ಹಬೀಬ್ ಕಟ್ಟೆಕ್ಕಾರ್
ಸುಳ್ಯ, ಡಿ.31: ಇಲ್ಲಿನ ನಾವೂರು ನಿವಾಸಿ, ಉದ್ಯಮಿ ಹಬೀಬ್ ಕಟ್ಟೆಕ್ಕಾರ್(47) ಹೃದಯಾಘಾತದಿಂದ ಇಂದು ಬೆಳಗ್ಗೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಇಲ್ಲಿನ ಜೈ ಭಾರತ್ ಯುವಕ ಮಂಡಲದ ಸಲಹೆಗಾರರಾಗಿದ್ದ ಹಬೀಬ್ ಸಾಮಾಜಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ, ಮೂವರು ಮಕ್ಕಳನ್ನು ಅಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರವು ಇಲ್ಲಿನ ಗಾಂಧಿ ನಗರದ ಜುಮಾ ಮಸೀದಿಯ ವಠಾರದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story