ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿ ಬಂಧಿತ ಫಿರ್ದೌಸ್ ಹೇಳಿದ್ದೇನು?
ಗಂಜಿಮಠ ಸಮೀರ್ ಕೊಲೆ ಪ್ರಕರಣ
ಮಂಗಳೂರು, ಅ.9: ಗಂಜಿಮಠ ಸಮೀರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಸಮೀರ್ ಪತ್ನಿ ಫಿರ್ದೌಸ್ ಮತ್ತು ಆಕೆಯ ಪ್ರಿಯಕರ ಆಸಿಫ್ ನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿದ್ದ ಸಂದರ್ಭ ಫಿರ್ದೌಸ್ ಳನ್ನು ಪೊಲೀಸರು ವಿಚಾರಣೆ ನಡೆಸುತ್ತಿರುವುದು ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬ ಫಿರ್ದೌಸ್ ಳಲ್ಲಿ ಪ್ರಶ್ನೆಗಳನ್ನು ಕೇಳುತ್ತಾನೆ. ಅದನ್ನು ಕೇಳಿ ಫಿರ್ದೌಸ್ ನಗುತ್ತಾಳೆ. ನಂತರ ಕೊಲೆಯ ಬಗ್ಗೆ ವಿವರಿಸುವಂತೆ ಪೊಲೀಸ್ ಹೇಳುತ್ತಾನೆ. ಅದಕ್ಕುತ್ತರಿಸುವ ಫಿರ್ದೌಸ್, ಸಮೀರ್ ನನ್ನು ಕೊಲೆಗೈದ ನಂತರ ನನ್ನನ್ನು ಆಸಿಫ್ ಮನೆಗೆ ಬಿಟ್ಟಿದ್ದ. ನನ್ನ ತಾಯಿ ಸಮೀರ್ ಎಲ್ಲಿ ಎಂದು ಪ್ರಶ್ನಿಸಿದಾಗ, “ಸಮೀರ್ ನನ್ನನ್ನು ಇಲ್ಲಿ ಡ್ರಾಪ್ ಮಾಡಿ ಹೋಗಿದ್ದಾರೆ” ಎಂದು ಉತ್ತರಿಸಿದೆ ಎನ್ನುತ್ತಾಳೆ.
ಸಾಮಾಜಿಕ ಜಾಲತಾಣ ಫೇಸ್ಬುಕ್, ವಾಟ್ಸ್ಯಾಪ್ ಗಳಲ್ಲಿ ವಿಡಿಯೋ ವೈರಲ್ ಆಗುತ್ತಿದೆ. ಆದರೆ ಈ ವಿಡಿಯೋ ಅಧಿಕೃತವೇ ಎನ್ನುವ ಬಗ್ಗೆ ‘ವಾರ್ತಾ ಭಾರತಿ’ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.