ರಾಜ್ಯ ಮಟ್ಟದ ಓಪನ್ ಟ್ವೆಕಾಂಡೋ ಚಾಂಪಿಯನ್ಶಿಪ್: ಬಂಟ್ವಾಳದ ಮುಹಮ್ಮದ್ ಶಾರೂಕ್ಗೆ ಚಿನ್ನ
ಬಂಟ್ವಾಳ, ಅ. 8: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ಮಟ್ಟದ 76 ಕೆ.ಜಿ. ಒಳಗಿನ ಓಪನ್ ಟ್ವೆಕಾಂಡೋ ಚಾಂಪಿಯನ್ಶಿಪ್ "ಜೋಸ್ವಾ ಕಪ್" ನಲ್ಲಿ ಬಂಟ್ವಾಳ ತಾಲೂಕಿನ ಗೂಡಿನಬಳಿ ನಿವಾಸಿ ಮುಹಮ್ಮದ್ ಶಾರೂಕ್ ಅವರು ಫೈಟಿಂಗ್ ವಿಭಾಗದಲ್ಲಿ ಚಿನ್ನ ಹಾಗೂ ಪುಂಸೆ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
ಗೂಡಿನಬಳಿ ನಿವಾಸಿ ಇಸಾಕ್-ಮಮ್ತಾಝ್ ದಂಪತಿಯ ಪುತ್ರನಾಗಿರುವ ಶಾರೂಕ್ ಪ್ರಸ್ತುತ ಮಂಗಳೂರು-ಇನೋಳಿ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಅಂತಿಮ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ. ಇವರಿಗೆ ಇಸಾಕ್ ನಂದಾವರ ಹಾಗೂ ಇಬ್ರಾಹಿಂ ನಂದಾವರ ತರಬೇತಿ ನೀಡಿರುತ್ತಾರೆ.
Next Story