಟತೆ. ಹಾಗಾಗಿ ಸುರಕೋಡರನ್ನು ವಿಶ್ಲೇಷಿಸುವಾಗ ನಮ್ಮೂರಿನ ಪೂಜಾರ ಭೀಮಜ್ಜ ನೆನಪಾಗುತ್ತಾನೆ. ಆ ಅಜ್ಜ ಐದಾರು ವರ್ಷಗಳ ಹಿಂದೆ ತೀರಿಕೊಂಡರು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಯಾವುದೇ ಕಾಯಿಲೆಗೆ ನಾಟಿ ಔಷಧ ಕೊಡುತ್ತಿದ್ದ. ಆ ಅಜ್ಜನ ಹತ್ರ ತೀರಾ ಸಾಮಾನ್ಯವಾದ ನೆಗಡಿ ಜ್ವರ ಮುಂತಾದ ಬಹಳಷ್ಟು ಕಾಯಿಲೆಗಳು ವಾಸಿ ಆಗ್ತಿದ್ವು. ಅಜ್ಜನ್ನ ಮೀರಿದ ಮೇಲೆ ಯಾವ ಡಾಕ್ಟರ್ ಹತ್ರ ಕರ್ಕೊಂಡೋಗಬೇಕು, ಯಾವ ಆಸ್ಪತ್ರೆಗೆ ಕರಕೊಂಡೋದ್ರೆ ಒಳ್ಳೇದು ಅಂತ ಅಜ್ಜನೇ ಹೇಳಿ ಕಳಿಸುತ್ತಿದ್ದ. ಹೀಗಾಗಿ ಅಜ್ಜ ಜಾತ್ಯತೀತವಾಗಿ ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ. ಆ ಅಜ್ಜನ ಗುಣ ಏನಂದ್ರೆ, ಯಾವುದೇ ನಾಟಿ ಔಷಧ ಕೊಟ್ರೂ ಆ ಔಷಧಿಯನ್ನು ತಾನು ಮೊದಲು ಪರೀಕ್ಷೆ ಮಾಡಿಕೊಂಡು, ಆ ನಂತರ ಬೇರೆಯವರಿಗೆ ಕೊಡುತ್ತಿದ್ದ. ಹೀಗೆ ಅಜ್ಜ ತನ್ನ ಕಾಯಿಲೆ ವಾಸಿಯಾದ್ರೆ ಅದು ಊರಿನವರ ಕಾಯಿಲೇನೂ ವಾಸಿ ಮಾಡುತ್ತೆ ಅಂತ ನಂಬಿದ್ದ. ಹಸನ್ ನಯೀಂ ಸುರಕೋಡರು ಕೂಡ ಈ ಅಜ್ಜನಂತೆಯೇ ಕಾಣುತ್ತಾರೆ. ಯಾಕಂದ್ರೆ, ಇವರು ಕೂಡ ಸಮಾಜದ ಕಾಯಿಲೆಗೆ ಯಾವ ಮದ್ದು ಕೊಡಬೇಕು ಎನ್ನುವುದನ್ನು ಸ್ವತಃ ತಾನು ತೆಗೆದುಕೊಂಡು ನಂತರ ಸಮಾಜಕ್ಕೆ ಕೊಡುವ ಹಾಗೆ, ಸ್ವತಃ ತಾನು ಓದಿ, ಇಂತಹ ಓದಿಗೆ ಸಮಾಜದ ಗಾಯಗಳನ್ನು ವಾಸಿ ಮಾಡುವ ಶಕ್ತಿ ಇದೆ ಎಂದು ಭಾವಿಸಿ ಅಂತಹ ಪಠ್ಯಗಳನ್ನು ಅನುವಾದಿಸಿದ್ದಾರೆ. ಹಾಗಾಗಿ ಕನ್ನಡದ ವೈಚಾರಿಕತೆಯನ್ನು ರೂಪಿಸಿದ ಹಲವು ವೈದ್ಯರುಗಳಲ್ಲಿ ಸುರಕೋಡರು ಒಬ್ಬರು. ಸೂಫಿ ಸಿದ್ಧಾಂತದ ಅಗತ್ಯವನ್ನು ಮತ್ತು ಕ್ರಾಂತಿ ಮತ್ತು ಸಮಾನತೆಯನ್ನಾಧರಿಸಿದ ಸಮಾಜದ ಅನಿವಾರ್ಯವನ್ನು ಎತ್ತಿ ಹಿಡಿಯುವ ಕಾರಣಕ್ಕೆ ಪೈಝ್ ಸುರಕೋಡರಿಗೆ ಹತ್ತಿರವಾದಂತೆ ಸುರಕೋಡರು ಕೂಡ ನಮಗೆ ಈ ಕಾರಣಕ್ಕೆ ಆಪ್ತರಾಗುತ್ತಾರೆ. ಸುರಕೋಡರು ಸ್ವಂತ ಬರಹ ಮಾಡಿದ್ದು ಕಡಿಮೆ. ಇದು ಎಲ್ಲರನ್ನೂ ಕಾಡಿದ ಪ್ರಶ್ನೆ. ಲೋಹಿಯಾ ತಿಳಿವಿನ ತೀವ್ರತೆಯನ್ನು ಹಿಡಿಯುತ್ತಲೇ ತನ್ನ ತಿಳಿವನ್ನೂ ಬೆರೆಸೋಣ ಅಂದುಕೊಂಡಂತಿದೆ. ಗಾಢ ಪ್ರೀತಿಯನ್ನು ಹೇಳಬೇಕೆಂದಾಗ ಪೈಝ್ ಅಹಮದ್ ಫೈಝ್ ದೊರೆತಿದ್ದಾನೆ. ತನ್ನ ಪ್ರೇಮದ ಆಖ್ಯಾನಕ್ಕೆ ಅಮೃತಾ ಪ್ರೀತಮ್ ಮಾಧ್ಯಮವಾಗಿದ್ದಾಳೆ. ಹಾಗಾಗಿ ತನ್ನ ಮಾತು, ಕಾಳಜಿ, ಆತಂಕ, ಕನಸು, ನೋವು, ಪ್ರೀತಿ ಎಲ್ಲವನ್ನೂ ದಾಟಿಸಲು ಅವರು ಲೋಹಿಯಾ, ಅಸ್ಗರ್ ಅಲಿ, ಸಾಹಿರ್, ಅಮೃತಾ, ಪೈಝ್, ಮೊದಲಾದವರನ್ನು ಮಾಧ್ಯಮವಾಗಿಸಿಕೊಂಡಿದ್ದಾರೆ ಅನ್ನಿಸುತ್ತದೆ.
ಕೋಮುವಾದಕ್ಕೆ ಸಮಾಜವಾದವೇ ಮದ್ದು
ಬಸವರಾಜ ಸೂಳಿಬಾವಿಯವರು ‘ಸುರಕೋಡ ಅವರನ್ನು ಸಂದರ್ಶಿಸುವ ಬಗ್ಗೆ ಹೇಳಿದ್ದರ ಕಾರಣ ಈಚಿನ ನನ್ನ ಮುಹರ್ರಂ ತಿರುಗಾಟದಲ್ಲಿ ಗೆಳೆಯ ಗೋಪಾಲಕೃಷ್ಣನ ಜತೆ ಒಂದಿನ ರಾಮದುರ್ಗಕ್ಕೆ ಹೋದೆ. ಅವರ ಆಪ್ತ ಒಡನಾಟದಲ್ಲಿ ಒಂದಿಡೀ ದಿನ ಕಳೆದೆವು. ನಾಲ್ಕೈದು ತಾಸು ಸತತ ಮಾತುಕತೆ, ನಗು, ವ್ಯಂಗ್ಯ, ವಿಷಾದ, ಕನಸು ಎಲ್ಲವೂ ಬೆರೆತವು. ಈ ಮಾತುಕತೆಯ ಕೆಲವು ಆಯ್ದ ಭಾಗವನ್ನು ಇಲ್ಲಿ ಹಂಚಿಕೊಂಡಿರುವೆ.
►ಸರ್ ಬಾಲ್ಯದ ಬಗ್ಗೆ ಹೇಳಿ?
-ಸುರಕೋಡ: ಬಾಲ್ಯದಲ್ಲಿ ನನ್ನ ಅಜ್ಜ ಬಾಪೂ ಸಾಹೇಬ ನನ್ನನ್ನು ತುಂಬಾ ಪ್ರಭಾವಿಸಿದ್ರು. ಅವರು ಬಾಳ ಮುಕ್ತವಾಗಿದ್ರು, ಅವರದನ್ನು ಯಾರ ಮೇಲೂ ಹೇರತಿರಲಿಲ್ಲ.. ಒಂದು ರೀತೀಲಿ ಅವರ ಗುಣಗಳೆ ನನ್ನೊಳಗು ಬಂದ್ವು ಅನ್ಸುತ್ತೆ. ಎಸೆಸೆಲ್ಸಿಯಲ್ಲಿ 80 ಪರ್ಸೆಂಟ್ ತಗೊಂಡ್ ಮನಿಯಾಗ ಇದ್ದಾಗ ಪಿಯುಕ ಹಚ್ಚಿದವರ ಸಿ.ಎಸ್. ಕಡ್ಡೀಪುಡಿ ಅನ್ನೋ ಮೇಷ್ಟ್ರು. ಅವರು ನನಗೆ ಓದೋಕೆ ಬಾಳ ಸಹಾಯ ಮಾಡಿದ್ರು. ಡಿಗ್ರಿ ಮತ್ತು ಧಾರವಾಡದಲ್ಲಿ ಎಕನಾಮಿಕ್ಸ್ ಎಂ.ಎಗೆ ಸೇರಿಸಿದವರೇ ಅವರು. ಅವರನ್ನು ಮರೆಯಂಗಿಲ್ಲ.. ಆಗಲೆ ಮಾಂಟೋ ನನ್ನನ್ನು ಕಾಡಿದವ. ಡಿಗ್ರಿಗೆ ಬರೋಹೊತ್ತಿಗೆ ನಾನು ಮಾಂಟೋ ಬಗ್ಗೆ ಅಥಾರಿಟೇಟಿವ್ ಆಗಿ ಮಾತಾಡುವಷ್ಟು ಓದಿಕೊಂಡಿದ್ದೆ. ನಾನು ಪೋಯಟ್ರಿಗೆ ಹೆಚ್ಚು ಒತ್ತು ಕೊಡಲಿಲ್ಲ, ಕತೆ, ಕಾದಂಬರಿ, ವೈಚಾರಿಕ ಬರಹಗಳನ್ನು ಹೆಚ್ಚು ಹೆಚ್ಚು ಓದ್ತಾ ಇದ್ದೆ. ಎಂ.ಎ. ಇಕನಾಮಿಕ್ಸ್ ಮಾಡಿದ್ರು ನಾನು ಲೈಬ್ರರಿಯಾಗ ಬರಿ ಇಂಗ್ಲಿಷ್ ಮತ್ತು ಕನ್ನಡ ಲಿಟರೇಚರ್ ಕಡೆನೇ ಕೂತುಕೊಳ್ತಿದ್ದೆ. ಒಂದು ದಿನಾನೂ ಗಂಭೀರವಾಗಿ ಲೈಬ್ರರಿನಲ್ಲಿ ಇಕನಾಮಿಕ್ಸ್ ಬಗ್ಗೆ ರೆಫರ್ ಮಾಡಲಿಲ್ಲ.
►ವಿದ್ಯಾರ್ಥಿ ದೆಸೆಯಲ್ಲಿ ನಿಮ್ಮ ಆಸಕ್ತಿ ಕ್ಷೇತ್ರಗಳು ಸರ್?
-ಸುರಕೋಡ: ಸಿನೆಮಾ ಮತ್ತು ರಾಜಕೀಯ ಹುಚ್ಚು ಬಾಳ ಇತ್ತು. ಆಗ ಕನ್ನಡ ಪೇಪರದೊಳಗೆ ರಾಜಕೀಯ ವಿಷಯಗಳು ಹೆಚ್ಚು ಬರ್ತಾ ಇರಲಿಲ್ಲ. ಆಗ ಅದಕ್ಕಾಗಿ ಇಂಗ್ಲಿಷ್ ಪೇಪರ್ ಓದ್ತಾ ಇದ್ದೆ. ಅದರಲ್ಲಿ ಕರ್ನಾಟಕದ ಅಸೆಂಬ್ಲಿಯಲ್ಲಿ ಒಬ್ಬ ಹುಚ್ಚ ಇದಾನ, ಅವ ಹುಚ್ಚುಚ್ಚು ಮಾತಾಡ್ತಾನ ಅಂತ ಸುದ್ದಿ ಆಗ್ತಿತ್ತು. ಅವ ನನ್ನಂಥ ಹುಚ್ ಇರಬೇಕು ಅಂತ ಹುಡುಕಿದ್ರೆ ಆತ ಸಮಾಜವಾದಿ ಗೋಪಾಲಗೌಡ್ರು ಆಗಿದ್ದರು. ಆವಾಗ ಲೋಹಿಯಾ ಬಗ್ಗೆ ತಿಳಕಂಡೆ. ಅಲ್ಲಿಂದ ಲೋಹಿಯಾ ಬಗ್ಗೆ ಹುಚ್ ಹತ್ತಿತು..ಆ ನಂತರ ಲೋಹಿಯಾ ಬಗ್ಗೆ ಒಂದು ಸಣ್ಣ ರಿಪೋರ್ಟ್ ಬಂದ್ರು ಕಟ್ ಮಾಡಿ ಇಡ್ತಿದ್ದೆ..ಮುಂದೆ ಮುಂಗಾರು, ಸುದ್ದಿಸಂಗಾತಿಯಲ್ಲಿ ಕೆಲಸ ಮಾಡೋಕೆ ಈ ಓದು ಸಹಾಯಕ್ಕೆ ಬಂತು..
►ಮುಂಗಾರು, ಸುದ್ದಿಸಂಗಾತಿಯ ಕೆಲಸದ ಬಗ್ಗೆ ಹೇಳಿ..
-ಸುರಕೋಡ: ರಘುರಾಮಶೆಟ್ಟರ ಸಂಪಾದಕತ್ವದ ಮುಂಗಾರು ಕನ್ನಡ ಪತ್ರಿಕೋದ್ಯಮದ ಒಂದನೆಯ ಮೈಲುಗಲ್ಲು. ಕೆ.ಪುಟ್ಟಸ್ವಾಮಿ. ಎನ್.ಎಸ್.ಶಂಕರ್, ದಿನೇಶ್ ಅಮೀನ್ ಮಟ್ಟು, ರಾಮಮೂರ್ತಿ, ಕೇಶವ ಪ್ರಸಾದ್, ವಿ.ಮನೋಹರ್, ಮಂಗಳೂರು ವಿಜಯ, ಇಂದೂಧರ ಹೊನ್ನಾಪುರ ಮುಂತಾದವರ ಒಂದು ದೊಡ್ಡ ತಂಡವೇ ಇತ್ತು. ಎಲ್ಲರು ಪ್ರಾಮಿಸಿಂಗ್ ಪ್ರತಿಭೆೆಗಳು. ವಡ್ಡರ್ಸೆಯವರು ‘ನಾನು ಕಟ್ಟಿದ ಸಂಸ್ಥೆಯ ಒಳಗೆ ಪತ್ರಕರ್ತರು ಮಾನಗೇಡಿಯಾದ ದಿನ ಇದೇ ಸಂಸ್ಥೆಯ ಬಾಗಿಲಿಗೆ ನೇಣು ಹಾಕಿಕೊಳ್ಳುತ್ತೇನೆ ಎನ್ನುತ್ತಿದ್ದರು. ಮುಂಗಾರು ಕನ್ನಡದ ಪತ್ರಿಕೋದ್ಯಮದಲ್ಲಿ ಒಂದು ಸಂಚಲನ ಉಂಟುಮಾಡಿತು. ಬರುಬರುತ್ತಾ ವಡ್ಡರ್ಸೆಯವರಿಗೆ ಕಾಂಗ್ರೆಸ್, ಬಂಗಾರಪ್ಪನ ಒಲವು ಹೆಚ್ಚಾಗಿ ನಾವುಗಳು ಸಾಮೂಹಿಕವಾಗಿ ರಾಜೀನಾಮೆ ಕೊಟ್ವಿ. ಇದೇ ಟೀಂ ಮುಂದೆ ಸುದ್ದಿಸಂಗಾತಿ ಮಾಡಿತು. ಇಂದೂಧರ ಹೊನ್ನಾಪುರ ಸಂಪಾದಕರಾಗಿದ್ರು..ಈ ಎರಡೂ ಪತ್ರಿಕೆಯಲ್ಲಿ ಕೆಲಸ ಮಾಡಿದ್ದು ಕಡಿಮೆ ಸಮಯ ಆದರ ಕಲಿತಿದ್ದು ಬಾಳ. ಆ ನಂತರ ನಾನು ಪತ್ರಿಕೆಗಳ ಕಡಿಗೆ ತಲಿ ಹಾಕದೆ ರಾಮದುರ್ಗಕ್ಕೆ ಬಂದೆ. ಆ ನಂತರ ಒಂದು ಹತ್ತು ವರ್ಷ ಮಕ್ಕಳಿಗೆ ಇಂಗ್ಲಿಷ್ ಟೂಷನ್ ಹೇಳಿಕೊಟ್ಟೆ. ವಿದ್ಯಾರ್ಥಿಗಳ ಜತೆ ಕಳೆದ ಈ ದಿನಗಳು ನನ್ನ ಜೀವನದ ಅತ್ಯಮೂಲ್ಯ ಕ್ಷಣಗಳು.
►ಈ ಹೊತ್ತಿಗೆ ಸಮಾಜವಾದವನ್ನು ಹೇಗೆ ಅನ್ವಯಿಸ್ತೀರಿ?
-ಸುರಕೋಡ: ಕೋಮುವಾದಕ್ಕೆ ಸಮಾಜವಾದವೆ ಪರಿಹಾರ. ಸಮಾಜವಾದ ಅಂದ್ರೇನಿಲ್ಲ ‘ಸಮಸಮಾಜದ ಆಶಯ, ಹಂಗಾಗಿ ಇಲ್ಲಿ ಸೆಕ್ಟೇರಿಯನ್ ಚಿಂತನೆ ಬರೋದೆ ಇಲ್ಲ. ಇದರಿಂದಾಗಿ ಸಾಮರಸ್ಯಕ್ಕೆ ಹೆಚ್ಚು ಒತ್ತು ಕೊಡಬೇಕಾಗುತ್ತೆ. ಇದರಿಂದಾಗಿ ಈ ಹೊತ್ತಿನ ಕೋಮುವಾದಕ್ಕೆ ಸಮಾಜವಾದವೆ ಮದ್ದು ಅಂತ ಅನ್ನಿಸುತ್ತೆ. ಈಗ ಸಮಾಜವಾದ ತನ್ನನ್ನು ತಾನೆ ಬದಲಿಸಿಕೊಂಡು ಹಳೆಯ ಪೊರೆಗಳನ್ನ ಕಳಚಿಕೊಳ್ತಾ ಮುನ್ನಡೆಯ್ತಾ ಇದೆ..ಎಲ್ಲೈತಿ ನಿಮ್ಮ ಸಮಾಜವಾದ ಅಂತ ಕೇಳತಿರ್ತಾರ. ಅದು ಸಮಾಜದೊಳಗ ಐತಿ, ಆಲೋಚನ ಕ್ರಮದೊಳಗ ಐತಿ. ಕಾರ್ಲ್‌ಮಾರ್ಕ್ಸ್‌ಚಿಂತನೆಯೂ ಅಷ್ಟೆ. ಅದು ಸಮಾಜದೊಳಗ ಐತಿ..ಆದರ ಅದನ್ನ ನಾವು ರಾಜಕಿಯ ಪಾರ್ಟಿಯ ಒಳಗೆ ಹುಡುಕ್ತೀವಿ. ಮಾರ್ಕ್ಸ್ ಚಿಂತನೆ ಕಮ್ಯುನಿಸ್ಟ್ ಪಾರ್ಟಿಯೊಳಗ ಐತಿ ಅಂತ ಹುಡುಕ್ತೀವಿ. ಯಾವುದೇ ಸಿದ್ಧಾಂತ ಯಾವಾಗ ಸಾಂಸ್ಥಿಕ ರೂಪ ಪಡೀತೈತೋ ಆವಾಗ ಅದರ ಮೂಲ ಸತ್ವವನ್ನು ಕಳೆದುಕೊಳ್ಳುತ್ತೆ ಅನ್ನಿಸುತ್ತೆ. ಹಾಗಾಗಿ ಸಮಾಜವಾದ, ಮಾರ್ಕ್ಸ್‌ವಾದ, ಗಾಂಧಿವಾದ, ಅಂಬೇಡ್ಕರ್ ವಾದಗಳನ್ನು ಪೊಲಿಟಿಕಲ್ ಪಾರ್ಟಿನಲ್ಲಿ ಹುಡುಕದೆ ಸಮಾಜದಲ್ಲಿ ಹುಡುಕಬೇಕು.
►ಈಚೆಗೆ ಗಾಂಧಿ ಚಿಂತನೆ ಕಾಲದ ಅಗತ್ಯದಂತೆ ಮತ್ತೆ ಹೊಸ ರೂಪದಲ್ಲಿ ಮರಳಿ ಬರ್ತಿದೆ, ಸಮಾಜವಾದಿಯಾಗಿ ನೀವು ನಿಮ್ಮ ಮನಿಗೆ ‘ಬಾಪೂ ಅಂತ ಹೆಸರಿಟ್ಟಿದಿರಿ..
-ಸುರಕೋಡ: ಎಲ್ಲಿದೆ ಗಾಂಧಿವಾದ ಅಂತ ನನ್ನನ್ನ ಕೇಳತಿರ್ತಾರ. ಗಾಂಧಿವಾದ ಅಂದ್ರ ಏನೂ ಅಲ್ಲ.. ನಾನೇ ಗಾಂಧಿ, ನೀನೂ ಗಾಂಧಿ..ಇಷ್ಟು ಓಪನ್ ಇದೆ ಅದು. ಹಾಗಾಗಿ ನಾನು ಗಾಂಧಿಯಿಸಂ ಒಪ್ಪಿಕೊಳ್ತೀನಿ. ಮೊತ್ತಮೊದಲು ನನಗೆ ನಾನೇ ಟ್ರೂ ಆಗಬೇಕಲ್ಲ. ನೀವು ದೊಡ್ಡ ದೊಡ್ಡ ಗ್ರಂಥಗಳನ್ನು ಪ್ರಕಟಮಾಡಬಹುದು, ಆದರ ನಮಗೆ ನಾವೇ ಮೊದಲು ಟ್ರೂ ಆಗಬೇಕು. ನಿಮ್ಮ ಜೀವನ ನಿಮಗ ಒಂದು ದೊಡ್ಡ ಪ್ರಯೋಗಶಾಲೆ ಆಗಬೇಕು ಅಲ್ವಾ? ಅಷ್ಟೊಂದು ದೃಢತೆ ಬದ್ಧತೆ ಬೇಕಲ್ಲ..ಅಂಬೇಡ್ಕರ್‌ವಾದಿಗಳು ಗಾಂಧಿವಾದದ ಬಗ್ಗೆ ಮಿಸ್ ಅಂಡರ್‌ಸ್ಟಾಂಡಿಂಗ್ ಮಾಡ್ಕೊಂಡಿದಾರೆನೋ ಅನ್ಸುತ್ತೆ. ಗಾಂಧಿಯ ಮಾತು ಮತ್ ನಿಲುವುಗಳನ್ನು ಯಾವಾಗ ಯಾವ ಟೈಮಕ್ಕ ಹೇಳಿದ್ರು, ಆ ಸಂದರ್ಭ ಯಾವುದು ಅಂತ ನೋಡಬೇಕು ಅನಸ್ತದ. ಆರಂಭದಲ್ಲಿ ಗಾಂಧಿ ನಾನೊಬ್ಬ ಸನಾತನ ಹಿಂದೂ ಅಂತ ಹೇಳಿಕೊಳ್ಳತಾ ಇದ್ರು. ಟ್ರೂ ಹಿಮ್ ಸೆಲ್ಪ್, ಇದು ಬೇಕು. ಆ ನಂತರ ಗಾಂಧಿಯ ಒಳಗೆ ತುಂಬಾ ಬದಲಾವಣೆಗಳು ಆದ್ವು. ಅದನ್ನು ನಾವು ಗಮನಿಸಬೇಕು. ಒಬ್ರು ಕೇಳಿದ್ರು ಗಾಂಧಿ ಬಗ್ಗೆ ಪುಸ್ತಕ ತರಾಕತ್ತಿರಂತೆ, ನೀವು ಯಾವಾಗ ಗಾಂಧಿವಾದಿ ಆದ್ರಿ ಅಂತ..ನಾನಾಗ ಹೇಳಿದೆ ಗಾಂಧಿಯನ್ನ ಇಷ್ಟ ಪಡ್ತಿನೋ ಇಲ್ಲೋ, ನಾನು ಗಾಂಧಿ ಫಾಲೋಯರ್, ಗಾಂಧಿವಾದಿ ಅಂತ ಓಪನ್ನಾಗಿ ಡಿಕ್ಲೇರ್ ಮಾಡಲೇನು? ಮನೆ ಕಟ್ಟುವಾಗ ಮನೆಗೆ ಹೆಸರೇನು ಇಡಬೇಕು ಅಂತ ಪ್ರಶ್ನೆ ಬಂತು. ನಾನು ಮಹಾ ಅಡ್ನಾಡಿ ಅಂತ ನಮ್ ಮನೆಯವರಿಗೆ ಮೊದಲ ಗೊತ್ತು. ಹಂಗಾಗಿ ಅವರು ಒಂದ್ ಹೆಸರು ಜೋಡಿಸ್ಕಂಡಿದ್ರು. ಆಗ ಮನೆಯವ್ರ ನಾವು ಮನೆಗೆ ‘ಮಾಷಲ್ಲಾಹ್ ಎಂದು ಬರಕೊಳ್ತೀವಿ ಅಂದ್ರು. ಆಯ್ತು ಬರಕೊಳ್ರಿ..ಆದ್ರೂ ನನಗೂ ಚೂರು ಅವಕಾಶ ಕೊಡ್ರಿ. ನಾನು ‘ಬಾಪೂ ಅಂತ ಹೆಸರಿಡೋವ’ ಅಂದೆ. ‘ಬಾಪೂ ಅಂತ ಯಾಕ ಚಾಯ್ಸಿ ಮಾಡಿದ್ರಿ ಅಂತ ಕೆಲವರು ಕೇಳತಾರ. ‘ಬಾಪೂ’ ಮೊತ್ತಮೊದಲು ನನ್ನ ಅಜ್ಜನ ಹೆಸರು (ಬಾಪೂ ಸಾಹೇಬ), ಹಂಗಾಗಿ ಇದು ‘ಬಾಪೂ ಮನಿ’ ಆಮೇಲೆ ದೇಶದ ಅಜ್ಜ ಅವನೂ ‘ಬಾಪೂ’ನೆ, ನಂತರ ನಮ್ಮನ್ನ ವೈಚಾರಿಕವಾಗಿ ಎತ್ತಿಹಿಡಿದವರು ‘ಬಾಪು (ಬಾಪೂ ಸಾಹೇಬ ದೇಸಾಯಿ), ಹಂಗಾಗಿ ‘ಬಾಪೂ’ ನನ್ನನ್ನು ರೂಪಿಸಿದ ಹೆಸ್ರು ನಾನು ಬಿಡಾವಲ್ಲ ಅಂದೆ.
►ಈಗ ಮನೆಯವರ ಜತೆಗಿನ ಒಡನಾಟ?
-ಸುರಕೋಡ: ಪುಣ್ಯಕ್ಕ ನನ್ನ ಮನೇಲಿ ಇಟ್ಕೊಂಡಿದರ ಅದು ನನ್ನ ಪುಣ್ಯ.(ನಗು) ನಾ ಹೇಳೋದಿಷ್ಟು, ನನ್ನ ವಿಚಾರಗಳನ್ನ ನಿಮ್ ಮ್ಯಾಲ ಹೇರೋದಿಲ್ಲ. ನಿಮಗೆ ತಿಳದಂಗ ನೀವು ಬದುಕ್ರಿ, ನನಗ ತಿಳಿದಂತ ನಾನು ಬದುಕ್ತೀನಿ. ನಮ್ಮಜ್ಜ ತನಗ ತಿಳದಂಗ ಬದುಕಿದ್ದ. ಆದ್ರ ನಿಮ್ಮ ಅಜ್ಜನ ಮ್ಯಾಲೆ ಏನನ್ನೂ ಹೇರಲಿಲ್ಲ. ಹಂಗೇನೆ, ನಾನು ಕೂಡ ಏನು ಹೇರೋದಿಲ್ಲ ನಿವ್ ಮ್ಯಾಲೆ. ನಿಮಗೆ ಇಷ್ಟ ಆಯ್ತು ನನ್ನ ಪುಸ್ತಕಗಳನ್ನು ಓದ್ರಿ ಮುಂದೆ. ಇಲ್ಲಾಂದ್ರ ನಾನು ಸತ್ ಮರುದಿನ ತಗೊಂಡೋಗಿ ಲದ್ದಿಗೆ ಹಾಕ್ರಿ..ಅದು ನಿಮಗ ಬಿಟ್ಟದ್ದು ಅಂತೇಳೀನಿ.
►ಸರ್ ನಿಮ್ಮ ಅನುವಾದದಲ್ಲಿ ಹೆಚ್ಚು ಕೋಮು ಸೌಹಾರ್ದದ ಆಶಯವೇ ಗಾಢವಾಗಿದೆ..ಇದಕ್ಕೆ ಹಿನ್ನೆಲೆಯಾಗಿ ನಿಮ್ಮನ್ನು ಕಂಗೆಡಿಸಿದ ರಾಮದುರ್ಗದ ಕೋಮುಗಲಭೆ ನಿಮ್ಮನ್ನು ಮತ್ತೆ ಮತ್ತೆ ಕಂಗೆಡಿಸುತ್ತೆ ಅನ್ಸುತ್ತೆ..
-ಸುರಕೋಡ: ಹೌದು. ನನ್ನೂರು ಕೋಮು ಸೌಹಾದರ್ಕ್ಕೆ ಹೆಸರಾಗಿತ್ತು. ಆದರೆ ಮೂರು ದಶಕಗಳ ಹಿಂದೆ ಇಲ್ಲಿ ಮೊದಲ ಬಾರಿಗೆ ಕೋಮುಗಲಭೆೆ ಸಂಭವಿಸಿತು. ಹಿಂದುತ್ವವಾದಿಗಳು ಒಂದು ಬೃಹತ್ ಮೆರವಣಿಗೆ ಹೊರಡಿಸಿದ್ದರು. ಮಸೀದಿಯೆದುರು ವಾದ್ಯ ಬಾರಿಸಕೂಡದು ಎನ್ನುವುದೇನೂ ಕಾನೂನಾಗಿರಲಿಲ್ಲ. ಇದು ಹಿಂದೂ ಮತ್ತು ಮುಸ್ಲಿಂ ಎರಡೂ ಕೋಮಿನವರಿಗೂ ಗೊತ್ತಿತ್ತು. ಮಸೀದಿಯೆದುರು ವಾದ್ಯ ಬಾರಿಸುವುದನ್ನು ನಿಲ್ಲಿಸಿ ಮೆರವಣಿಗೆ ಮುಂದೆ ಸಾಗುವುದು ಎಂದಿನ ವಾಡಿಕೆಯಾಗಿತ್ತು. ಆದರೆ ಈ ಬಾರಿ ಹಿಂದುತ್ವವಾದಿಗಳು ಮಸೀದಿಯೆದುರು ಠಿಕಾಣಿ ಹೂಡಿದರು. ವಾಹನದಲ್ಲಿ ಕೂತಿದ್ದ ಒಬ್ಬ ಸ್ವಾಮಿಗೆ ಬಲಗೆನ್ನೆಗೆ ತೂರಿಬಂದ ಕಲ್ಲೊಂದು ಬಡಿಯಿತು. ಇದ್ದಕ್ಕಿದ್ದಂತೆ ಮಸೀದಿ ಹೊರಗಡೆ ಕೋಲಾಹಲವೇ ಏರ್ಪಟ್ಟಿತು. ಸ್ವಾಮೀಜಿಯ ಎಡಬದಿಗಿದ್ದ ಮಸೀದಿಯಲ್ಲಿ ನಮಾಝ್ ಮುಗಿಸಿದ್ದ ಮುಸಲ್ಮಾನರು ಹೊರಬರುವುದು ಅಸಾಧ್ಯವಾಗಿತ್ತು. ಮಸೀದಿಗೆ ಒಂದೇ ಬಾಗಿಲು, ಹೊರಗೆ ಘೋಷಣೆ, ಅವಾಚ್ಯ ಶಬ್ಧಗಳ ಸುರಿಮಳೆ. ಮಸೀದಿಗೆ ನುಗ್ಗಿದವರು ಸಿಕ್ಕಸಿಕ್ಕವರನ್ನೆಲ್ಲಾ ಮನಸಾ ಇಚ್ಛೆ ಹೊಡೆದು ಬಡಿದು ಹೈರಾಣಾಗಿಸಿದರು.
ಹಣ್ಣುಹಣ್ಣು ಮುದುಕರನ್ನು ಜೀವದ ಹಂಗುತೊರೆದು ರಕ್ಷಿಸಿದ ನನ್ನ ಗೆಳೆಯರೊಬ್ಬರು ಆ ಹೃದಯ ವಿದ್ರಾವಕ ಘಟನೆಯನ್ನು ನಿರೂಪಿಸಿದಾಗ ಸಮೂಹ ಸನ್ನಿ ಸೃಷ್ಟಿಸಿ ಒಂದು ಕೋಮಿನ ಜನರಿಗೆ ‘ಪಾಠ ಕಲಿಸಿಯೂ ನಾವು ಸುರಕ್ಷಿತವಾಗಿರಬಹುದು ಎನ್ನುವ ಹುನ್ನಾರ ಎಷ್ಟು ಅಮಾನುಷವಾದುದು ಎನಿಸಿತು. ಮರುದಿನ ಮಸೀದಿಯ ಗೋಡೆಗಳಿಗೆ ಸುಣ್ಣ ಸಾರಿಸಿದ್ದರಿಂದ ಗೋಡೆಯ ಮೇಲಿನ ರಕ್ತದ ಕಲೆಗಳು ಮಾಯವಾಗಿದ್ದವು. ಆದರೆ ಮನಸ್ಸಿಗಾದ ಗಾಯದ ಗುರುತುಗಳು ಮಾಯಲಾರವೇನೋ ಅನ್ನಿಸಿತು.
ಇದಾದ ಮೇಲೆ ಇಪ್ಪತ್ತು ವರ್ಷಗಳ ನಂತರ ಮತ್ತೆ ನಮ್ಮೂರಲ್ಲಿ ಕೋಮುಗಲಭೆ ನಡೆಯಿತು. ನನ್ನ ಬೀಡಿ ಅಂಗಡಿ ಪೂರ್ತಿ ಲೂಟಿಯಾಯಿತು. ನಾನು ಪಾಕೇಟ್ ಹಾಲಿನ ವಿತರಕನಾಗಿದ್ದೆ. ಲೂಟಿಗಾರರೆಲ್ಲಾ ಆಲ್ಕೋಹಾಲ್ ಪ್ರಿಯರಾಗಿದ್ದರು. ಹಾಗಾಗಿ ಹಾಲಿನ ಪಾಕೇಟುಗಳನ್ನೆಲ್ಲ ನೆಲಕ್ಕೆ ಹಾಕಿ ತುಳಿದಾಡಿದರು. ಹಾಲಿನ ಹೊಳೆಯಲ್ಲಿ ಸಂಭ್ರಮಿಸಿದರು. ನನಗೆ ಸಾವಿರಾರು ರೂಪಾಯಿಗಳು ನಷ್ಟವಾಗಿತ್ತು. ರಾತ್ರಿ ಹನ್ನೊಂದು ಗಂಟೆಯಷ್ಟೊತ್ತಿಗೆ ಕೆಲವು ಹುಡುಗರು ನಮ್ಮ ಮನೆಯ ಮುಂದೆ ಹಾದು ಹೋದರು. ‘ಪಾಪ, ನವ್ ಸುರಕೋಡ ಸರ್ ಅಂಗಡಿ ಸತ್ಯಾನಾಶ್ ಮಾಡಿಬಿಟ್ರು, ಆದ್ರ ಹಂಗ ಮಾಡಬ್ಯಾಡ್ರಿ ಅಂತಹೇಳಿದ್ರ ಆಗ ಯಾರು ಕೇಳತಿದ್ರು? ಎನ್ನುವ ಅವರ ಮಾತೊಂದ ಕೇಳಿಸಿಕೊಂಡೆ. ಆ ಒಂದು ಮಾತು ನನಗಾದ ನಷ್ಟ ನೋವನ್ನೆಲ್ಲ ಮರೆಸಿಬಿಟ್ಟಿತು. ಈ ಎರಡು ಘಟನೆಗಳು ನನ್ನೊಳಗೆ ಹಾಗೆ ಕೂತುಬಿಟ್ಟಿವೆ. ಹಾಗಾಗಿ ನನ್ನೊಳಗೆ ಕೋಮುಸಾಮರಸ್ಯದ ಬಗೆಗಿನ ತುಡಿತ ಸದಾ ಜಾಗೃತವಾಗಿರ್ತದೆ.
►ಕೋಮುವಾದವನ್ನು ತಿಳಿಗೊಳಿಸಲಿಕ್ಕೆ ಲೇಖಕರಾಗಿ ನಮ್ಮ ಜವಾಬ್ದಾರಿಗಳು ಏನು ಅಂತ ಭಾವಿಸ್ತೀರಿ..
-ಸುರಕೋಡ: ಇದನ್ನ ಹೇಳೋಕೆ ಒಬ್ರು ನೆನಪಾಗ್ತಾರೆ. ಬರೋಡ ಯುನಿವರ್ಸಿಟಿಯ ಪ್ರೊಫೆೆಸರ್ ಒಬ್ರಿದಾರೆ, ‘ಜೆ.ಎಸ್. ಬಂದೂಕುವಾಲ ಅಂತ. ಗಾಂಧಿವಾದಿ ಅವರು. ಅವರದ್ದು ಬಹಳ ಮುಕ್ತ ಚಿಂತನೆ. ಸಂಘ ಪರಿವಾರದ ಜನರು ಈತನ ಬಳಿ ಬಂದು ಕೂತು ಚರ್ಚಿಸಿ ಹೋಗ್ತಿದ್ರು. ಒಂದ್ಸಲ ಇವರು ‘ಸಾವರ್ಕರ್ ಜಯಂತಿಗೆ ಗೆ ಉಪನ್ಯಾಸಕ್ಕೆ ಆಹ್ವಾನ ಕೊಡ್ತಾರೆ. ಇವರೂ ಒಪ್ಕೋತಾರೆ. ಹೋಗಿ ಬಾಳ ಪ್ರಭಾವಶಾಲಿಯಾಗಿ ಮಾತಾಡ್ತಾರ. ಕೊನೆಗೆ ಇವರಾಡಿದ ಒಂದೇ ಒಂದು ಮಾತು ಸಂಘ ಪರಿವಾರದವರಿಗೆ ಹಿಡಿಸಲಿಲ್ವಂತೆ ಏನಂದ್ರ ‘ಈ ದೇಶದ ಮುಂದೆ ಎರಡು ಆಯ್ಕೆಗಳಿವೆ, ಒಂದು ಎಲ್ಲರನ್ನು ಒಳಗೊಳ್ಳುವಂತಹ ವಿಚಾರ (ಗಾಂಧಿವಾದ), ಇನ್ನೊಂದು ಈ ದೇಶದ ಬಹಳ ದೊಡ್ಡ ಜನಸಮುದಾಯವನ್ನು ಹೊರಗಿಡುವ ವಿಚಾರ(ಸಾವರ್ಕರ್ ವಿಚಾರ) ಈ ಎರಡರಲ್ಲಿ ಆಯ್ಕೆ ನಿಮಗೆ ಬಿಟ್ಟದ್ದು. ಅಂತ ಹೇಳಿ ಬಂದಿರ್ತಾರ. ಮಾರನೆ ದಿನ ಬರೋಡದಲ್ಲಿ ಮೊತ್ತ ಮೊದಲು ಇವರ ಭವ್ಯವಾದ ಮನೆ ಮೇಲೆ ದೊಡ್ಡದಾಗಿ ಹಲ್ಲೆಯಾಗುತ್ತೆ. ಆದರೆ ಬೇಜಾರು ಮಾಡ್ಕೊಳ್ಳಲ್ಲ, ಈ ಹಿಂದೆಯೂ ನಾನು ಅಹಿಂಸಾವಾದಿ ದಲಿತರ ಮೇಲೆ ಹಲ್ಲೆಗಳಾಗ್ತಾ ಇದ್ವು. ಯಾರು ಆ ಹಲ್ಲೆ ಮಾಡ್ತಿದ್ರು ಅಂತ ಹೇಳಬೇಕಾಗಿಲ್ಲ. ಆವಾಗ ಅವರ ಪರವಾಗಿ ನಾನು ಸ್ಟ್ರೈಕ್ ಮಾಡ್ತಾ, ಉಪವಾಸ ಸತ್ಯಾಗ್ರಹ ಮಾಡತಿದ್ದೆ. ಇದನ್ನ ಗಮನಿಸಿದ ಪ್ರಭಾವಶಾಲಿ ರಾಜಕಾರಣಿ ಕಾನ್ಶೀರಾಮ್ ನನಗೆ ಇನ್ವೈಟ್ ಮಾಡಿದ್ರು. ದಯವಿಟ್ಟು ದಿಲ್ಲಿಗೆ ಬರ್ರಿ..ಅಂತ. ಮಾಯಾವತಿ ಅವರನ್ನೂ ಭೇಟಿ ಮಾಡಿದೆ. ಇದೆಲ್ಲ ನನಗೆ ಬೇಡ..ನಾನು ಏನು ಕೆಲಸ ಮಾಡಾಕತ್ತೀನಿ ಅದರಲ್ಲಿ ನನಗೆ ತೃಪ್ತಿ ಇದೆ. ಅಷ್ಟು ಸಾಕು ಅಂತಿದ್ರು. ಮುಂದೆ 2007 ರ ಗೋರಕ್‌ಪುರದ ಕೋಮುಗಲಭೆಯಲ್ಲಿ ದಲಿತರನ್ನೆ ಬಳಸಿಕೊಂಡಾಗ ಬಂದೂಕುವಾಲ ತುಂಬಾ ಜರ್ಜರಿತರಾದ್ರು. ಇಷ್ಟಾದ್ರೂ ಕೂಡ ಫಾರಿನ್‌ಲ್ಲಿರುವ ತನ್ನೊಬ್ಬಳೇ ಮಗಳು ಹಿಂದುವೊಬ್ಬನನ್ನು ಮದುವೆಯಾದಳು, ಅವಳು ಅವನ ಜತೆ ಸುಖವಾಗಿದಾಳೆ. ನಾನು ಮನಸ್ಸು ಮಾಡಿದ್ರೆ ಈ ಮದುವೆ ಬೇಡ ಅಂತ ಹೇಳಬಹುದಿತ್ತು. ಆದ್ರೆ ನನಗೆ ಕೋಮು ದ್ವೇಷದಲ್ಲಿ ನಂಬಿಕೆ ಇಲ್ಲ ಅಂತಿದ್ರು. ಅವರು ದಲಿತರು ಮತ್ತು ಮುಸ್ಲಿಮರ ಒಗ್ಗೂಡುವಿಕೆಯ ಬಗ್ಗೆ ತುಂಬಾ ಯೋಚನೆ ಮಾಡಿದಾರೆ. ಅವರ ಆಲೋಚನೆಗಳು ಇಂದು ಹೆಚ್ಚು ಪ್ರಸ್ತುತ ಅನ್ನಿಸ್ತಿವೆ.
►ಈ ಹೊತ್ತಿನ ಕೋಮುಸೌಹಾರ್ದಕ್ಕೆ ನಾವು ಏನು ಮಾಡಬೇಕು ಸರ್?
-ಸುರಕೋಡ: ಮೊತ್ತಮೊದಲು ನಮ್ಮ ಕೋಮನ್ನು ಎಜುಕೇಟ್ ಮಾಡಬೇಕು. ಅನವಶ್ಯಕ ಸಂಘರ್ಷಕ್ಕಿಳಿಯುವುದು ಬೇಡವೆ ಬೇಡ. ಆಯ್ತು ಆಝಾನ್ ಕೇಳಿದ ಕೂಡಲೆ ನಿಮಗೆ ಹರ್