ಸಂವಿಧಾನ ಸಭೆಯ ಮೊದಲ ಅಧಿವೇಶನ
1903: ಮಹಿಳೆಯರಿಗೆ ಮತದಾನ ಹಕ್ಕು ಒದಗಿಸಲು ನಾರ್ವೆ ಸಂಸತ್ತು ಈ ದಿನ ಸರ್ವಾನುಮತದಿಂದ ಅನುಮತಿಸಿತು.
1931: ಸ್ಪೇನ್ ಈ ದಿನ ಗಣರಾಜ್ಯ ದೇಶವಾಯಿತು.
1939: ವಿಶ್ವ ಎರಡನೇ ಮಹಾಯುದ್ಧದ ಭಾಗವಾಗಿ ರಶ್ಯಾ ಸೇನೆ ಹೆಲ್ಸಿಂಕಿಯ ಮೇಲೆ ವಾಯುಸೇನಾ ದಾಳಿ ನಡೆಸಿತು.
1941: ಚೀನಾ ದೇಶವು ಜಪಾನ್, ಜರ್ಮನಿ ಹಾಗೂ ಇಟಲಿಯ ಮೇಲೆ ಯುದ್ಧ ಘೋಷಿಸಿತು.
1946: ಈಗಿನ ಸಂಸತ್‌ನ ಸೆಂಟ್ರಲ್ ಹಾಲ್ (ಅಂದು ಸಂವಿಧಾನ ಭವನ)ನಲ್ಲಿ ಈ ಭಾರತೀಯ ಸಂವಿಧಾನ ಸಭೆಯ ಮೊದಲ ಅಧಿವೇಶನವು ಈ ದಿನ ನಡೆಯಿತು. ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಬ್ರಿಟಿಷ್ ಆಡಳಿತದ ಮುಂದಿಡಲಾಯಿತು. ಮುಸ್ಲಿಂ ಲೀಗ್ ಈ ಸಭೆಯನ್ನು ಬಹಿಷ್ಕರಿಸಿತ್ತು. ಫ್ರೆಂಚರ ಆಡಳಿತ ಪದ್ಧತಿಯಂತೆ ಸಚ್ಚಿದಾನಂದ ಸಿನ್ಹಾ ಸಂವಿಧಾನ ಸಭೆಯ ತಾತ್ಕಾಲಿಕ ಅಧ್ಯಕ್ಷರಾಗಿದ್ದರು.
1961: ಬ್ರಿಟನ್‌ನ ಕಪಿಮುಷ್ಟಿಯಿಂದ ಈ ದಿನ ಸಂಪೂರ್ಣ ಸ್ವಾತಂತ್ರಗೊಂಡ ತಾಂಜಾನ್ಯಿಕಾ ತಾಂಝಾನಿಯಾ ಎಂದು ತನ್ನ ಹೆಸರನ್ನು ಬದಲಿಸಿತು.
2006: ರಶ್ಯಾದ ಮಾಸ್ಕೋದಲ್ಲಿ ಮಾದಕ ವ್ಯಸನಿಗಳ ಪುನರ್ವಸತಿ ಕೇಂದ್ರದಲ್ಲಿ ಬೆಂಕಿ ಅವಘಡ ಸಂಭವಿಸಿತು. ಈ ಸಂದರ್ಭದಲ್ಲಿ 45 ಜನ ಮಹಿಳೆಯರು ಪ್ರಾಣ ಕಳೆದುಕೊಂಡರು.
2015: ಕಂದಹಾರ್ ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡಿದ ತಾಲಿಬಾನ್ ಉಗ್ರರು 37 ಜನರನ್ನು ಹತ್ಯೆಗೈದರು.
2017: ಐಸಿಸ್ ಪಡೆಗಳ ವಿರುದ್ಧ ಜಯ ಸಾಧಿಸಿದ್ದೇವೆ ಎಂದು ಇರಾಕ್ ಅಧ್ಯಕ್ಷ ಹೈದರ್-ಅಲ್-ಅಬಾದಿ ಘೋಷಿಸಿದರು.
1918: ಕಮ್ಯುನಿಸ್ಟ್ ನಾಯಕ ಹಾಗೂ ಕೇರಳದ ಮಾಜಿ ಮುಖ್ಯಮಂತ್ರಿ ಇ.ಕೆ.ನಾಯನಾರ್ ಜನ್ಮದಿನ.