ಸೌದಿಯಲ್ಲಿ ತೀವ್ರಗೊಂಡ ಮಳೆ
ಜಿದ್ದಾ (ಸೌದಿ ಅರೇಬಿಯಾ), ನ. 3: ನಗರದ ವಿವಿಧೆಡೆ ಮಳೆ ತೀವ್ರಗೊಂಡಿದ್ದು, ರಸ್ತೆಗಳು ಜಲಾವೃತಗೊಂಡಿವೆ. ಕಳೆದ ಎರಡು ದಿನಗಳಿಂದ ಇಲ್ಲಿ ಮಳೆ ಸುರಿಯುತ್ತಿದ್ದು, ಇಂದು ಬಿರುಸು ಪಡೆದಿದೆ.
ಜಿದ್ದಾದ ಅಲ್ ಬಲದ್ ನ ಮುಖ್ಯರಸ್ತೆ, ಬಾಬ್ ಮಕ್ಕಾದ ರಸ್ತೆಗಳು ಜಲಾವೃತಗೊಂಡಿವೆ. ಇಂದು ಮುಂಜಾನೆ ದಟ್ಟಮೋಡ ಕವಿದ ವಾತಾವರಣವಿತ್ತು. 11 ಗಂಟೆಯ ಸುಮಾರಿಗೆ ಜೋರಾಗಿ ಮಳೆ ಸುರಿಯತೊಡಗಿದ್ದು, 12 ಗಂಟೆಯವರೆಗೂ ಮುಂದುವರಿದಿದೆ.
Next Story