ಕೆಸಿಎಫ್ನಿಂದ ಹಜ್ ಸ್ವಯಂ ಸೇವಕರಿಗೆ ಅಭಿನಂದನಾ ಸಮಾರಂಭ
ಮಂಗಳೂರು, ಅ. 6: ಕರ್ನಾಟಕ ಕಲ್ಚರಲ್ ಫೌಂಡೇಶನ್ ಮದೀನಾ ಮುನವ್ವರ ಸೆಕ್ಟರ್ನಿಂದ 2018 ಸಾಲಿನ ಹಜ್ 71 ದಿನಗಳ ಕಾಲ ಮದೀನಾದಲ್ಲಿ ಹಜ್ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿದ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭವು ಮದೀನಾ ಮುನವ್ವರದ ಕೆಸಿಎಫ್ ಭವನದಲ್ಲಿ ನಡೆಸಲಾಯಿತು.
ಸೆಕ್ಟರ್ ಅಧ್ಯಕ್ಷ ಅಶ್ರಫ್ ಸಖಾಫಿ ನೂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉದ್ಘಾಟಕರಾಗಿ ಅಗಮಿಸಿದ ಉಮರ್ ಸಖಾಫಿ ಪರಪ್ಪು ಹಜ್ ಸೇವೆಯ ಪ್ರಾಮುಖ್ಯತೆಯ ಬಗ್ಗೆ ವಿವರಿಸಿ, ತಂಡವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿದ ನಾಯಕರನ್ನು ಹಾಗೂ ಕಾರ್ಯಕರ್ತರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮಕ್ಕಾ ಹಾಗೂ ಮದೀನಾ ಮುನವ್ವರದಲ್ಲಿ ಹಜ್ ಸೇವೆಯಲ್ಲಿ ಭಾಗವಹಿಸಿದ ಕಾರ್ಯಕರ್ತರಿಗೆ ಅಭಿನಂದನಾ ಪತ್ರ ಹಾಗೂ ಸ್ಮರಣಿಕೆ ಫಲಕ ನೀಡಿ ಗೌರವಿಸಲಾಯಿತು.
ಮದೀನಾ ಮುನವ್ವರ ರೆನ್ ಅಧ್ಯಕ್ಷ ಫಾರೂಕ್ ನಯೀಮಿ ಸರಳಿಕಟ್ಟೆ ಪ್ರಸ್ತಾವಿಕ ಭಾಷಣ ಮಾಡಿದರು. ಸುಲೈಮಾನ್ ಸಖಾಫಿ ಕೊಡಗು ಸಭೆಗೆ ಶುಭಾಶಯ ತಿಳಿಸಿದರು. ಉಮರ್ ಗೇರುಕಟ್ಟೆ ಸ್ವಾಗತಿಸಿ, ನಿರೂಪಿಸಿದರು. ಅಬೂಬಕ್ಕರ್ ಉದ್ದಬೆಟ್ಟು ವಂದಿಸಿದರು.