ರಾಷ್ಟ್ರೀಯ ರೈತರ ದಿನ
1815: ಖ್ಯಾತ ಇಂಗ್ಲೆಂಡ್ ಕಾದಂಬರಿಗಾರ್ತಿ ಜೇನ್ ಆಸ್ಟೆನ್‌ರ ಜನಪ್ರಿಯ ಕಾದಂಬರಿ ‘ಎಮ್ಮಾ’ ಇಂದು ಪ್ರಕಟಗೊಂಡಿತು.
1947: ವಿಶ್ವದ ಪ್ರಥಮ ಟ್ರಾನ್ಸಿಸ್ಟರ್ ರೇಡಿಯೊವನ್ನು ಅಮೆರಿಕದ ಬೆಲ್ ಲ್ಯಾಬೋರೇಟರಿ ರೂಪಿಸಿತು. ರೇಡಿಯೋ ರಚನೆಗಿಂತ ಕೆಲವೇ ತಿಂಗಳುಗಳ ಮುಂಚೆ ಪ್ರಥಮ ಟ್ರಾನ್ಸಿಸ್ಟರ್ ಕೂಡ ಈ ಲ್ಯಾಬೋರೇಟರಿ ರೂಪಿಸಿತ್ತು.
1956: ಸ್ಯೂಯೆಜ್ ಕಾಲುವೆ ಸಂಬಂಧ ಕದನಕ್ಕಿಳಿದಿದ್ದ ಬ್ರಿಟನ್ ಮತ್ತು ಫ್ರಾನ್ಸ್ ವಿಶ್ವಸಂಸ್ಥೆಯ ಮಧ್ಯಪ್ರವೇಶದೊಂದಿಗೆ ಇಂದು ತಮ್ಮ ಸೈನ್ಯಗಳನ್ನು ಹಿಂದೆಗೆದುಕೊಂಡವು.
1998: ಹರ್ಯಾಣದ ಶಿರ್ಸಾ ಜಿಲ್ಲೆಯ ಮಂಡಿ ಡಾಬ್‌ವಾಲಿ ಪಟ್ಟಣದ ರಾಜೀವ್ ಮ್ಯಾರೇಜ್ ಪ್ಯಾಲೇಸ್‌ನಲ್ಲಿ ಶಾಲಾ ಕಾರ್ಯಕ್ರಮವೊಂದರಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿತು. ಈ ಅವಘಡದಲ್ಲಿ ಸುಮಾರು 540 ಜನ ಸಾವಿಗೀಡಾಗಿದ್ದರು.
2011: ಸರಕಾರದ ವಿರುದ್ಧ ಹಾಗೂ ವಾಕ್ ಸ್ವಾತಂತ್ರಕ್ಕಾಗಿ ಒತ್ತಾಯಿಸಿ ಲೇಖನಗಳನ್ನು ಬರೆದ ಚೀನಾದ ಲೇಖಕ ಚೆನ್ ವೆಯ್‌ಗೆ 9 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಯಿತು.
2012: ಸಿರಿಯದ ಸರಕಾರಿ ಯುದ್ಧವಿಮಾನಗಳು ದಾಳಿ ನಡೆಸಿದ ಪರಿಣಾಮ ಅದೇ ದೇಶದ ಹೆಲ್ಫಾಯಾ ನಗರದಲ್ಲಿ 200 ನಾಗರಿಕರು ಹತ್ಯೆಗೀಡಾದರು.
1902: ಚೌಧರಿ ಚರಣ್‌ಸಿಂಗ್ ಜನ್ಮದಿನದ ನೆನಪಿನಲ್ಲಿ ಪ್ರತೀವರ್ಷ ಈ ದಿನವನ್ನು ‘ಕಿಸಾನ್ ದಿವಸ್’ (ರೈತರ ದಿನ) ಎಂದು ಆಚರಿಸಲಾಗುತ್ತದೆ.
2004: ಭಾರತದ 9ನೇ ಪ್ರಧಾನಮಂತ್ರಿ ಪಿ.ವಿ.ನರಸಿಂಹರಾವ್ ಇಂದು ನಿಧನರಾದರು.
2010: ಕೇರಳದ ಮಾಜಿ ಮುಖ್ಯಮಂತ್ರಿ ಕೆ. ಕರುಣಾಕರನ್ ನಿಧನ.