ಓ ಮೆಣಸೇ...
ಮಹಾತ್ಮಾ ಗಾಂಧಿಯವರ ಬದುಕಿನಲ್ಲಿ ಸ್ವಚ್ಛತೆ ಅತ್ಯಂತ ಮಹತ್ವದ ಭಾಗವಾಗಿತ್ತು -ನರೇಂದ್ರ ಮೋದಿ, ಪ್ರಧಾನಿ
ಬಹಿರಂಗದ ಸ್ವಚ್ಛತೆ ಮಾತ್ರವಲ್ಲ, ಅಂತರಂಗದ ಸ್ವಚ್ಛತೆಗೂ ಅವರು ಮಹತ್ವ ನೀಡುತ್ತಿದ್ದರು.
---------------------
ಸೆಕ್ಸ್ ವಿಷಯದಲ್ಲಿ ಆಪಾದನೆ ಮಾಡುವುದು ಬಹಳ ಸುಲಭ -ಎಸ್.ಎಲ್.ಭೈರಪ್ಪ, ಸಾಹಿತಿ
ಹತೋಟಿಯಲ್ಲಿಟ್ಟುಕೊಳ್ಳುವುದು ಕಷ್ಟ ಅಂತೀರಾ?
---------------------
ವೀರಶೈವ - ಲಿಂಗಾಯತರು ಒಂದಾದರೆ ಸೂರ್ಯ-ಚಂದ್ರ ಇರುವವರೆಗೂ ನಮ್ಮವರೇ ಮುಖ್ಯಮಂತ್ರಿ - ಜ್ಯೋತಿಪ್ರಕಾಶ್ ಮಿರ್ಜಿ, ವೀರಶೈವ - ಲಿಂಗಾಯತ ಒಕ್ಕೂಟದ ಸ್ಥಾಪಕ ಅಧ್ಯಕ್ಷ
ನಿಮ್ಮವರು ಮುಖ್ಯಮಂತ್ರಿಯಾಗುವುದಕ್ಕಾಗಿ ಬಸವಣ್ಣನಿಗೆ ದ್ರೋಹ ಬಗೆಯುವುದಕ್ಕಾಗುತ್ತದೆಯೇ?
---------------------
ವ್ಯಭಿಚಾರ ಅಪರಾಧವಲ್ಲ ಎಂಬ ಸುಪ್ರೀಂ ತೀರ್ಪು ಹಿಂದೂ ಸಂಸ್ಕೃತಿಗೆ ಧಕ್ಕೆ ತರುವಂತಹದ್ದು - ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ
ರಾಘವೇಶ್ವರ ಸ್ವಾಮೀಜಿ ತಮ್ಮ ಸಂಸ್ಕೃತಿಗೆ ಭೂಷಣವೇ?
---------------------
ಗರ್ಲ್ ಫ್ರೆಂಡ್ ಆದರೆ ರಾಜಕೀಯದಲ್ಲಿ ಯಶಸ್ಸು - ಲೀಲಾದೇವಿ ಆರ್.ಪ್ರಸಾದ್, ಮಾಜಿ ಸಚಿವೆ
ನಿಮ್ಮ ರಾಜಕೀಯ ಬದುಕಿನ ಯಶಸ್ಸನ್ನು ವಿವರಿಸುತ್ತಿದ್ದೀರೋ, ಸೋಲನ್ನೋ?
---------------------
ಬರಹಗಾರರನ್ನು, ಕವಿಗಳನ್ನು ಅವರ ಬರಹದ ಕಾರಣಕ್ಕಾಗಿ ಬಂಧಿಸುತ್ತಿರುವುದು ಖಂಡನೀಯ -ಸಿದ್ದಲಿಂಗಯ್ಯ, ಕವಿ
ಬೇರೆ ಕಾರಣ ಕೊಟ್ಟು ಬಂಧಿಸಿ ಎಂಬ ಕಿವಿ ಮಾತು.
---------------------
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕಾಂಗ್ರೆಸ್ ಪಕ್ಷಕ್ಕಿಂತ ಸಚಿವ ಡಿ.ಕೆ.ಶಿ.ಗೆ ಹೆಚ್ಚು ನಿಷ್ಠರಾಗಿದ್ದಾರೆ - ಸಂಜಯ್ ಪಾಟೀಲ್, ಬಿಜೆಪಿ ಮಾಜಿ ಶಾಸಕ
ಮೈತ್ರಿ ಸರಕಾರವೂ ಡಿಕೆಶಿಗೆ ತಾನೆ ನಿಷ್ಠವಾಗಿರುವುದು.
---------------------
ಪಾಕ್‌ನ ಹೇಡಿತನದ ಕೃತ್ಯವನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ - ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ
ಚೀನಾದ ಬಗ್ಗೆಯೂ ಒಂದಿಷ್ಟು ಮಾತನಾಡಿ.
---------------------
ಪಾಕಿಸ್ತಾನವನ್ನು ನಾಲ್ಕು ಭಾಗವನ್ನಾಗಿ ಮಾಡಿದರೆ ಆ ದೇಶದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ - ಸುಬ್ರಮಣಿಯನ್ ಸ್ವಾಮಿ, ಸಂಸದ
ಭಾರತದ ಸಮಸ್ಯೆ ಪರಿಹಾರವಾಗಲು ಏನು ಮಾಡಬೇಕು?
---------------------
ರಾಜಕಾರಣದಲ್ಲಿ ಇಂದು ಪುಸ್ತಕ ಓದುವ ಶಾಸಕ ಯಾರಿಗೂ ಬೇಡ -ವೈ.ಎಸ್.ವಿ.ದತ್ತ, ಮಾಜಿ ಶಾಸಕ
ಬ್ಯಾಂಕ್ ಪಾಸ್ ಪುಸ್ತಕ ಹೊಂದಿರುವ ಶಾಸಕ ಮಾತ್ರ ಬೇಕು ಎಂದರಂತೆ ದೇವೇಗೌಡರು.
---------------------
ಯುಪಿಎ ಸರಕಾರ ಹಿಂದೆ ತೈಲ ಬೆಲೆ ಏರಿಕೆ ಮಾಡಿದಾಗ ನಾನು ಸೈಕಲ್ ಹೊಡೆದು ಪ್ರತಿಭಟಿಸಿದ್ದು ನಿಜ -ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ
ಈಗ ಆ ಸೈಕಲ್ ಪಂಕ್ಚರ್ ಆಗಿದೆಯೇ?
---------------------
ಮಹಾತ್ಮಾ ಗಾಂಧೀಜಿ ಮೇಲೆ ಭಗವದ್ಗೀತೆ ಬಹಳಷ್ಟು ಪ್ರಭಾವ ಬೀರಿತ್ತು -ವಿ.ನಾಗರಾಜ್, ಆರೆಸ್ಸೆಸ್ ನಾಯಕ
ಗೋಡ್ಸೆಯ ಮೇಲೂ ಕೂಡ ಪ್ರಭಾವ ಬೀರಿತ್ತು.
---------------------
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ವಿರೋಧ ಪಕ್ಷಗಳೂ ವಿರೋಧಿಸುವಂತಿಲ್ಲ - ಮೋಹನ್‌ಭಾಗವತ್, ಆರೆಸ್ಸೆಸ್ ಮುಖ್ಯಸ್ಥ
ಬೆದರಿಕೆಯೇ?
---------------------
ರೈತರು ಆತ್ಮಹತ್ಯೆ ಮಾಡಿಕೊಂಡರೆ ಆಯಾಯ ಬ್ಯಾಂಕುಗಳೇ ಹೊಣೆ - ಎಚ್.ಡಿ.ರೇವಣ್ಣ, ಸಚಿವ
ಬ್ಯಾಂಕ್ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಸನ್ನಿವೇಶ.
---------------------
ನಾನು ಪ್ರಧಾನಿ ಮೋದಿ ಅಲೆಯಲ್ಲಿ ತೇಲಿ ಬಂದು ಸಂಸದನಾದೆ - ಪ್ರತಾಪ್ ಸಿಂಹ , ಸಂಸದ
ಮುಂದಿನ ಚುನಾವಣೆಯಲ್ಲಿ ಮುಳುಗಲಿದ್ದೀರಿ. ಮೂರು ದಿನಗಳ ಬಳಿಕ ತೇಲುವ ಸಾಧ್ಯತೆ ಇದೆ.
---------------------
ಸ್ವಾತಂತ್ರ ಹೋರಾಟದಲ್ಲಿ ಬಿಜೆಪಿ ಹಾಗೂ ಆರೆಸ್ಸೆಸ್‌ನ ಮನೆಯ ಒಂದು ನಾಯಿ ಕೂಡಾ ಸತ್ತಿಲ್ಲ - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ
ಅವರಿಗೆ ಸಾಯಿಸಿ ಮಾತ್ರ ಗೊತ್ತಿರುವುದು.
---------------------
ದೇವರಲ್ಲಿ ಒಂದು ಕಾರ್ಯ ಕೇಳಿಕೊಂಡಿದ್ದೇನೆ. ಅದು ಆಗುವವರೆಗೆ ಸರಕಾರಿ ಕಾರು ಹತ್ತಲ್ಲ- ರಮೇಶ್ ಜಾರಕಿಹೊಳಿ, ಸಚಿವ
ಕಾಂಗ್ರೆಸ್ ದೇವರಾ?, ಜೆಡಿಎಸ್ ದೇವರಾ?
---------------------
ಮೈತ್ರಿಕೂಟ ಬಯಸಿದರೆ ಪ್ರಧಾನಿ ಆಗೋದು ಖಚಿತ-ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ
ಮೊದಲು ಮೈತ್ರಿ ಕೂಟವನ್ನು ರಚಿಸಬೇಕಲ್ಲವೇ?