ನೇತಾಜಿ ಬೆನ್ನಿಗೆ ಇರಿದಿದ್ದ ಹಿಂದೂ ಮಹಾಸಭಾ!
ಇಂದು ನೇತಾಜಿ ಸುಭಾಶ್ಚಂದ್ರ ಬೋಸ್ ಜನ್ಮದಿನ
♦ ಬ್ರಿಟಿಶ್ ಸೇನೆಗೆ ಹಿಂದೂಗಳ ಸೇರ್ಪಡೆಗೆ ಉತ್ತೇಜಿಸಿದ್ದ ಸಾವರ್ಕರ್
♦ ಬ್ರಿಟಿಶರ ವಿರುದ್ಧ ನೇತಾಜಿಯ ಸಶಸ್ತ್ರ ಹೋರಾಟಕ್ಕೆ ಬೆಂಬಲ ನೀಡದ ಹಿಂದೂ ಮಹಾಸಭಾ
ಸಾವರ್ಕರ್ ಅವರ ಈ ಬ್ರಿಟಿಶ್ ಪರವಾದ ಕ್ರಿಮಿನಲ್ ಹಾಗೂ ದೇಶವಿರೋಧಿ ಚಟುವಟಿಕೆಗಳನ್ನು ನಡೆಸಿರುವುದರ ಹೊರತಾಗಿಯೂ ಅವರನ್ನು ಭಾರತೀಯ ಆಡಳಿತಗಾರರು ‘ವೀರ್’ ಎಂದೇ ವೈಭವೀಕರಿಸುತ್ತಿದ್ದಾರೆ. ನೇತಾಜಿ ವಿರುದ್ಧದ ಕೇಸರಿ ಗ್ಯಾಂಗ್‌ನ ಈ ದುಷ್ಟ ಚಿಂತನೆಗಳು ಹಾಗೂ ಕೃತ್ಯಗಳನ್ನು ಬಚ್ಚಿಡಲಾಗಿರುವುದು ಕಳವಳಕಾರಿಯಾಗಿದೆ. ಆದಾಗ್ಯೂ, ಪ್ರಜಾತಂತ್ರವಾದಿ ಹಾಗೂ ಜಾತ್ಯತೀತ ನಿಲುವಿನ ಇತಿಹಾಸಕಾರರು ಕೂಡಾ ಈ ದ್ರೋಹದ ಬಗ್ಗೆ ಯಾಕೆ ವೌನವಹಿಸಿದ್ದಾರೆಂಬುದು ಇನ್ನೂ ಹೆಚ್ಚು ಕಳವಳಕರವಾಗಿದೆ. ಭಾರತವನ್ನು ಹಿಂದುತ್ವದ ದೈತ್ಯಬಂಡಿಯ ಚಕ್ರದಡಿ ಸಿಲುಕುವುದರಿಂದ ರಕ್ಷಿಸಬೇಕಾದರೆ, ಈ ಸತ್ಯಾಂಶವನ್ನು ನಾವು ಸಾಮಾನ್ಯ ಭಾರತೀಯರ ಜೊತೆ ಹಂಚಿಕೊಳ್ಳಬೇಕಾಗಿದೆ.
ಬ್ರಿಟಿಶರನ್ನು ಭಾರತದಿಂದ ತೊಲಗಿಸಲು, ಮಿಲಿಟರಿ ಹೋರಾಟವನ್ನು ಸಂಘಟಿಸಲು ಯತ್ನಿಸಿದ್ದ ನೇತಾಜಿ ಸುಭಾಶ್ಚಂದ್ರ ಬೋಸ್ (23 ಜನವರಿ 1897- 18 ಆಗಸ್ಟ್, 1945) ಅವರ ಬಗ್ಗೆ ಅಪಾರ ಮೆಚ್ಚುಗೆಯನ್ನು ಹೊಂದಿರುವಂತೆ ನಟಿಸುವುದನ್ನು ಹಿಂದುತ್ವದ ಬಿಗ್ರೇಡ್ ಮುಂದುವರಿಸಿದೆ. ಆದರೆ, ಹಿಂದುತ್ವದ ಐಕಾನ್ ಎಂದೇ ಆರೆಸ್ಸೆಸ್ ಆರಾಧಿಸುತ್ತಿರುವ ಸಾವರ್ಕರ್ ಅವರ ನೇತೃತ್ವದ ಹಿಂದೂ ಮಹಾಸಭಾವು, ಸುಭಾಶ್ ಅವರ ಧ್ಯೇಯಕ್ಕೆ ಘೋರವಾದ ದ್ರೋಹವನ್ನು ಎಸಗಿತ್ತೆಂಬ ವಿಷಯವು ಕೆಲವೇ ಕೆಲವು ಮಂದಿಗಷ್ಟೇ ತಿಳಿದಿದೆ. ಎರಡನೆ ಜಾಗತಿಕ ಸಮರದ ವೇಳೆ ದೇಶದ ಸ್ವಾತಂತ್ರಕ್ಕಾಗಿ, ವಿದೇಶಿ ನೆರವನ್ನು ಪಡೆಯಲು ನೇತಾಜಿ ಯತ್ನಿಸುತ್ತಿದ್ದಾಗ ಹಾಗೂ ದೇಶದ ಈಶಾನ್ಯಭಾಗದಲ್ಲಿ ಮಿಲಿಟರಿ ದಾಳಿಯೊಂದನ್ನು ನಡೆಸಲು ಮಾಡಿದ ಯತ್ನವು ಅಂತಿಮವಾಗಿ ಆಝಾದ್ ಹಿಂದ್ ಫೌಝ್‌ನ ರಚನೆಗೆ ಕಾರಣವಾಯಿತು. ಆಗ ಬ್ರಿಟಿಶ್ ಧಣಿಗಳಿಗೆ ಸಂಪೂರ್ಣ ಸೇನಾ ಸಹಕಾರದ ಕೊಡುಗೆಯನ್ನು ಸಾವರ್ಕರ್ ನೀಡಿದ್ದರು. 1941ರಲ್ಲಿ ಭಾಗಲ್‌ಪುರದಲ್ಲಿ ನಡೆದ ಹಿಂದೂ ಮಹಾಸಭಾದ 23ನೇ ಅಧಿವೇಶನದಲ್ಲಿ ಅವರು ಹೀಗೆ ಹೇಳಿದ್ದರು.
‘‘ಯುದ್ಧವು ಈಗ ನಮ್ಮ ದಡಗಳಿಗೆ ತಲುಪಿದ್ದು, ಮಿಲಿಟರೀಕರಣ ಚಳವಳಿಯನ್ನು ತೀವ್ರಗೊಳಿಸಬೇಕಾಗಿದೆ ಹಾಗೂ ಪ್ರತಿಯೊಂದು ಪಟ್ಟಣ ಹಾಗೂ ನಗರಗಳಲ್ಲಿರುವ ಹಿಂದೂ ಮಹಾಸಭಾ ಪ್ರತಿ ಶಾಖೆಯು ಕೂಡಾ ಭೂಸೇನೆ, ನೌಕಾಪಡೆ ಹಾಗೂ ವಾಯುಪಡೆಗೆ ಮತ್ತು ವಿವಿಧ ಯುದ್ಧೋಪಕರಣ ಉತ್ಪಾದನಾಸಂಸ್ಥೆಗಳಿಗೆ ಸೇರ್ಪಡೆಗೊಳ್ಳುವಂತೆ ಹಿಂದೂಗಳನ್ನು ಉತ್ತೇಜಿಸುವ ಕೆಲಸದಲ್ಲಿ ಸಕ್ರಿಯವಾಗಿ ತೊಡಗಬೇಕು’’ ಎಂದವರು ಕರೆ ನೀಡಿದ್ದರು.
ಬ್ರಿಟಿಶರಿಗೆ ಯಾವ ಮಟ್ಟದವರೆಗೆ ನೆರವಾಗುವ ಇಚ್ಛೆಯನ್ನು ಹೊಂದಿದ್ದಾರೆಂಬುದನ್ನು ಅವರ ಈ ಕೆಳಗಿನ ಮಾತುಗಳಿಂದ ಸ್ಪಷ್ಟವಾಗುತ್ತದೆ.
‘‘ಈವರೆಗೆ ಭಾರತದ ರಕ್ಷಣೆಗೆ ಸಂಬಂಧಿಸಿದಂತೆ, ಹಿಂದುತ್ವವು, ಹಿಂದೆಮುಂದೆ ನೋಡದೆ, ಭಾರತ ಸರಕಾರದ ಸಮರ ಪ್ರಯತ್ನಕ್ಕೆ, ಅದು ಹಿಂದೂ ಹಿತಾಸಕ್ತಿಗಳಿಗೆ ಅನುಗುಣವಾಗಿ ಇರುವ ತನಕ ಪ್ರತಿಕ್ರಿಯಾತ್ಮಕ ಸಹಕಾರದ ಚೈತನ್ಯದೊಂದಿಗೆ, ಭೂಸೇನೆ, ನೌಕಾಪಡೆ ಹಾಗೂ ವಾಯುಪಡೆಗಳಿಗೆ ಸಾಧ್ಯವಿದ್ದಷ್ಟು ದೊಡ್ಡ ಸಂಖ್ಯೆಯಲ್ಲಿ ಸೇರ್ಪಡೆಗೊಳ್ಳುವ ಮೂಲಕ ಹಾಗೂ ಶಸ್ತ್ರಾಸ್ತ್ರ ಹಾಗೂ ಯುದ್ಧೋಪಕರಣ ಕಾರ್ಖಾನೆಗಳಿಗೆ ಪ್ರವೇಶವನ್ನು ಪಡೆಯುವ ಮೂಲಕ ಕೈಜೋಡಿಸಬೇಕು... ಯುದ್ಧಕ್ಕೆ ಜಪಾನ್‌ನ ಪ್ರವೇಶವು ಬ್ರಿಟನ್‌ನ ಶತ್ರುಗಳ ದಾಳಿಗೆ ನೇರವಾಗಿ ಹಾಗೂ ತಕ್ಷಣವೇ ನಮ್ಮನ್ನು ಈಡು ಮಾಡಿದೆ. ಇದರ ಪರಿಣಾಮವಾಗಿ, ನಾವು ಇಷ್ಟಪಡುತ್ತೇವೆಯೋ ಇಲ್ಲವೇ, ನಾವು ನಮ್ಮದೇ ಆದ ಒಲೆ ಹಾಗೂ ಮನೆಯನ್ನು ಯುದ್ಧದ ವಿನಾಶದಿಂದ ರಕ್ಷಿಸಿಕೊಳ್ಳಬೇಕಾಗಿದೆ ಮತ್ತು ಭಾರತವನ್ನು ರಕ್ಷಿಸಲು ಸರಕಾರ ನಡೆಸುತ್ತಿರುವ ಯುದ್ಧ ಪ್ರಯತ್ನದಿಂದ ಮಾತ್ರವೇ ಇದನ್ನು ತೀವ್ರಗೊಳಿಸಬಹುದಾಗಿದೆ. ಹೀಗಾಗಿ, ಹಿಂದೂ ಮಹಾಸಭಾವು ಹಿಂದೂಗಳನ್ನು ಅದರಲ್ಲೂ ವಿಶೇಷವಾಗಿ ಬಂಗಾಳ ಹಾಗೂ ಅಸ್ಸಾಂನ ಪ್ರಾಂತಗಳಲ್ಲಿರುವವರು ಒಂದು ನಿಮಿಷವನ್ನೂ ವ್ಯರ್ಥಮಾಡದೆ ಸಾಧ್ಯವಾಗುವಷ್ಟು ಪರಿಣಾಮಕಾರಿಯಾಗಿ ಸೇನೆಯನ್ನು ಪ್ರವೇಶಿಸಬೇಕಾಗಿದೆ’’.
ಲಕ್ಷಾಂತರ ಹಿಂದೂ ಯುದ್ಧವೀರರ ಮಹಾಪೂರವೂ ಹಿಂದೂ ಸಂಘಟನಾತ್ಮಕ ಹೃದಯಗಳೊಂದಿಗೆ (ಬ್ರಿಟಿಶರ) ಸೇನೆ, ನೌಕಾಪಡೆ ಹಾಗೂ ವಾಯುಪಡೆಗೆ ಹರಿದುಬರಬೇಕು ಎಂದು ಸಾವರ್ಕರ್ ಕರೆ ನೀಡಿದ್ದರು. ‘‘ಒಂದು ವೇಳೆ ಬ್ರಿಟಿಶ್ ಶಸ್ತ್ರಾಸ್ತ್ರ ಪಡೆಗಳಿಗೆ ಹಿಂದೂ ಗಳು ದೊಡ್ಡ ಸಂಖ್ಯೆಯಲ್ಲಿ ನೇಮಕಗೊಂಡಲ್ಲಿ, ನಮ್ಮ ಹಿಂದೂ ರಾಷ್ಟ್ರವು ಅತ್ಯಂತ ಬಲಶಾಲಿ, ಸ್ಥಿರವಾಗಿ ಹೊರಹೊಮ್ಮಲಿದೆ ಹಾಗೂ ಯುದ್ಧದ ಆನಂತರದ ಸಮಸ್ಯೆಗಳನ್ನು ಅದು ಹಿಂದೂ ವಿರೋಧಿ ನಾಗರಿಕ ಯುದ್ಧವಾಗಿರಲಿ ಅಥವಾ ಸಾಂವಿಧಾನಿಕ ಬಿಕ್ಕಟ್ಟಾಗಿರಲಿ ಅಥವಾ ಶಸ್ತ್ರಾಸ್ತ್ರ ಕ್ರಾಂತಿಯಾಗಿರಲಿ ಅವುಗಳನ್ನು ಎದುರಿಸಲು ಹೆಚ್ಚು ಪ್ರಯೋಜನಕರವಾದ ಸ್ಥಿತಿಯಲ್ಲಿರುವುದು’’ ಎಂದವರು ಅಭಿಪ್ರಾಯಿಸಿದ್ದರು.
ಭಾಗಲ್ಪುರದಲ್ಲಿ ಅವರು ಮಾಡಿದ ಸಮಾರೋಪ ಭಾಷಣವೊಂದರಲ್ಲಿ ಬ್ರಿಟಿಶ್ ಸರಕಾರದ ಸಮರ ಪ್ರಯತ್ನದಲ್ಲಿ ಹಿಂದೂಗಳು ಕೈಜೋಡಿಸಬಹುದೆಂದು ಸಾವರ್ಕರ್ ಮತ್ತೊಮ್ಮೆ ಪ್ರತಿಪಾದಿಸಿದ್ದರು. ಈ ಬಗ್ಗೆ ಅವರು ಸ್ಪಷ್ಟವಾಗಿ ಹೀಗೆ ವಿವರಿಸಿದ್ದರು:
‘‘ಯುದ್ಧದ ಆನಂತರ ದೇಶಗಳ ನಿಲುವು ಹಾಗೂ ವಿಧಿ ಏನೇ ಆಗಿರಲಿ, ಇಂದಿನ ಪ್ರಸಕ್ತ ಸನ್ನಿವೇಶಗಳನ್ನು ಒಟ್ಟಾಗಿ ತೆಗೆದುಕೊಂಡು ಹೇಳುವುದಾದರೆ, ಹಿಂದೂ ಸಂಘಟನಾವಾದಿಗಳು ಕೈಗೊಳ್ಳಬಹುದಾದ ಏಕೈಕ ಕಾರ್ಯಸಾಧ್ಯ ಹಾಗೂ ತುಲನಾತ್ಮಕವಾಗಿ ಪ್ರಯೋಜನಕಾರಿಯಾದ ಪ್ರವೃತ್ತಿಯೆಂದರೆ, ಹಿಂದೂ ಸಂಘಟನಾ ವಾದಿಗಳು ಭಾರತದ ರಕ್ಷಣೆಯ ದೃಷ್ಟಿಯಿಂದ ಬ್ರಿಟಿಶ್ ಸರಕಾರದ ಜೊತೆ, ನಿಸ್ಸಂದೇಹವಾಗಿ ಜೊತೆಗೂಡಬೇಕು. ಹಿಂದೂ ಧ್ಯೇಯಕ್ಕೆ ದ್ರೋಹ ಬಗೆಯದೆಯೇ ನಾವು ಹಾಗೆ ಮಾಡಬಹುದಾಗಿದೆ’’.
ಬ್ರಿಟಿಶರ ಯುದ್ಧ ಪ್ರಯತ್ನಗಳಿಗೆ ಸಹಕರಿಸುವುದರಿಂದ ದೇಶದ ಹಿಂದೂಗಳಿಗೆ ದೊಡ್ಡ ಭವಿಷ್ಯವಿದೆಯೆಂಬ ಚಿಂತನೆಯನ್ನು ಅವರು ಹೊಂದಿದ್ದರೆಂಬುದು ಭಾಗಲ್ಪುರದಲ್ಲಿ ಅವರು ಮಾಡಿದ ಭಾಷಣದ ಅಂತ್ಯದ ಸಾಲುಗಳು ಸ್ಪಷ್ಟಪಡಿಸಿವೆ.
‘‘ರಾತ್ರಿಯ ಕಗ್ಗತ್ತಲ ಸಮಯವು, ಮುಂಜಾನೆಯ ಸ್ವರ್ಣೋದಯಕ್ಕೆ ಸನಿಹದಲ್ಲಿರುತ್ತದೆಯೆಂಬ ನಾಣ್ಣುಡಿಯು, ಇಂದಿಗೆ ಚೆನ್ನಾಗಿ ಒಪ್ಪುತ್ತದೆ. ಪೂರ್ವದಿಂದ ಯುದ್ಧವು ನಮ್ಮ ದಡದಲ್ಲಿ ಪ್ರತ್ಯಕ್ಷವಾಗಿದೆ ಹಾಗೂ ಸ್ವಲ್ಪ ಸಮಯದ ಬಳಿಕ ಅದು ದೇಶದ ಪಶ್ಚಿಮ ಭಾಗದಿಂದಲೂ ನಮಗೆ ಬೆದರಿಕೆಯೊಡ್ಡಬಲ್ಲುದು. ಈ ಯುದ್ಧದ ತೀವ್ರತೆ, ವಿನಾಶ ಹಾಗೂ ಪರಿಣಾಮವು ಹೋಲಿಕೆಗೂ ಮೀರಿದ್ದಾಗಿರಬಹುದು. ಆದರೆ, ಜಗತ್ತಿಗೆ ಹೊಸ ದಿನದ ಉದಯವೂ ಆಗಿರುವುದು ಹಾಗೂ ಕೇವಲ ನೂತನ ಆದರೆ ಉತ್ತಮವಾದ ಸುವ್ಯವಸ್ಥೆಯು ಈ ಜಗತ್ತನ್ನು ಅರಾಜಕತೆಯಿಂದ ಹೊರತರಬಲ್ಲದು. ಯಾರೋ ಕಳೆದುಕೊಂಡಿದ್ದನ್ನು ಅಂತಿಮವಾಗಿ ಅವರು ಅಧಿಕವಾಗಿ ಗಳಿಸಲಿದ್ದಾರೆ. ನಾವು ಕೂಡಾ ಕಾಲದೊಂದಿಗೆ ಸಾಗೋಣ ಹಾಗೂ ಒಳಿತಿಗಾಗಿ ಪ್ರಾರ್ಥಿಸುವ ಹಾಗೂ ಕಾರ್ಯಪ್ರವೃತ್ತರಾಗುವ’’.
ಸುಭಾಶ್ಚಂದ್ರ ಬೋಸ್ ಅವರಂತಹ ನಾಯಕರು ಶಸ್ತ್ರಾಸ್ತ್ರ ಕ್ರಾಂತಿಯ ಮೂಲಕ ಭಾರತದಿಂದ ಬ್ರಿಟಿಶರ ಆಳ್ವಿಕೆಯನ್ನು ಕಿತ್ತೊಗೆಯಲು ಕಾರ್ಯತಂತ್ರವನ್ನು ರೂಪಿಸುತ್ತಿರುವಾಗಲೇ ಬ್ರಿಟಿಶರ ಯುದ್ಧ ಪ್ರಯತ್ನಗಳಿಗೆ ಸಾವರ್ಕರ್ ಸಂಪೂರ್ಣ ಬೆಂಬಲ ನೀಡಿರುವುದು ಒಂದು ಚೆನ್ನಾಗಿ ಯೋಚಿಸಿ ಹಮ್ಮಿಕೊಳ್ಳಲಾದ ಹಿಂದುತ್ವ ವಾದಿ ಉದ್ದೇಶವಾಗಿದೆ. ಮಥುರಾದಲ್ಲಿ (1940ರಲ್ಲಿ ನಡೆದ ಹಿಂದೂ ಮಹಾಸಭಾದ 22ನೇ ಅಧಿವೇಶನ) ಅವರು ತನ್ನ ಆಯ್ಕೆಯನ್ನು ಸ್ಪಷ್ಟಪಡಿಸಿದ್ದರು.
ಬ್ರಿಟಿಷರಿಗೆ ಸಾವರ್ಕರ್ ಅವರ ಬೆಂಬಲದ ಹಿಂದೆ, ಒಂದು ವೇಳೆ ಇಂಗ್ಲೆಂಡ್ ಈ ಯುದ್ಧದಲ್ಲಿ ವಿನಾಶಕರವಾಗಿ ಪರಾಭವಗೊಂಡಲ್ಲಿ, ಅದು ತನ್ನ ಭಾರತೀಯ ಸಾಮ್ರಾಜ್ಯವನ್ನು, ಅದರ ಖಜಾನೆ, ದಾಸ್ತಾನುಗಳನ್ನು ಹಾಗೂ ಶಸ್ತ್ರಾಸ್ತ್ರ ಸಂಗ್ರಹವನ್ನು ಜರ್ಮನರ ಕೈಗೆ ಒಪ್ಪಿಸಬೇಕಾದೀತು ಎಂಬ ತರ್ಕವು ಅಡಗಿತ್ತು. ಆದಾಗ್ಯೂ ಬ್ರಿಟಿಶ್ ಚಕ್ರಾಧಿಪತ್ಯದ ಅಭೇದ್ಯ ಶಕ್ತಿಯಲ್ಲಿ ಅವರು ಬಲವಾದ ನಂಬಿಕೆ ಇರಿಸಿದ್ದರು.
ಮಥುರಾದಲ್ಲಿ ಅವರು ಮಾಡಿದ ಅಧ್ಯಕ್ಷೀಯ ಭಾಷಣವು, ಬ್ರಿಟಿಶರ ಸಾಮ್ರಾಜ್ಯಶಾಹಿವಾದದ ಸ್ಥೂಲಕಲ್ಪನೆಗೆ ಅವರ ನಿಸ್ಸಂಕೋಚ ಬೆಂಬಲದ ಜೀವಂತ ಸಾಕ್ಷಿಯಾಗಿದೆ. ಭಾರತವನ್ನು ಬ್ರಿಟಿಶರ ಆಳ್ವಿಕೆಯಿಂದ ವಿಮೋಚನೆಗೊಳಿಸುವ ನೇತಾಜಿಯವರ ಪ್ರಯತ್ನವನ್ನು ಅವರು ಸಾರಾಸಗಟಾಗಿ ತಿರಸ್ಕರಿಸಿದ್ದರು.
ಬ್ರಿಟಿಶರ ಸೇನಾ ಉದ್ದೇಶಗಳಿಗೆ ಸಾವರ್ಕರ್ ಅವರ ಬೆಂಬಲಕ್ಕೆ ಯಾವುದೇ ಅಸ್ಪಷ್ಟತೆ ಇರಲಿಲ್ಲ. ವಸಾಹತುಶಾಹಿ ಧಣಿಗಳಿಗೆ ತನ್ನ ನಿರ್ಲಜ್ಜ ಬೆಂಬಲವನ್ನು ಸಮರ್ಥಿಸಲು ಅವರು ವಿಚಿತ್ರವಾದ ವಾದವೊಂದನ್ನು ಮಂಡಿಸಿದರು.
‘‘ನಮ್ಮ ಪರ ಹಾಗೂ ವಿರುದ್ಧವಾ ದಾರಿಗಳನ್ನು ಹಾಗೂ ಅಂಶಗಳನ್ನು ಗಮನಕ್ಕೆ ತೆಗೆದುಕೊಂಡ ಬಳಿಕ, ನಮಗೆ ಯುದ್ಧವು ನೀಡಿದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವುದು ಅತ್ಯುತ್ತಮ ಮಾರ್ಗವಾಗಿದೆ. ಆ ಮೂಲಕ ಸನ್ನಿವೇಶದ ಒತ್ತಾಯಕ್ಕೆ ಕಟ್ಟುಬಿದ್ದು, ಬ್ರಿಟಿಶ್ ಸರಕಾರವು ನಮ್ಮ ಜನತೆಯ ಮಿಲಿಟರೀಕರಣ ಹಾಗೂ ಕೈಗಾರೀಕರಣಕ್ಕೆ ನೆರವಾಗಲಿದೆ’’ ಎಂಬುದು ಅವರ ತರ್ಕವಾಗಿತ್ತು.
ಎರಡನೆ ಮಹಾಯುದ್ಧದ ಹಿನ್ನೆಲೆಯಲ್ಲಿ ತನ್ನ ಶಸ್ತ್ರಾಸ್ತ್ರ ಪಡೆಗಳ ಹೊಸ ಬೆಟಾಲಿಯನ್‌ಗಳನ್ನು ರಚಿಸಲು ಬ್ರಿಟಿಶ್ ಸರಕಾರವು ನಿರ್ಧರಿಸಿದಾಗ, ಸಾವರ್ಕರ್ ಅವರ ಸಾರಥ್ಯದ ಹಿಂದೂ ಮಹಾಸಭಾವು ಹಿಂದೂಗಳನ್ನು ಈ ಕಾರ್ಯದಲ್ಲಿ ದೊಡ್ಡ ಮಟ್ಟದಲ್ಲಿ ನೇಮಕಗೊಳಿಸಲು ನಿರ್ಧರಿಸಿತು. ಮಥುರಾದಲ್ಲಿ ನಡೆದ ಹಿಂದೂ ಮಹಾಸಭಾದ ಅಧಿವೇಶನದಲ್ಲಿ ಈ ವಿಷಯವನ್ನು ಸಾವರ್ಕರ್ ತನ್ನ ಪ್ರತಿನಿಧಿಗಳಿಗೆ ವರದಿ ಮಾಡಿದರು.
ಸಹಜವಾಗಿಯೇ, ವ್ಯಾವಹಾರಿಕ ರಾಜಕೀಯದ ನೇರ ಅಂತರ್‌ದೃಷ್ಟಿಯೊಂದಿಗೆ ಬ್ರಿಟಿಶ್ ಸರಕಾರವು ಎಲ್ಲಿಯವರೆಗೆ ಭಾರತದ ರಕ್ಷಣೆಯ ಪ್ರಶ್ನೆಯ ಬಗ್ಗೆ ಹಾಗೂ ಭಾರತದಲ್ಲಿ ನೂತನ ಮಿಲಿಟರಿ ಪಡೆಗಳನ್ನು ರಚಿಸುವ ಬಗ್ಗೆ ಕಾಳಜಿ ವಹಿಸುವುದೋ ಅಲ್ಲಿಯವರೆಗೆ ಅದರ ಸರ್ವರೀತಿಯ ಯುದ್ಧ ಪ್ರಯತ್ನಗಳಲ್ಲಿ ಪಾಲ್ಗೊಳ್ಳಲು ಹಿಂದೂ ಮಹಾಸಭಾವು ನಿರ್ಧರಿಸಿತು.
ಇಂತಹ ನಿಲುವಿನ ಬಗ್ಗೆ ಸಾಮಾನ್ಯ ಭಾರತೀಯರಲ್ಲಿ ಗಾಢವಾದ ಅಸಮಾಧಾನವು ಹೆಚ್ಚುತ್ತಿರುವುದು ಸಾವರ್ಕರ್ ಅವರಿಗೆ ತಿಳಿಯದೇ ಏನಿಲ್ಲ. ಯುದ್ಧ ಪ್ರಯತ್ನಗಳಲ್ಲಿ ಬ್ರಿಟಿಶರ ಜೊತೆ ಸಹಕರಿಸುವ ಹಿಂದೂ ಮಹಾಸಭಾದ ನಿರ್ಧಾರದ ಬಗ್ಗೆ ವ್ಯಕ್ತವಾದ ಯಾವುದೇ ರೀತಿಯ ಟೀಕೆಗಳನ್ನು ಅವರು ತಳ್ಳಿಹಾಕಿದ್ದರು.
ಸಾರ್ವತ್ರಿಕವಾಗಿ ಭಾರತೀಯ ಹಿತಾಸಕ್ತಿಗಳು, ಬ್ರಿಟಿಶ್ ಹಿತಾಸಕ್ತಿಗಳಿಗೆ ವಿರುದ್ಧವಾಗಿದ್ದಲ್ಲಿ ಬ್ರಿಟಿಶ್ ಸರಕಾರದ ಜೊತೆ ನಾವು ಕೈಜೋಡಿಸುವ ಯಾವುದೇ ಹೆಜ್ಜೆಯು ಹೇಡಿತನದ, ದೇಶದವಿರೋಧಿ ಕೃತ್ಯವಾದೀತು ಎಂಬ ರಾಜಕೀಯ ಮೂರ್ಖತನದೊಂದಿಗೆ ಯೋಚಿಸುವುದು ಭಾರತೀಯ ನಾಗರಿಕರಲ್ಲಿ ರೂಢಿಯಾಗಿಬಿಟ್ಟಿದೆ ಎಂದವರು ಅಭಿಪ್ರಾಯಿಸಿದ್ದರು.
ಒಂದೆಡೆ, ಭಾರತವನ್ನು ಬ್ರಿಟಿಶರ ಆಳ್ವಿಕೆಯಿಂದ ವಿಮೋಚನೆಗೊಳಿಸಲು ಸುಭಾಶ್ಚಂದ್ರ ಬೋಸ್ ಅವರು ಜರ್ಮನ್ ಹಾಗೂ ಜಪಾನಿ ಪಡೆಗಳ ನೆರವನ್ನು ಪಡೆಯುವ ನಿಟ್ಟಿನಲ್ಲಿ ಮಿಲಿಟರಿ ಕಾರ್ಯತಂತ್ರವನ್ನು ರೂಪಿಸಲು ಶ್ರಮಿಸುತ್ತಿದ್ದರೆ, ಇನ್ನೊಂದೆಡೆ ಸಾವರ್ಕರ್ ಅವರು ನೇರವಾಗಿ ಬ್ರಿಟಿಶ್ ವಸಾಹತು ಧಣಿಗಳಿಗೆ ಸಹಕರಿಸುವುದರಲ್ಲಿ ವ್ಯಸ್ತರಾಗಿದ್ದರು. ನೇತಾಜಿ ಪ್ರತಿಪಾದಿಸಿದ ಧ್ಯೇಯಕ್ಕೆ ಬಗೆದ ದ್ರೋಹ ಇದಾಗಿದೆ. ತದನಂತರ ಆಝಾದ್ ಹಿಂದ್ ಫೌಝ್ (ಐಎನ್‌ಎ)ನ ವೀರ ಯೋಧರನ್ನು ಹತ್ಯೆಗೈದ ಹಾಗೂ ಅಂಗಹೀನಗೊಳಿಸಿದ ಬ್ರಿಟಿಶ್ ಸರಕಾರದ ಜೊತೆ ಸಾವರ್ಕರ್ ಹಾಗೂ ಹಿಂದೂ ಮಹಾಸಭಾ ಬಹಿರಂಗವಾಗಿ ಕೈಜೋಡಿಸಿತ್ತು. ಬ್ರಿಟಿಶ್ ಧಣಿಗಳನ್ನು ವ್ಯಾಪಕವಾಗಿ ಪ್ರಶಂಸಿಸುತ್ತಾ, ಸಾವರ್ಕರ್ ಅವರು ಮಥುರಾದಲ್ಲಿ ತನ್ನ ಅನುಯಾಯಿಗಳೊಂದಿಗೆ ಮಾತನಾಡುತ್ತಾ, ಏಶ್ಯಾವನ್ನು ಯುರೋಪಿನ ಪ್ರಭಾವದಿಂದ ಮುಕ್ತಗೊಳಿಸುವ ಘೋಷಿತ ಗುರಿಯೊಂದಿಗೆ ಜಪಾನಿ ಪಡೆಗಳು ಮುನ್ನುಗ್ಗುತ್ತಿರುವುದರಿಂದಾಗಿ, ಬ್ರಿಟಿಶ್ ಸರಕಾರಕ್ಕೆ ತನ್ನ ಸಶಸ್ತ್ರ ಪಡೆಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾರತೀಯರ ಆವಶ್ಯಕತೆಯಿದ್ದು, ಅದಕ್ಕೆ ನೆರವಾಗಬೇಕೆಂದು ಹೇಳಿದ್ದರು. ಬ್ರಿಟಿಶರ ಯುದ್ಧ ಕಾರ್ಯತಂತ್ರವನ್ನು ಶ್ಲಾಘಿಸುತ್ತಾ ಅವರು ಹೀಗೆ ಹೇಳಿದ್ದರು. ಒಂದು ವೇಳೆ ಜಪಾನ್ ಜೊತೆ ಯುದ್ಧವು ಭುಗಿಲೆದ್ದಲ್ಲಿ, ಸ್ವತಃ ಭಾರತವು ಎಲ್ಲ ಸಮರ ಸಿದ್ಧತೆಗಳ ತೀವ್ರತೆಯ ಕೇಂದ್ರ ಬಿಂದುವಾಗಲಿದೆಯೆಂಬುದನ್ನು ಬ್ರಿಟಿಶರ ದೂರದೃಷ್ಟಿಯ ರಾಜಕೀಯ ಮುತ್ಸದ್ದಿತನವು ಅರಿತುಕೊಂಡಿತ್ತು. ನಮ್ಮ ಗಡಿಗಳ ಸಮೀಪ ಮುನ್ನಡೆಯನ್ನು ಸಾಧಿಸಲು ಜಪಾನ್ ಸಫಲವಾಗಿರುವುದರಿಂದ ಭಾರತೀಯ ಸೇನಾಧಿಕಾರಿಗಳ ನೇತೃತ್ವದಲ್ಲಿನ ಭಾರತೀಯರಿರುವ 20 ಲಕ್ಷ ಸಂಖ್ಯಾಬಲದ ಸೇನೆಯನ್ನು ರಚಿಸುವ ಅಗತ್ಯವಿದೆ.
ಸಾವರ್ಕರ್ ಅವರು ಮುಂದಿನ ಕೆಲವು ವರ್ಷಗಳನ್ನು ಬ್ರಿಟಿಶ್ ಸಶಸ್ತ್ರ ಪಡೆಗಳಿಗೆ ನೇಮಕಾತಿ ಶಿಬಿರಗಳನ್ನು ಸಂಘಟಿಸುವುದರಲ್ಲಿಯೇ ಕಳೆದರು. ತದನಂತರ ಈ ಪಡೆಗಳು ಈಶಾನ್ಯ ಭಾರತದ ವಿವಿಧೆಡೆ ಐಎನ್‌ಎ ಸೈನ್ಯದ ಯೋಧರ ನರಮೇಧ ನಡೆಸುವುದರಲ್ಲಿದ್ದವು. ಸೇನೆ, ನೌಕಾಪಡೆ ಹಾಗೂ ವಾಯುಪಡೆಗಳಿಗೆ ಸಾಧ್ಯವಿದ್ದಷ್ಟು ಸಂಖ್ಯೆಯಲ್ಲಿ ಹಲವಾರು ಹಿಂದೂಗಳಿಗೆ ಪ್ರವೇಶವನ್ನು ದೊರಕಿಸಿಕೊಡುವ ‘ತುರ್ತು ಕಾರ್ಯಕ್ರಮ’ವನ್ನು ಅಳವಡಿಸುವ ನಿರ್ಣಯವನ್ನು ಕೈಗೊಳ್ಳುವ ಮೂಲಕ ಹಿಂದೂ ಮಹಾಸಭಾದ ಮಥುರಾ ಸಮಾವೇಶವು ಸಮಾರೋಪಗೊಂಡಿತು. ಹಿಂದೂಮಹಾಸಭಾದ ಪ್ರಯತ್ನದ ಮೂಲಕವೇ ಒಂದು ವರ್ಷದಲ್ಲಿ ಬ್ರಿಟಿಶ್ ಸಶಸ್ತ್ರ ಪಡೆಗಳಲ್ಲಿ ಒಂದು ಲಕ್ಷದಷ್ಟು ಹಿಂದೂಗಳು ನೇಮಕಗೊಂಡಿದ್ದಾರೆಂದೂ ಅವರು ಮಾಹಿತಿ ನೀಡಿದ್ದಾರೆ. ಈ ಅವಧಿಯಲ್ಲಿ ಬ್ರಿಟಿಶ್ ಪಡೆಗಳಿಗೆ ಸೇರ್ಪಡೆಗೊಳ್ಳುವಂತೆ ಯುವಜನರನ್ನು ಪ್ರೇರೇಪಿಸುವುದಕ್ಕಾಗಿ ಸಾವರ್ಕರ್ ಅವರನ್ನು ಆರೆಸ್ಸೆಸ್ ಯುವ ಸಮಾವೇಶಗಳಿಗೆ ಆಹ್ವಾನಿಸುತ್ತಿತ್ತು.
ಬ್ರಿಟಿಶರ ಯುದ್ಧ ಪ್ರಯತ್ನಗಳಿಗೆ ಕೈಜೋಡಿಸುವ ಅಗತ್ಯವನ್ನು ಒತ್ತಿ ಹೇಳಿದ್ದ ಸಾವರ್ಕರ್ ಅವರು, ಹಿಂದೂ ಮಹಾಸಭಾದ ಕಾರ್ಯಕರ್ತರಿಗೆ ಈ ರೀತಿಯ ನಿರ್ದೇಶನಗಳನ್ನು ನೀಡಿದ್ದರು.
‘‘ಪ್ರಸಕ್ತ ಸನ್ನಿವೇಶದಲ್ಲಿ ಸಾಧ್ಯವಾಗಿರುವಂತಹ ಬ್ರಿಟಿಶರೊಂದಿಗಿನ ಈ ಅನಿವಾರ್ಯವಾದ ಸಹಕಾರವನ್ನು, ನಿಮ್ಮ ದೇಶಕ್ಕೆ ಲಾಭದಾಯಕವಾಗಿ ಪರಿವರ್ತಿಸಿಕೊಳ್ಳಿರಿ. ಸರಕಾರದ ಜೊತೆ ಸಹಕರಿಸದೆ ಇರುವುದು ಹಾಗೂ ಸಶಸ್ತ್ರ ಅಕ್ರಮಣದ ಸಂದರ್ಭದಲ್ಲಿ ಅಹಿಂಸೆ ಹಾಗೂ ಪ್ರತಿರೋಧರಹಿತತೆಯ ಸೋಗಿನಲ್ಲಿ ಯುದ್ಧನಿರತಪಡೆಗಳನ್ನು ಸೇರಿಕೊಳ್ಳುವುದಿಲ್ಲವೆಂದು ಪ್ರತಿಪಾದಿಸುವುದು, ಆತ್ಮವಂಚನೆಯೆನಿಸಿಕೊಳ್ಳುತ್ತದೆ’’.
ಬ್ರಿಟಿಶ್ ಸಶಸ್ತ್ರ ಪಡೆಗಳಲ್ಲಿ ನೇಮಕಗೊಳ್ಳಲು ಬಯಸುವ ಹಿಂದೂಗಳಿಗೆ ನೆರವಾಗಲು ಹಿಂದೂ ಮಹಾಸಭಾವು ಸಾವರ್ಕರ್ ಅವರ ನಾಯಕತ್ವದಲ್ಲಿ ದೇಶದ ವಿವಿಧ ಪ್ರಾಂತಗಳಲ್ಲಿ ಉನ್ನತಮಟ್ಟದ ಮಂಡಳಿ ಸಭೆಗಳನ್ನು ನಡೆಸಿತ್ತು. ಈ ಮಂಡಳಿಗಳು ಬ್ರಿಟಿಶ್ ಸರಕಾರದ ಜೊತೆ ನೇರ ಸಂಪರ್ಕದಲ್ಲಿದ್ದವೆಂಬುದು ಸಾವರ್ಕರ್ ಅವರ ಈ ಕೆಳಗಿನ ಮಾತುಗಳಿಂದ ನಮಗೆ ತಿಳಿಯುತ್ತದೆ.
‘‘ಸೇನೆಗೆ ಹಿಂದೂಗಳ ನೇಮಕಾತಿಯ ಸಂದರ್ಭದಲ್ಲಿ ಉಂಟಾಗುವ ತೊಂದರೆಗಳು ಹಾಗೂ ಅವರ ಅಹವಾಲುಗಳನ್ನು ನಿಭಾಯಿಸಲು, ದಿಲ್ಲಿಯಲ್ಲಿ ಹಿಂದೂ ಮಹಾಸಭಾ ಗಣಪತ್ ರಾಯ್, ಬಿ.ಎ., ಎಲ್‌ಎಲ್‌ಬಿ, ನ್ಯಾಯವಾದಿ 51, ಪಾಂಚ್‌ಕ್ವೀನ್ ರಸ್ತೆ, ಹೊಸದಿಲ್ಲಿ ಇವರು ಸಂಚಾಲಕರಾಗಿರುವ ಕೇಂದ್ರೀಯ ಉತ್ತರ ಹಿಂದೂ ಮಿಲಿಟರೀಕರಣ ಮಂಡಳಿಯನ್ನು ರಚಿಸಿತ್ತು. ಕೇಂದ್ರೀಯ ದಕ್ಷಿಣ ಹಿಂದೂ ಮಿಲಿಟರೀಕರಣ ಮಂಡಳಿಯನ್ನು ಮಹಾರಾಷ್ಟ್ರ ಪ್ರಾಂತೀಯ ಹಿಂದೂ ಮಹಾಸಭಾದ ಅಧ್ಯಕ್ಷ ಎಲ್.ಬಿ.ಬೋಪಾಟ್ಕರ್, ಎಂ.ಎ., ಎಲ್‌ಎಲ್‌ಬಿ, ಇವರ ಅಧ್ಯಕ್ಷತೆಯಲ್ಲಿ ರಚಿಸಿತ್ತು. ಈ ಮಿಲಿಟರೀಕರಣ ಮಂಡಳಿಗಳು ಅರ್ಜಿಗಳನ್ನು ಸರ್ ಜ್ವಾಲಾ ಪ್ರಸಾದ್ ಶ್ರೀವಾಸ್ತವ, ಬ್ಯಾರಿಸ್ಟರ್ ಜಮ್ನಾದಾಸ್‌ಜಿ ಮೆಹ್ತಾ, ಬಾಂಬೆ, ವಿ.ವಿ. ಕಾಲಿಕರ್, ಶಾಸಕ ನಾಗಪುರ ಹಾಗೂ ರಾಷ್ಟ್ರೀಯ ರಕ್ಷಣಾ ಮಂಡಳಿ ಅಥವಾ ಯುದ್ಧ ಸಲಹಾ ಸಮಿತಿಗೆ ಕಳುಹಿಸಿದಾಗ, ಅದು ಸೇನಾನೇಮಕಾತಿಯಲ್ಲಿ ಎದುರಾಗುವ ತೊಂದರೆಗಳನ್ನು ನಿವಾರಿಸಲು ಖಂಡಿತವಾಗಿಯೂ ತಮ್ಮಿಂದಾಗುವಷ್ಟು ಪ್ರಯತ್ನಿಸಲಿದೆ’’.
ಬ್ರಿಟಿಶ್ ಸರಕಾರವು ತನ್ನ ಅಧಿಕೃತ ಯುದ್ಧ ಸಮಿತಿಗಳಲ್ಲಿ ಹಿಂದೂ ಮಹಾಸಭಾದ ನಾಯಕರನ್ನು ನೇಮಿಸಿಕೊಂಡಿರುವುದನ್ನು ಇದು ಸ್ಪಷ್ಟವಾಗಿ ತೋರಿಸಿಕೊಡುತ್ತದೆ. ಸಾವರ್ಕರ್ ಓರ್ವ ಶ್ರೇಷ್ಠ ದೇಶಭಕ್ತ ಹಾಗೂ ಸ್ವಾತಂತ್ರ ಹೋರಾಟಗಾರನೆಂದು ಘೋಷಿಸುವವರು, ಬ್ರಿಟಿಶ್ ಪಡೆಗಳಿಗೆ ಸೇರ್ಪಡೆಗೊಳ್ಳಲಿರುವ ಹಿಂದೂಗಳಿಗೆ ಸಾವರ್ಕರ್ ನೀಡಿರುವ ಸೂಚನೆಗಳನ್ನು ಓದಿದಾಗ ತಮ್ಮ ತಲೆಗಳನ್ನು ನಾಚಿಕೆಯಿಂದ ಬಾಗಿಸಬೇಕಾಗುತ್ತದೆ.
ಭಾರತೀಯ (ಬ್ರಿಟಿಶ್ ಸರಕಾರದ) ಪಡೆಗಳಿಗೆ ಸೇರ್ಪಡೆ ಗೊಳ್ಳುವ ಹಿಂದೂಗಳು ಪರಿಪೂರ್ಣವಾಗಿ ಸರಿಹೊಂದಿಕೊಳ್ಳಬೇಕು ಹಾಗೂ ಮಿಲಿಟರಿ ಶಿಸ್ತಿಗೆ ವಿಧೇಯರಾಗಿರಬೇಕಿದ್ದು, ಹಿಂದೂಗಳ ಘನತೆಯನ್ನು ಬ್ರಿಟಿಶರು ಉದ್ದೇಶಪೂರ್ವಕವಾಗಿ ಅವಮಾನಿಸದಂತೆ ವರ್ತಿಸಬೇಕಾಗುತ್ತದೆ.
ಅಚ್ಚರಿಕರವೆಂದರೆ ವಸಾಹತುಶಾಹಿ ಧಣಿಗಳ ಸಶಸ್ತ್ರಪಡೆಗಳಿಗೆ ಸೇರ್ಪಡೆಗೊಳ್ಳುವುದು ಯಾವುದೇ ಆತ್ಮಗೌರವವುಳ್ಳ ಹಾಗೂ ದೇಶಭಕ್ತ ಭಾರತೀಯನಿಗೆ ಅಪಮಾನಕರವೆಂದು ಸಾವರ್ಕರ್ ಎಂದೂ ಯೋಚಿಸಿರಲಿಲ್ಲ. ಮಹಾಸಭಾ ಹಾಗೂ ಮಹಾಸಮರ ವೆಂದು ಹೆಸರಿಸಲಾದ ನಿರ್ಣಯದ ಕರಡನ್ನು ಕೂಡಾ ಅವರೊಬ್ಬರೇ ರಚಿಸಿದ್ದರು. ಅದರಲ್ಲಿ ಹೀಗೆ ಬರೆಯಲಾಗಿತ್ತು.
‘‘ಭಾರತವನ್ನು ಸೇನಾದಾಳಿಯಿಂದ ರಕ್ಷಿಸುವುದು ಬ್ರಿಟಿಶ್ ಸರಕಾರ ಹಾಗೂ ನಮಗೆ ಸಮಾನವಾಗಿ ಆತಂಕಕಾರಿಯಾಗಿದೆ. ಆದರೆ ದುರದೃಷ್ಟವಶಾತ್ ಯಾವುದೇ ನೆರವು ಪಡೆಯದೆ ಆ ಹೊಣೆಗಾರಿಕೆಯನ್ನು ವಹಿಸಿಕೊಳ್ಳುವ ಸ್ಥಿತಿಯಲ್ಲಿ ಈಗ ನಾವಿಲ್ಲ. ಈ ವಿಷಯದಲ್ಲಿ ಭಾರತ ಹಾಗೂ ಬ್ರಿಟನ್ ನಡುವೆ ವಿಶಾಲಹೃದಯದ ಸಹಕಾರವೇರ್ಪಡಲು ಸಾಕಷ್ಟು ಅವಕಾಶಗಳಿವೆ.’’
ಎರಡನೆ ಜಾಗತಿಕ ಯುದ್ಧದ ಅವಧಿಯಲ್ಲಿ ಭಾರತದ ವಿವಿಧ ಕ್ರಾಂತಿಕಾರಿ ಗುಂಪುಗಳು ಹಾಗೂ ಸುಭಾಶ್ಚಂದ್ರ ಬೋಸ್ ಅವರು ಸೋವಿಯತ್ ರಶ್ಯದಂತಹ ದೇಶಗಳಿಂದ ನೆರವನ್ನು ಪಡೆಯಲು ಯತ್ನಿಸುತ್ತಿದ್ದರು.
ಬ್ರಿಟಿಶರ ಸೇನಾಪಡೆಗಳಿಗೆ ಹಿಂದೂಗಳು ಭಾರೀ ಸಂಖ್ಯೆಯಲ್ಲಿ ನಿಯೋಜನೆಗೊಳ್ಳುವುದನ್ನು ಉತ್ತೇಜಿಸಲು ಸಾವರ್ಕರ್ ಅವರು ತನ್ನ 59ನೇ ಜನ್ಮದಿನಾಚರಣೆಯ ಸಂದರ್ಭವನ್ನು ಕೂಡಾ ಬಳಸಿಕೊಂಡಿದ್ದರು.
ಹಿಂದೂ ಮಹಾಸಭಾದ ಅಧ್ಯಕ್ಷರಾದ ಬ್ಯಾರಿಸ್ಟರ್ ವಿ.ಡಿ.ಸಾವರ್ಕರ್ ಅವರು ಆಗ ಭಾರತದಲ್ಲಿನ ಬ್ರಿಟಿಶ್ ಸೇನಾಪಡೆಯ ವರಿಷ್ಠರಾಗಿದ್ದ ಜನರಲ್ ವಾವೆಲ್ ಹಾಗೂ ಭಾರತದ ವೈಸ್‌ರಾಯ್ ಅವರಿಗೆ 1941ರ ಜುಲೈ 18ರಂದು, ಟೆಲಿಗ್ರಾಂ ಸಂ