ಬೈಂದೂರು: ಮುಸ್ಲಿಮ್ ಒಕ್ಕೂಟದ ಪದಾಧಿಕಾರಿಗಳ ಆಯ್ಕೆ
ಹಸನ್
ಬೈಂದೂರು, ಅ.8: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಬೈಂದೂರು ತಾಲೂಕು ಅಧ್ಯಕ್ಷರಾಗಿ ಹಸನ್ ಮವದ್ ಬೈಂದೂರು ಆಯ್ಕೆಯಾಗಿದ್ದಾರೆ.
ಒಕ್ಕೂಟದ ಜಿಲ್ಲಾಧ್ಯಕ್ಷ ಯಾಸೀನ್ ಮಲ್ಪೆ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ನೌಶದ್ ನಾವುಂದ, ಕಾರ್ಯದರ್ಶಿಯಾಗಿ ವೌಲಾನ ಝಮೀರ್ ಅಹ್ಮದ್ ರಶದಿ ಕಿರಿಮಂಜೇಶ್ವರ, ಜತೆ ಕಾರ್ಯದರ್ಶಿಯಾಗಿ ಎನ್.ಎಂ.ಖಾಜ ನಾಗೂರ್, ಕೋಶಾಧಿಕಾರಿ ಯಾಗಿ ಶಬ್ಬೀರ್ ಅಹ್ಮದ್ ಶಿರೂರು, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಎನ್.ಎಸ್.ರಿಝ್ವೆನ್ ನಾಗೂರು, ಶಮ್ಸ್ ತಬ್ರೇಝ್ ನಾಗೂರು, ಬುವಾಫಿ ಮೌಸಿನ್ ಶಿರೂರು, ಶೇಕ್ ಅಝ್ಮತುಲ್ಲಾ ಶಿರೂರು, ಅಬ್ದುಲ್ ಹಮೀದ್ ಶಿರೂರು, ಕೆ.ಎ.ಮುನೀರ್ ಶಿರೂರು, ಎಚ್.ಎಸ್.ಖಾಜ ಕಿರಿಮಂಜೇಶ್ವರ, ಬಿ.ಅಬ್ದುಲ್ ಹಮೀದ್ ಬಡಕೆರೆ, ಮುಹಮ್ಮದ್ ರಫೀಕ್ ನಾಗೂರು, ಕೆ.ಎಂ. ಇಲಿಯಾಸ್ ನಾವುಂದ, ಶೇಕ್ ಫಯಾಝ್ ಅಹಮದ್ ಯೋಜನಾ ನಗರ, ಇಬ್ರಾಹಿಂ ಗೋಳಿಹೊಳೆ, ಸಯ್ಯದ್ ಅಲ್ತಾಫ್ ಮಡಿಕಲ್, ಸಿರಾಜ್ ಹಲ್ಗಿರಿ, ಶಕೀಲ್ ಶಿರೂು ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎ.ಮೌಲಾ, ಜತೆ ಕೋಶಾಧಿಕಾರಿ ಕಾಸಿಂ ಬಾರಕೂರು ಹಾಜರಿದ್ದರು.