ಅ.10ರಿಂದ ಮಂಗಳಾದೇವಿ ನವರಾತ್ರಿ ಮಹೋತ್ಸವ
ಮಂಗಳೂರು, ಅ.8: ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ನವರಾತ್ರಿ ಮಹೋತ್ಸವ ಅ.10ರಿಂದ 20ರವರೆಗೆ ವಿವಿಧ ಧಾರ್ಮಿಕ ಕಾರ್ಯ ಕ್ರಮಗಳೊಂದಿಗೆ ನಡೆಯಲಿದೆ. ನ.10ರಂದು ನವರಾತ್ರಿ ಉದ್ಘಾಟನೆ ನಡೆಯಲಿದೆ. ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮನಪಾ ಮೇಯರ್ ಭಾಸ್ಕರ ಕೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಭರತ್ ಶೆಟ್ಟಿ ಮನಪಾ ಸದಸ್ಯ ಪ್ರೇಮಾನಂದ ಶಟ್ಟಿ ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭ ಅ.20ರಂದು ಸಂಜೆ 6 ಗಂಟೆಗೆ ನಡೆಯಲಿದೆ. ಅಧ್ಯಕ್ಷತೆಯನ್ನು ಶಾಸಕ ವೇದವ್ಯಾಸ ಕಾಮತ್ ವಹಿಸಲಿದ್ದಾರೆ. ವಿಶೇಷ ಅಹ್ವಾನಿತರಾಗಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಸಂಸದ ನಳಿನ್ ಕುಮಾರ್ ಕಟೀಲ್ ಭಾಗವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕ ಐವನ್ ಡಿ ಸೋಜ,ಮಾಜಿ ಶಾಸಕ ಜೆ.ಆರ್.ಲೋಬೊ ಭಾಗವಹಿಸಲಿದ್ದಾರೆ.
ನವರಾತ್ರಿ ಉತ್ಸವ:- ಅ.10ರಂದು ಗಣಪತಿ ಪ್ರಾರ್ಥನೆಯೊಂದಿಗೆ ಉತ್ಸವದ ಉದ್ಘಾಟನೆ, ಅ.13ಲಲಿತ ಪಂಚಮಿ, ಅ.18 ಮಹಾನವಮಿ ರಾತ್ರಿ ರಂಗಪೂಜೆ, ಸಣ್ಣ ರಥೋತ್ಸವ, ಅ.19 ವಿಜಯದಶಮಿ, ಮಧಾಠ್ಯಹ್ನ ರಥಾರೋಹಣ ರಾತ್ರಿ ರಥೋತ್ಸವ, ಅ.20 ಮಂಗಳ ಸ್ನಾನ ಅ.21.ಸಾರ್ವಜನಿಕ ಸತ್ಯನಾರಾಯಣ ಪೂಜೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.