ಲೂಯಿಸಾ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ
ಮುಂಬಯಿ, ನ.15: ಕೊಂಕಣಿ ನಾಟಕಕಾರ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ ಅವರ ಪತ್ನಿ, ಕಲಾ ಪೋಷಕಿ ಲೂಯಿಸಾ ಫೆರ್ನಾಂಡಿಸ್ ಕಾಸ್ಸಿಯಾ (76) ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ಮುಂಜಾನೆ ಬೊರಿವಿಲಿ ಪಶ್ಚಿಮದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಮೂಲತಃ ಮಂಗಳೂರಿನವರಾದ ಲೂಯಿಸಾ ಕಳೆದ ಅನೇಕ ವರ್ಷಗಳಿಂದ ದುಬೈಯಲ್ಲಿದ್ದವರು ಇತ್ತೀಚಿನ ವರ್ಷಗಳಿಂದ ಮುಂಬಯಿ ಬೊರಿವಿಲಿ ಪಶ್ಚಿಮದ ಐ.ಸಿ ಕಾಲನಿಯಲ್ಲಿ ನಿವೃತ್ತ ಜೀವನ ಸಾಗಿಸುತ್ತಿದ್ದರು. ಮೃತರು ಓರ್ವ ಪುತ್ರ, ಪುತ್ರಿ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರವು ನ.19ರಂದು ಸಂಜೆ 3:30 ಗಂಟೆಗೆ ಬೊರಿವಿಲಿ ಐ.ಸಿ. ಕಾಲನಿಯ ಅವರ್ ಲೇಡಿ ಆಫ್ ಇಮ್ಯಾಕ್ಯುಲೆಟ್ ಕಾನ್ಸೆಪ್ಶನ್ ಚರ್ಚ್ ವಠಾರದಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲವು ತಿಳಿಸಿವೆ
Next Story