ಮಾಡೂರು: ಮಾಡೂರು ಫ್ರೆಂಡ್ಸ್, ಬ್ಲಡ್ ಡೋನರ್ಸ್ ವತಿಯಿಂದ ರಕ್ತದಾನ ಶಿಬಿರ
ಉಳ್ಳಾಲ, ಅ. 7: ಬ್ಲಡ್ ಡೋನರ್ಸ್ ಮಂಗಳೂರು ಮತ್ತು ಮಾಡೂರು ಫ್ರೆಂಡ್ಸ್ ಹಾಗೂ ಮಾಡೂರು ಗಲ್ಫ್ ಫ್ರೆಂಡ್ಸ್ ವೆಲ್ಫೇರ್ ಅಸೋಸಿಯೇಶನ್ ಆಶ್ರಯದಲ್ಲಿ ಮಂಗಳೂರು ವೆನ್ಲಾಕ್ ಆಸ್ಪತ್ರೆ ಸಹಯೋಗದಲ್ಲಿ ಮಾಡೂರು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ರಕ್ತದಾನ ಶಿಬಿರ ನಡೆಯಿತು.
ಮಾಡೂರು ಗಲ್ಫ್ ಫ್ರೆಂಡ್ಸ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಎಂ.ಎ ಶಾಕಿರ್ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.
ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷ ಉದಯ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಯುವ ಜನತೆ ಸ್ಥಳೀಯವಾಗಿ ರಕ್ತದಾನ, ವೈದ್ಯಕೀಯ ಶಿಬಿರಗಳನ್ನು ಅಯೋಜಿಸುದರಿಂದ ಪರಸ್ಪರ ಪ್ರೀತಿ ವಿಶ್ವಾಸ ಹೆಚ್ಚುದರ ಜೋತೆಗೆ ಬಡವರ ಆರೋಗ್ಯದ ಅಗತ್ಯತೆಯನ್ನುನೀಗಿಸಬಹುದು ಎಂದು ಹೇಳಿದರು.
ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯ ಹಮೀದ್ ಹಸನ್ ಮಾಡೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾಡೂರು ಪ್ರದೇಶದಲ್ಲಿ ಮಾಡೂರು ಫ್ರೆಂಡ್ಸ್ ಮತ್ತು ಮಾಡೂರು ಗಲ್ಫ್ ಫ್ರೆಂಡ್ಸ್ ವೆಲ್ಫೇರ್ ಅಸೋಸಿಯೇಶನ್ ಸಂಘಟನೆಗಳು ಉತ್ತಮ ರೀತಿಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಎಲ್ಲಾ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಶಿಕ್ಷಕಿ ಹರಿಣಾಕ್ಷಿ, ವಿದ್ಯಾರ್ಥಿನಿ ನಫೀಸತ್ ಝುನೈಫಾ, ನಂದನ್, ಕ್ರೀಡೆಯಲ್ಲಿ ಜಿಲ್ಲಾ ಮಟ್ಟದಲ್ಲಿ ವಿಜೇತ ರಾದ ಅಲಿಮ್ಮತ್ ಉನೈಸ್, ಕಬ್ಬಡಿ ಪಂದ್ಯಾಟದಲ್ಲಿ ರಾಜ್ಯ ಮಟ್ಟದಲ್ಲಿ ವಿಜೇತರಾದ ಧನ್ಯಶ್ರೀ, ತುರ್ತು ಸಂದರ್ಭದಲ್ಲಿ ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದ ಶರೀಫ್ ಮುಹಮ್ಮದ್ ರವರನ್ನು ಸನ್ಮಾನಿಸಲಾಯಿತು.
ಬ್ಲಡ್ ಡೋನರ್ಸ್ ಮಂಗಳೂರು ಪ್ರ.ಕಾರ್ಯದರ್ಶಿ ನವಾಝ್ ಕೊಲ್ಲರಕೋಡಿ ರಕ್ತದಾನದ ಬಗ್ಗೆ ಮಾಹಿತಿ ನೀಡಿದರು.
ಕೋಟೆಕಾರು ಪಟ್ಟಣ ಪಂಚಾಯತ್ ಸದಸ್ಯ ದೀರಜ್ ಕೊಂಡಾಣ, ಮಾಡೂರು ಇಮಾಯತ್ ಜುಮಾ ಮಸೀದಿ ಅಧ್ಯಕ್ಷ ಮಜೀದ್ ಹಸನ್ ಮಾಡೂರು, ಉದ್ಯಮಿ ಕೆ.ಪಿಸುರೇಶ್, ಬ್ಲಡ್ ಡೋನರ್ಸ್ ನ ಅಧ್ಯಕ್ಷ ಸಿದ್ದೀಕ್ ಮಂಜೇಶ್ವರ, ಮಾಡೂರು ಗಲ್ಫ್ ಫ್ರೆಂಡ್ಸ್ ಅಧ್ಯಕ್ಷ ಎಂ.ಎ ಶಾಕೀರ್, ಶಬರಿ ಫ್ರೆಂಡ್ಸ್ ಅಧ್ಯಕ್ಷ ನವೀನ್ , ಮಾಡೂರು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಅಯಿಶಾ.ಬಿ, ಉದ್ಯಮಿ ವೇಣುಗೋಪಾಲ, ಶಿಕ್ಷಕಿ ಹರಿಣಾಕ್ಷಿ, ಎಂ.ಎ ಬಶೀರ್, ಎಂ.ಜಿ.ಎಫ್ ಪ್ರ.ಕಾರ್ಯದರ್ಶಿ ರಫೀಕ್ ಇಸ್ಮಾಯಿಲ್, ಗೋಲ್ಡ್ ಕ್ರಿಕೆಟರ್ಸ್ ನ ಅಧ್ಯಕ್ಷ ಸಲಾಂ ಕೊಂಡಾಣ, ಎಂ.ಜಿ.ಎಫ್ ನ ರಫೀಕ್ ಮುಂಬಯಿ, ಬ್ಲಡ್ ಡೋನರ್ಸ್ ಮಂಗಳೂರು ಉಪಾಧ್ಯಕ್ಷರುಗಳಾದ ಸಲಾಂ ಚೆಂಬುಗುಡ್ಡೆ, ಮುನೀರ್ ಚೆಂಬುಗುಡ್ಡೆ, ಎಂ.ಸಿ.ಆರ್ ನ ಉಪಾಧ್ಯಕ್ಷ ಹಫೀಝ್, ಎಂ.ವೈ.ಎಫ್ ನ ಅಧ್ಯಕ್ಷ ಎಂ.ಎ ಬಶೀರ್ ಉಪಸ್ಥಿತರಿದ್ದರು. ಈ ಸಂದರ್ಭ 83 ಯುನಿಟ್ ರಕ್ತ ಸಂಗ್ರಹಿಸಲಾಯಿತು.