ಇನ್ ಲ್ಯಾಂಡ್ ಬಿಲ್ಡರ್ಸ್ ನ ಸಿರಾಜ್ ಅಹ್ಮದ್ ಗೆ 'ಮೋಸ್ಟ್ ಪ್ರಾಮಿಸಿಂಗ್ ಸಿಇಒ' ಪ್ರಶಸ್ತಿ
ನಿಟ್ಟೆ ಎಂ.ಎಸ್.ಎಂ.ಇ. ಕಾನ್ ಕ್ಲೇವ್ ಆ್ಯಂಡ್ ಬಿಸಿನೆಸ್ ಅವಾರ್ಡ್ 2018
ಮಂಗಳೂರು, ನ. 4: ಕೆ.ಎಸ್. ಹೆಗ್ಡೆ ಇನ್ಸ್ ಟಿ ಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಿಟ್ಟೆ ಹಾಗು ಕರ್ನಾಟಕ ಬ್ಯಾಂಕ್ ಆಯೋಜಿಸಿದ್ದ ನಿಟ್ಟೆ ಎಂ.ಎಸ್.ಎಂ.ಇ. ಕಾನ್ ಕ್ಲೇವ್ ಆ್ಯಂಡ್ ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್ 2018 ಕಾರ್ಯಕ್ರಮದಲ್ಲಿ ಇನ್ ಲ್ಯಾಂಡ್ ಬಿಲ್ಡರ್ಸ್ ಸಂಸ್ಥೆಯ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಸಿರಾಜ್ ಅಹ್ಮದ್ ಅವರಿಗೆ ‘ಮೋಸ್ಟ್ ಪ್ರಾಮಿಸಿಂಗ್ ಸಿಇಒ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಶನಿವಾರ ಸಂಜೆ ನಗರದ ಓಶಿಯನ್ ಪರ್ಲ್ ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಕರ್ನಾಟಕ ಬ್ಯಾಂಕ್ ನ ಮಹಾಪ್ರಬಂಧಕ ಬಾಲಚಂದ್ರ ಅವರು ಸಿರಾಜ್ ಅಹ್ಮದ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಿರಾಜ್ ಅಹ್ಮದ್ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ನಾನು ಸಲ್ಲಿಸಿದ ಸೇವೆಯಲ್ಲಿ ಗುರುತಿಸಿ ನೀಡಿರುವ ಈ ಪ್ರತಿಷ್ಠಿತ ಗೌರವದಿಂದ ಮುಂದೆ ಇನ್ನಷ್ಟು ಉತ್ಸಾಹದಿಂದ ಮುನ್ನುಗ್ಗುವ ಹಾಗು ಅತ್ಯುತ್ತಮ ಸೇವೆ ಸಲ್ಲಿಸುವ ಪ್ರೋತ್ಸಾಹ ಸಿಕ್ಕಿದೆ. ನಿಟ್ಟೆ ಹಾಗು ಕರ್ನಾಟಕ ಬ್ಯಾಂಕ್ ಗಳಂತಹ ಶ್ರೇಷ್ಠ ಸಂಸ್ಥೆಗಳು ನೀಡಿರುವ ಈ ಪ್ರಶಸ್ತಿ ನನ್ನ ಪಾಲಿಗೆ ಅತ್ಯಂತ ವಿಶೇಷವಾದದ್ದು ಎಂದು ಹೇಳಿದರು.
ಇನ್ ಲ್ಯಾಂಡ್ ಬಿಲ್ಡರ್ಸ್ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ತನ್ನದೆ ಆದ ಪಾತ್ರ ಮೂಡಿಸಿರುವ ರಾಜ್ಯದ ಪ್ರಮುಖ ಸಂಸ್ಥೆಯಾಗಿ ಇಂದು ವಿಶ್ವಾಸ ಪಡೆದಿದೆ. ಮಂಗಳೂರು, ಬೆಂಗಳೂರುಗಳಲ್ಲಿ ಆಕರ್ಷಕ ವಿನ್ಯಾಸ, ಅತ್ಯುತ್ತಮ ಸೌಲಭ್ಯಗಳು ಹಾಗು ಅತ್ಯುತ್ತಮ ಗುಣಮಟ್ಟಗಳ ಹಲವು ವಾಣಿಜ್ಯ, ವಸತಿ ಯೋಜನೆಗಳನ್ನು ಉತ್ತಮವಾಗಿ ಪೂರ್ಣಗೊಳಿಸಿ ಗ್ರಾಹಕರ ಮನ್ನಣೆ ಪಡೆದಿದೆ. ಗುಣಮಟ್ಟ ಹಾಗು ಸುರಕ್ಷತೆಗಾಗಿ ಹಲವು ಪ್ರಶಸ್ತಿಗಳನ್ನು ಇನ್ ಲ್ಯಾಂಡ್ ಈಗಾಗಲೇ ಪಡೆದಿದೆ.