50 ವರ್ಷಗಳಲ್ಲಿ ರಜೆಯೇ ಮಾಡದ ವ್ಯಕ್ತಿಗೆ ಸಿಕ್ಕ ರಜೆ ವೇತನ ಎಷ್ಟು ಕೋಟಿ ರೂ. ಗೊತ್ತಾ ?
ಹೊಸದಿಲ್ಲಿ, ಜ. 29: ನಾವು ಪ್ರೀತಿಸುವ ಕೆಲಸದಲ್ಲಿ ಬದ್ಧತೆ ತೋರಿಸಲು ಹಲವು ದಾರಿಗಳಿವೆ. ಅದರಲ್ಲಿ ಒಂದು ದಿನನಿತ್ಯ ಕೆಲಸಕ್ಕೆ ಹಾಜರಾಗುವುದು. ಲಾರ್ಸನ್ ಆ್ಯಂಡ್ ಟರ್ಬೊ ಕಂಪೆನಿಯ ನಿವೃತ್ತ ಕಾರ್ಯನಿರ್ವಹಣೇತರ ಅಧ್ಯಕ್ಷ ಅನಿಲ್ ಕುಮಾರ್ ಮಣಿಬಾಯಿ ನಾಯ್ಕ್ ಕಳೆದ 50 ವರ್ಷಗಳಿಂದ ಒಂದೇ ಒಂದು ರಜೆ ಹಾಕದೆ ಕೆಲಸಕ್ಕೆ ಹಾಜರಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ನಾಯ್ಕ್ ಅವರು ಬಾಕಿ ಉಳಿದ ರಜೆಯ ವೇತನವಾಗಿ 19 ಕೋ. ರೂ. ಪಡೆದುಕೊಂಡಿದ್ದಾರೆ ಎಂದು ಬ್ಯುಸಿನಸ್ ಇನ್ಸೈಡರ್ ವರದಿ ಮಾಡಿದೆ. ದಿನಗಳ ಹಿಂದೆ ನಡೆದ ದೇಶದ 70ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ನಾಯ್ಕ್ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ನಾಯ್ಕ್ ಅವರು 1965ರಲ್ಲಿ ಎಲ್ ಆ್ಯಂಡ್ ಟಿಗೆ ಜೂನಿಯರ್ ಇಂಜಿನಿಯರ್ ಆಗಿ ಸೇರಿದ್ದರು. ಭಡ್ತಿ ಹೊಂದಿ 1986ರಲ್ಲಿ ಕಂಪೆನಿಯ ಜನರಲ್ ಮ್ಯಾನೇಜರ್ ಹುದ್ದೆಗೆ ಏರಿದ್ದರು. 2003ರಲ್ಲಿ ಅವರು ಎಲ್ ಆ್ಯಂಡ್ ಟಿ ಅಧ್ಯಕ್ಷರಾಗಿದ್ದರು.
Next Story