ಥಾಯ್ಲೆಂಡ್ ನಲ್ಲಿ ನಕಲಿ ಮದುವೆ; 10 ಭಾರತೀಯರ ಬಂಧನ
ಬ್ಯಾಂಕಾಕ್, ಡಿ. 5: ತಮ್ಮ ಮದುವೆಗಳ ಬಗ್ಗೆ ನಕಲಿ ದಾಖಲೆಗಳನ್ನು ಸಲ್ಲಿಸಿದ ಹಾಗೂ ಸುಳ್ಳು ಮಾಹಿತಿಗಳನ್ನು ನೀಡಿದ ಆರೋಪದಲ್ಲಿ ಥಾಯ್ಲೆಂಡ್ ಪೊಲೀಸರು 10 ಭಾರತೀಯ ಪುರುಷರು ಮತ್ತು 24 ಥಾಯ್ಲೆಂಡ್ ಮಹಿಳೆಯರನ್ನು ಬಂಧಿಸಿದ್ದಾರೆ.
ಇನ್ನೂ 20 ಭಾರತೀಯ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ ಎಂದು ಥಾಯ್ಲೆಂಡ್ ಪೊಲೀಸರು ತಿಳಿಸಿದ್ದಾರೆ.
ತಮ್ಮ ನಕಲಿ ಸಂಗಾತಿಗಳನ್ನು ನೋಡಿಕೊಳ್ಳುವುದಕ್ಕಾಗಿ ಥಾಯ್ಲೆಂಡ್‌ನಲ್ಲಿ ಕಾನೂನುಬದ್ಧವಾಗಿ ವಾಸಿಸಲು ಅವಕಾಶ ನೀಡುವಂತೆ ಕೋರಿ ಈ ವ್ಯಕ್ತಿಗಳು ಅಧಿಕಾರಿಗಳಿಗೆ ನಕಲಿ ವಿವಾಹ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದರು ಎನ್ನಲಾಗಿದೆ.
Next Story