ಡಿ.22ಕ್ಕೆ ಫ್ಲಾರೆನ್ಸ್ ನೈಟಿಂಗೇಲ್ ನರ್ಸಸ್ ಪ್ರಶಸ್ತಿ ಪ್ರದಾನ
ಬೆಂಗಳೂರು, ನ.30: ಆಂಗ್ಲೋ ಇಂಡಿಯನ್ ಯೂನಿಟಿ ಸೆಂಟರ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ 18ನೇ ವರ್ಷದ ಫ್ಲಾರೆನ್ಸ್ ನೈಟಿಂಗಲ್ ನರ್ಸಸ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಡಿ.22ರ ಸಂಜೆ 4ಗಂಟೆಗೆ ರಾಜಭವನದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಮಾಜಿ ಶಾಸಕ ಐವಾನ್ ನಿಗ್ಲಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲ ವಜುಭಾಯಿ ವಾಲಾ ಪ್ರಶಸ್ತಿ ಪ್ರದಾನ ಮಾಡಲಿದ್ದು, ಬಿ.ಎಸ್ಸಿ ನರ್ಸಿಂಗ್ನಲ್ಲಿ ಹೆಚ್ಚು ಅಂಕಗಳನ್ನು ಪಡೆದ ಹಾಗೂ ಜಿ.ಎನ್.ಎಂ.ನರ್ಸಿಂಗ್ನ ಒಬ್ಬ ವಿದ್ಯಾರ್ಥಿಗೆ, ಸ್ಟಾಫ್ನರ್ಸ್ನ ಆರು ಜನಕ್ಕೆ, ತಲಾ ಇಬ್ಬರು ಪ್ರಾಂಶುಪಾಲ ಮತ್ತು ಪ್ರಾಧ್ಯಾಪಕರಿಗೆ ಹಾಗೂ ನರ್ಸಿಂಗ್ ಸೂಪರಿಟೆಂಡೆಂಟ್ನ ಇಬ್ಬರಿಗೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದರು.
ಪ್ರಶಸ್ತಿಗೆ ಡಿ.10ರ ಸಂಜೆ 6 ಗಂಟೆಯೊಳಗೆ ಬಾಣಸವಾಡಿಯ ಫ್ಲಾರೆನ್ಸ್ ನೈಟಿಂಗೇಲ್ ಕಮಿಟಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 94480 71900 ಅನ್ನು ಸಂಪರ್ಕಿಸಲು ಅವರು ಹೇಳಿದರು.