ಕುಂದಾಪುರ: ಮುಸ್ಲಿಮ್ ಒಕ್ಕೂಟದ ಪದಾಧಿಕಾರಿಗಳ ಆಯ್ಕೆ
ರಫೀಕ್ ಗಂಗೊಳ್ಳಿ
ಕುಂದಾಪುರ, ಅ.7: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಕುಂದಾಪುರ ತಾಲೂಕು ಅಧ್ಯಕ್ಷರಾಗಿ ರಫೀಕ್ ಗಂಗೊಳ್ಳಿ ಆಯ್ಕೆಯಾಗಿದ್ದಾರೆ.
ಒಕ್ಕೂಟದ ಜಿಲ್ಲಾಧ್ಯಕ್ಷ ಯಾಸೀನ್ ಮಲ್ಪೆ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಎಸ್.ದಸ್ತಗಿರ್ ಕುಂದಾಪುರ, ಕಾರ್ಯದರ್ಶಿಯಾಗಿ ಎಸ್.ಎಸ್.ಹನೀಫ್ ಗುಲ್ವಾಡಿ, ಜತೆ ಕಾರ್ಯದರ್ಶಿಯಾಗಿ ಅಬ್ದುಲ್ ರವೂಫ್ ಕೋಡಿ, ಕೋಶಾಧಿಕಾರಿಯಾಗಿ ಅನ್ಸಾರ್ ಹೊಸಂಗಡಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಶಾಬಾನ್ ಹಂಗ್ಳೂರ್, ಅಬ್ದುಲ್ ಮುನಾಫ್ ಕಂಡ್ಲೂರ್, ಜಿ.ಮುಹಮ್ಮದ್ ಗುಲ್ವಾಡಿ, ಮುಹಮ್ಮದ್ ರಿಯಾಝ್ ಕೋಡಿ, ಜಿ.ಎಂ.ಮುಸ್ತಫಾ ಕೋಡಿ, ಮುಹಮ್ಮದ್ ರಫೀಕ್ ಬೆಳ್ವೆ, ಮುಹಮ್ಮದಾಲಿ ಎಂಕೋಡಿ, ಹಾಜಿ ಜಿ.ಎಂ.ಚೇರಿಯಬ್ಬ ಮಾವಿನಕಟ್ಟೆ, ಮನ್ಸೂರ್ ಕೋಟೆಕೋಡಿ, ಕೆ.ಮುಹಮ್ಮದ್ ಮನ್ಸೂರ್ ಕೋಡಿ, ಪಳ್ಳಿ ಉಸ್ಮಾನ್ ಗುಲ್ವಾಡಿ, ಲಿಯಖತ್ ಬೆಟ್ಟೆ ಕಂಡ್ಲೂರ್, ಲಾಲಾ ಅನ್ವರ್ ಬಸ್ಸೂರ್, ಅಬ್ದುಲ್ ಸಲಾಂ ಚಿತ್ತೂರ್, ಫಝಲ್ ನೇರಳಕಟ್ಟೆ, ಹಮೀದ್ ಗಂಗೊಳ್ಳಿ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎ.ವೌಲಾ, ಜತೆ ಕೋಶಾಧಿ ಕಾರಿ ಕಾಸಿಂ ಬಾರಕೂರು, ಜಿಲ್ಲಾ ಸಮಿತಿ ಸಸ್ಯ ಶಾಹೀದಾಲಿ ಬಿ.ಎನ್. ಹಾಜರಿದ್ದರು.