ಟಿ.ವಿ. ನಿರೂಪಕಿ ಸಾವು ಪ್ರಕರಣ: ಸಹ ನಿರೂಪಕನ ಬಂಧನ
ನೊಯ್ಡ, ಡಿ. 17: ನೋಯ್ಡಾ ಸೆಕ್ಟರ್ 77ರಲ್ಲಿ ಅಪಾರ್ಟ್ಮೆಂಟ್ನ ನಾಲ್ಕನೇ ಮಹಡಿಯಿಂದ ಖಾಸಗಿ ಟಿ.ವಿ. ಚಾನೆಲ್ನ ನಿರೂಪಕಿ ಕೆಳಗೆ ಬಿದ್ದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಅದೇ ಚಾನೆಲ್ನ ಅವರ ಸಹೋದ್ಯೋಗಿಯನ್ನು ನೋಯ್ಡಾ ಸೆಕ್ಟರ್ 49ರ ಪೊಲೀಸರು ಬಂಧಿಸಿದ್ದಾರೆ.
ನಿರೂಪಕಿ ರಾಧಿಕಾ ಕೌಶಿಕ್ ರೆಸಿಡೆನ್ಸಿಯಿಂದ ಕೆಳಗೆ ಬಿದ್ದು ಸಾವನ್ನಪ್ಪುವ ಸಂದರ್ಭ ಹಿರಿಯ ನಿರೂಪಕ ರಾಹುಲ್ ಅವಸ್ಥಿ ನಾಲ್ಕನೇ ಮಹಡಿಯಲ್ಲಿ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ರಾಧಿಕಾ ಕೌಶಿಕ್ ಕೆಳಗೆ ಬಿದ್ದ ಸಂದರ್ಭ ತಾನು ವಾಶ್ರೂಮ್ನಲ್ಲಿ ಇದ್ದೆ ಎಂದು ಈ ಹಿಂದೆ ಅವಸ್ಥಿ ಪೊಲೀಸರಲ್ಲಿ ತಿಳಿಸಿದ್ದರು. ಅವರ ಹೇಳಿಕೆಯಲ್ಲಿ ಕೆಲವು ನ್ಯೂನತೆ ಇರುವುದನ್ನು ನಾವು ಪತ್ತೆ ಮಾಡಿದೆವು.
ರಾಧಿಕಾ ಕೆಳಗೆ ಬೀಳುವ ಕೆಲವು ನಿಮಿಷಗಳ ಮೊದಲು ಅವರಿಬ್ಬರೂ ಬಾಲ್ಕನಿಯಲ್ಲಿ ನಿಂತುಕೊಂಡಿದ್ದುದನ್ನು ಕಟ್ಟಡದ ಭದ್ರತಾ ಸಿಬ್ಬಂದಿ ನೋಡಿರುವುದಾಗಿ ತಿಳಿಸಿದ್ದಾರೆ ಎಂದು ನೋಯ್ಡಾ ಪೊಲೀಸ್ನ ಸರ್ಕಲ್ ಆಫೀಸರ್ ಶ್ವೇತಾಭ್ ಪಾಂಡೆ ತಿಳಿಸಿದ್ದಾರೆ.
Next Story