ಓ ಮೆಣಸೇ...
ಯಾರು ಏನೇ ಹೇಳಲಿ ಜನರಿಗೆ ಸುಲಭವಾಗಿ ಸಿಗುವ ಮುಖ್ಯಮಂತ್ರಿ ನಾನು - ಕುಮಾರಸ್ವಾಮಿ, ಮುಖ್ಯಮಂತ್ರಿ
ಬಿಜೆಪಿಯವರು ಇದನ್ನೇ ಹೇಳುತ್ತಾರೆ.
---------------------
ಈಗ ಅಧಿಕಾರದಲ್ಲಿರುವವರೇ ಆಶ್ವಾಸನೆ ನೀಡಿ ರಾಮಮಂದಿರ ಮರೆತಿದ್ದಾರೆ - ಸುರೇಶ್ ಭಯ್ಯಾಜಿ, ಆರೆಸ್ಸೆಸ್ ನಾಯಕ
ಜನರನ್ನೇ ಮರೆತಿದ್ದಾರೆ ಎನ್ನುವುದು ಶ್ರೀಸಾಮಾನ್ಯನ ಕಳವಳ.
---------------------
ಮುಖ್ಯಮಂತ್ರಿ ಕುಮಾರಸ್ವಾಮಿ ಎಲ್ಲವನ್ನು ಬಿಟ್ಟಿದ್ದಾರೆ - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಬಹುಶಃ ಚಟಗಳನ್ನು ಮುಂದುವರಿಸುವುದು ಸರಿಯಲ್ಲ.
---------------------
ನಾನು ಪ್ರತಿದಿನ ರಾಮ, ಯೇಸು, ಪೈಗಂಬರ್ ನೆನೆದೇ ಮಲಗುತ್ತೇನೆ - ಜನಾರ್ದನ ಪೂಜಾರಿ - ಕಾಂಗ್ರೆಸ್ ಮುಖಂಡ
ಪ್ರಭಾಕರ ಭಟ್ಟರ ಹೆಸರನ್ನೇಕೆ ಬಿಟ್ಟಿರಿ?
---------------------
ರಾಜ್ಯ ಸರಕಾರ ರೈತರಿಗಾಗಿ ಮೊಸಳೆ ಕಣ್ಣೀರು ಸುರಿಸುತ್ತಿದೆ - ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ
ಮೋದಿ ಸರಕಾರ ಅದನ್ನೂ ಮಾಡುತ್ತಿಲ್ಲ.
---------------------
ರಾಮಮಂದಿರಕ್ಕಾಗಿ ಹನುಮನ ರೀತಿ ಹೋರಾಟ ಮಾಡಬೇಕಿದೆ
- ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
ಮೊದಲು ಬಾಲ ಕಟ್ಟಿಕೊಳ್ಳಿ.
---------------------
ಸಿದ್ದರಾಮಯ್ಯ ಸೋತರೂ ಅವರೇ ನಮಗೆ ಮುಖ್ಯಮಂತ್ರಿ -ಮುನಿಯಪ್ಪ, ಸಂಸದ
ಮುಖ್ಯಮಂತ್ರಿ ಚಂದ್ರು ಇದ್ದ ಹಾಗೆ.
---------------------
ಅನ್ನಕೊಟ್ಟ ಸಿದ್ದರಾಮಯ್ಯರಿಗೆ ಜನ ವಿಷಕೊಟ್ಟರು
- ರಮೇಶ್‌ಕುಮಾರ್, ಸ್ಪೀಕರ್
ಪ್ರಸಾದ ಎಂದು ವಿಷ ಕೊಡುವವರು ಇರುವ ಸಮಾಜ ನಮ್ಮದು.
---------------------
ಕಸ ಗುಡಿಸಿದರೆ ಸಾಲದು, ಮನಸ್ಸನ್ನೂ ಸ್ವಚ್ಛವಾಗಿಟ್ಟುಕೊಳ್ಳಬೇಕು
- ಡಾ.ಸಿದ್ದಲಿಂಗಯ್ಯ, ಹಿರಿಯ ಕವಿ
ಮೋದಿ ದೇಶವನ್ನೇ ಗುಡಿಸಿ ಹಾಕುತ್ತಿದ್ದಾರೆ.
---------------------
ಕರ್ನಾಟಕ ಸಮ್ಮಿಶ್ರ ಸರಕಾರ ಕುಮಾರಸ್ವಾಮಿಯವರ ಪಾಪದ ಶಿಶು - ಪ್ರಹ್ಲಾದ್‌ಜೋಷಿ, ಸಂಸದ
ಹೆತ್ತವರಿಗೆ ಹೆಗ್ಗಣ ಮುದ್ದು.
---------------------
ದೇಶದಲ್ಲಿ ಬಿಜೆಪಿ ತನ್ನ ಪ್ರಭಾವ ಕಳೆದುಕೊಳ್ಳುತ್ತಿದೆ
- ರಜನಿಕಾಂತ್, ನಟ
ಮೋದಿ ನಟನೆಯಲ್ಲಿ ನಿಮ್ಮನ್ನು ಮೀರಿಸಿದ್ದು ಕಾರಣವಿರಬಹುದು.
---------------------
ಸೋಲು ಮತ್ತು ಗೆಲುವು ಜೀವನದ ಅವಿಭಾಜ್ಯ ಅಂಗ - ನರೇಂದ್ರ ಮೋದಿ, ಪ್ರಧಾನಿ
ನಿಮ್ಮದಲ್ಲ, ದೇಶದ ಗತಿಯನ್ನು ಹೇಳಿ.
---------------------
ಪ್ರತಾಪ್ ಚಂದ್ರ ಶೆಟ್ಟಿ ಕರಾವಳಿಯ ಭೀಷ್ಮ - ಕೋಟ ಶ್ರೀನಿವಾಸ ಪೂಜಾರಿ, ವಿ.ಪ.ನಾಯಕ
ಜನರು ಶರಶಯ್ಯೆಯ ದೃಶ್ಯಕ್ಕಾಗಿ ಕಾಯುತ್ತಿದ್ದಾರೆ.
---------------------
(ಪಂಚ ರಾಜ್ಯಗಳ ಚುನಾವಣೆಯಲ್ಲಿ) ಮತದಾರರು ಬಿಜೆಪಿಗೆ ತ್ರಿವಳಿ ತಲಾಖ್ ನೀಡಿದ್ದಾರೆ - ಶಶಿ ತರೂರು, ಸಂಸದ
ತ್ರಿವಳಿ ತಲಾಖ್ ಅಪರಾಧ ಎಂದು ಮೋದಿ ಘೋಷಿಸಿದ್ದು ಇದೇ ಕಾರಣಕ್ಕಿರಬಹುದೇ?
---------------------
ಮುಖ್ಯಮಂತ್ರಿ ಕುಮಾರಸ್ವಾಮಿ ಕಾಂಗ್ರೆಸ್‌ನವರು ಹೇಳಿದ್ದಕ್ಕೆಲ್ಲಾ ಹೆಬ್ಬೆಟ್ಟು ಒತ್ತುತ್ತಿದ್ದಾರೆ - ಬಸವರಾಜ ಹೊರಟ್ಟಿ, ವಿ.ಪ.ಸದಸ್ಯ
ನನಗೆ ಸಹಿ ಹಾಕುವುದಕ್ಕೆ ಬರುತ್ತದೆ ಎಂದು ಕುಮಾರಸ್ವಾಮಿ ಹೇಳಿದರಂತೆ.
---------------------
ಪಕ್ಕದ ಮನೆಯಲ್ಲಿ ಗಂಡು ಮಗು ಹುಟ್ಟಿದರೆ ಅದು ನನ್ನದೇ ಮಗು ಎನ್ನುವಂತೆ ಸರಕಾರ ವರ್ತಿಸುತ್ತಿದೆ - ಕೆ.ಎಸ್.ಈಶ್ವರಪ್ಪ, ಬಿಜೆಪಿ ಹಿರಿಯ ನಾಯಕ
ನೆರೆಹೊರೆ ಎಂದ ಮೇಲೆ ಕೊಡುಕೊಳ್ಳುವಿಕೆ ಇರುವುದು ಸಹಜ.
---------------------
ಪಪ್ಪು (ರಾಹುಲ್ ಗಾಂಧಿ) ಈಗ ಪರಮ ಪೂಜ್ಯರಾಗಿ ಬದಲಾಗಿದ್ದಾರೆ - ರಾಜ್‌ಠಾಕ್ರೆ, ಎಂ.ಎನ್.ಎಸ್ ಮುಖಂಡ
ತಾವು ರಾಹುಲ್‌ಸೇನೆ ಕಟ್ಟಲು ಹೊರಟಂತಿದೆ.
---------------------
ಆರ್‌ಬಿಐ ಸ್ವಾಯತ್ತೆ ಎತ್ತಿ ಹಿಡಿಯಲು ಪ್ರಯತ್ನಿಸುವೆ - ಶಕ್ತಿಕಾಂತ್ ದಾಸ್, ಆರ್‌ಬಿಐ ಗವರ್ನರ್
ಎತ್ತಿ ಯಾರ ಕೈಗೆ ಒಪ್ಪಿಸಲಿದ್ದೀರಿ ಎನ್ನುವುದನ್ನು ಹೇಳಿ ಬಿಡಿ.
---------------------
ಹಿಂದೆ ಮೂರು ವರ್ಷ ಸಚಿವನಾಗಿ ಮೂರು ಕೋಟಿ ರೂಪಾಯಿ ಸಾಲ ಮಾಡಿಕೊಂಡೆ - ಎಸ್.ಆರ್.ಪಾಟೀಲ್, ಮೇಲ್ಮನೆ ಸದಸ್ಯ
ಯಾವ ಬ್ಯಾಂಕನ್ನು ಮುಳುಗಿಸಹೊರಟಿದ್ದೀರಿ ಎನ್ನುವುದನ್ನೂ ಹೇಳಿ.
---------------------
ನಾನು ನಾಲ್ಕು ಕಾದಂಬರಿ ಬರೆದಿದ್ದೇನೆ, ಆಸಕ್ತಿ ಇದ್ದರೆ ಅದು ನಿಮ್ಮಿಂದಲೂ ಸಾಧ್ಯ - ಡಾ.ವೀರಪ್ಪ ಮೊಯ್ಲಿ, ಸಂಸದ
ಬರೆಯುವುದು ಮುಖ್ಯವಲ್ಲ, ಓದುವವರೂ ಬೇಕು.
---------------------
ಚೌಕಿದಾರ ಯಾವತ್ತೂ ಚೋರ ಆಗಿರಲು ಸಾಧ್ಯವಿಲ್ಲ - ಅಮಿತ್‌ಶಾ, ಬಿಜೆಪಿ ಅಧ್ಯಕ್ಷ
ಆದರೆ ಚೋರ ಕೆಲವೊಮ್ಮೆ ಚೌಕಿದಾರ ಆಗುವ ಸಾಧ್ಯತೆಗಳಿರುತ್ತವೆ.
---------------------
ಮಹಿಳಾ ಪೊಲೀಸರಿಗೆ ಪ್ಯಾಂಟ್ ಕಡ್ಡಾಯ ನಿಯಮದಿಂದ ವಿನಾಯಿತಿ ನೀಡಲಾಗುವುದು - ಡಾ.ಜಿ.ಪರಮೇಶ್ವರ್, ಉಪ ಮುಖ್ಯಮಂತ್ರಿ
ಸೀರೆಯೊಳಗೆ ಪಿಸ್ತೂಲನ್ನು ಎಲ್ಲಿ ಇಟ್ಟುಕೊಳ್ಳುವುದು ?
---------------------
ಭಾರತ ಅಮೆರಿಕದ ನಿಜವಾದ ನಂಬಿಕಸ್ಥ ಸ್ನೇಹಿತ - ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
ಈ ಹಿಂದೆ ಪಾಕಿಸ್ತಾನವೂ ಇದನ್ನು ಕೇಳಿ ಹಿರಿ ಹಿರಿ ಹಿಗ್ಗಿತ್ತು.
---------------------
ಭಾರತಕ್ಕಾಗಿ ದುಡಿದ ಪ್ರಧಾನಿ ಮೋದಿಯ ನಾಯಕತ್ವದ ಬಗ್ಗೆ ಅನುಮಾನ ಪಡುವುದು ಸರಿಯಲ್ಲ - ಬಾಬಾ ರಾಮ್‌ದೇವ್, ಯೋಗಗುರು
ಪತಂಜಲಿ ಸಂಸ್ಥೆಯನ್ನೇ ಭಾರತ ಎಂದು ನಂಬಲು ಕರೆಕೊಟ್ಟಂತಿದೆ.
---------------------
ವಿಜಯ ಮಲ್ಯ ಕಳ್ಳ ಅಲ್ಲ - ನಿತಿನ್ ಗಡ್ಕರಿ, ಕೇಂದ್ರ ಸಚಿವ
ಕಳ್ಳನಿಗೆ ಸುಳ್ಳನ ಸಾಕ್ಷಿ.
---------------------
ತನ್ನದೇ ಪ್ರಜೆಗಳನ್ನು ಕೊಲ್ಲುವ ಯಾವುದೇ ದೇಶ ಯುದ್ಧ ಗೆಲ್ಲುವುದಿಲ್ಲ - ಮೆಹಬೂಬ ಮುಫ್ತಿ, ಜಮ್ಮು - ಕಾಶ್ಮೀರ ಮಾಜಿ ಮುಖ್ಯಮಂತ್ರಿ
ತನ್ನ ಪ್ರಜೆಗಳು ಎಂದು ಸರಕಾರ ಭಾವಿಸುವುದು ಮುಖ್ಯ.