ಅಧಿಕಾರ ಸ್ವೀಕರಿಸಿದ ಒಂದೂವರೆ ಗಂಟೆಯಲ್ಲಿ ಮೇಯರ್ ಹತ್ಯೆ
ಮೆಕ್ಸಿಕೊ ಸಿಟಿ, ಜ. 2: ವೆುಕ್ಸಿಕೊ ದೇಶದ ಓಕ್ಸಾಕ ರಾಜ್ಯದ ಟ್ಲಾಕ್ಸಿಯಾಕೊ ನಗರದ ಮೇಯರನ್ನು ಅವರು ಅಧಿಕಾರ ಸ್ವೀಕರಿಸಿದ ಒಂದೂವರೆ ಗಂಟೆಯಲ್ಲೇ ಕೊಲೆ ಮಾಡಲಾಗಿದೆ.
ಮೇಯರ್ ಅಲೆಜಾಂಡ್ರೊ ಅಪಾರಿಶಿಯೊ ಅಧಿಕಾರ ಸ್ವೀಕರಿಸಿದ ಬಳಿಕ ತಪಾಸಣೆಗಾಗಿ ಹೊರಗೆ ಹೋಗುತ್ತಿದ್ದಾಗ ಬಂದೂಕುಧಾರಿಗಳು ಆಕ್ರಮಣ ನಡೆಸಿದರು. ಅವರು ಬಳಿಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಕಚೇರಿಯಲ್ಲಿ ಅವರೊಂದಿಗೆ ಇದ್ದ ನಾಲ್ವರು ದಾಳಿಯಲ್ಲಿ ಗಾಯಗೊಂಡಿದ್ದಾರೆ.ಓರ್ವ ಶಂಕಿತನನ್ನು ಬಂಧಿಸಲಾಗಿದೆ.
ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೇಯರ್ ತನ್ನ ಸಿಬ್ಬಂದಿಯೊಂದಿಗೆ ಹೊರಗೆ ರಸ್ತೆಯಲ್ಲಿ ನಡೆಯುತ್ತಿದ್ದಾಗ ಈ ದಾಳಿ ನಡೆದಿದೆ ಎಂದು ರಾಜ್ಯ ಜನರಲ್ ಪ್ರಾಸಿಕ್ಯೂಟರ್ ಕಚೇರಿ ವರದಿ ಮಾಡಿದೆ.
Next Story