ಸ್ಥಳೀಯ ಅಕ್ಕಿ ತಳಿಗಳ ಹಕ್ಕಿನ ಕಾವಲುಗಾರ!
ಅಕ್ಕಿಗಳ ವಿಧಗಳ ವಿಷಯದಲ್ಲಿ ಘನಿ ಖಾನ್ ಓರ್ವ ಚಲಿಸುವ ಜ್ಞಾನಕೋಶವಾಗಿದ್ದಾರೆ. ಅವರು ಹೇಳುವಂತೆ, ಭತ್ತವನ್ನು ನೀರಾವರಿ ಬೆಳೆ ಎಂದು ತಿಳಿಯುವುದು ತಪ್ಪು. ದೊಡ್ಡಿ ಬಟ್ಟ, ಗಂಗದಲೆ ಮತ್ತು ಬಿಡ್ಡಿ ದೊಡ್ಡಿಯಂಥ ಅಕ್ಕಿ ತಳಿಗಳನ್ನು ಒಂದೆರಡು ಮಳೆ ಪಡೆಯುವ ಜಮೀನಿನಲ್ಲೂ ಬೆಳೆಯಬಹುದು ಎಂದು ಅವರು ಹೇಳುತ್ತಾರೆ. ರತ್ನಚೂಡಿ, ಎಚ್ಎಂಟಿ, ಎನ್ಎಂಎಸ್-11 ಇತ್ಯಾದಿ ಹೆಚ್ಚು ಇಳುವರಿ ನೀಡುವ ತಳಿಗಳಾಗಿದ್ದರೆ ಜೀರಿಗೆ ಸಣ್ಣ, ರಸಕದಮ್, ಗಂಧಸಾಲೆ, ಪರಿಮಳ ಸಣ್ಣ ಮತ್ತು ಮುಗದ್ ಸುಗಂಧ್ ಬೇಯಿಸುವ ವೇಳೆ ಉತ್ತಮ ಪರಿಮಳ ಹೊರಸೂಸುತ್ತವೆ ಎಂದು ಖಾನ್ ವಿವರಿಸುತ್ತಾರೆ.
ಘನಿ ಖಾನ್ ಕುಟುಂಬದ ಜಮೀನಿನಲ್ಲಿ ಆರೇಳು ತಲೆಮಾರುಗಳಷ್ಟು ಹಳೆಯ ಮಾವಿನ ಮರಗಳೂ ಇವೆ. ಈ ಮರಗಳಲ್ಲಿ ಸ್ಥಳೀಯ ವಿಧಗಳಾದ ಮೋಸಂಬಿ ಕಾ ಆಮ್ (ಮುಸಂಬಿಯಂಥ ರುಚಿ), ಸೇಬ್ ಕಾ ಆಮ್ (ಸೇಬಿನ ರುಚಿ), ಫೀಕಾ ಆಮ್ (ಮಧುಮೇಹಿಗಳಿಗೆ), ಕಾಲೆ ಮೊಗಬಾ, ಬಡಾ ಗೋಲಾ, ಮಂಗಮರಿ, ಮಂಜಿ ಬಿ ಪಸಂದ್, ಮಿಟ್ಮೈ ಪಸಂದ್ ಇತ್ಯಾದಿ ಮಾವುಗಳು ಬೆಳೆಯುತ್ತವೆ. ಇವುಗಳಲ್ಲಿ ಕೆಲವೊಂದು ವಿಧಗಳನ್ನು ದುಬೈಯ ಲುಲು ಮಾಲ್ನ ಪೂರೈಕೆದಾರರು ಖರೀದಿಸುತ್ತಾರೆ.
ಕರ್ನಾಟಕದ ಕಿರ್ಗಾವಲು ಗ್ರಾಮದ ನಿವಾಸಿ ಸೈಯದ್ ಘನಿ ಖಾನ್ ಅವರಿಗೆ ಸ್ಥಳೀಯ ಅಕ್ಕಿ ವಿಧಗಳ ಸಂರಕ್ಷಣೆಯೇ ಜೀವನದ ಉದ್ದೇಶವಾಗಿ ಬದಲಾಗಿದೆ.
42 ಹರೆಯದ ಖಾನ್, ಮಂಡ್ಯದಿಂದ 20ಕಿ.ಮೀ. ದೂರದಲ್ಲಿ ಕಾವೇರಿ ನದಿ ತೀರದ ಗ್ರಾಮದಲ್ಲಿರುವ ತಮ್ಮ 14 ಎಕರೆ ಜಮೀನಿನಲ್ಲಿ ನೂರಕ್ಕೂ ಅಧಿಕ ವಿಧಗಳ ಅಕ್ಕಿಯ ಕೃಷಿ ಮಾಡುತ್ತಿದ್ದಾರೆ. ಗ್ರಾಮದಲ್ಲಿರುವ ತನ್ನ ಮನೆಯಲ್ಲೇ ಒಂದು ಸಣ್ಣ ಸಂಗ್ರಹಾಲಯವನ್ನು ನಿರ್ಮಿಸಿರುವ ಅವರು ಅದರಲ್ಲಿ ಸಾವಿರಕ್ಕೂ ಅಧಿಕ ಇಂಥ ಅಪರೂಪದ ಸ್ಥಳೀಯ ಅಕ್ಕಿ ತಳಿಗಳನ್ನು ಸಂರಕ್ಷಿಸಿಕೊಂಡು ಬರುತ್ತಿದ್ದಾರೆ. ತನ್ನ ಮನೆಯ ಮೊದಲ ಮಹಡಿಯಲ್ಲಿ ಇಟ್ಟಿರುವ ಹೂದಾನಿ ಗಳಂಥ ಸಣ್ಣ ಸಣ್ಣ ತಟ್ಟೆಗಳಲ್ಲಿ ಇಂಥ ಅಪರೂಪದ ಸ್ಥಳೀಯ ಅಕ್ಕಿಗಳನ್ನು ಇಟ್ಟಿರುವ ಖಾನ್ ಅವುಗಳ ಹೆಸರುಗಳನ್ನು ತಟ್ಟೆಗಳ ಮೇಲೆ ಬರೆದಿದ್ದಾರೆ. ರೈತನ ಮಗನಾಗಿದ್ದು ಆ ಬಗ್ಗೆ ಹೆಮ್ಮೆಯಿಂದಲೇ ಹೇಳಿಕೊಳ್ಳುವ ಖಾನ್ ಪುರಾತತ್ವಶಾಸ್ತ್ರ ಮತ್ತು ಸಂಗ್ರಹ ಶಾಸ್ತ್ರದಲ್ಲಿ ಮೈಸೂರು ವಿಶ್ವವಿದ್ಯಾನಿಲ ಯದಿಂದ ಪದವಿಯನ್ನು ಹೊಂದಿದ್ದಾರೆ. ಆದರೆ, ಹೆಚ್ಚುತ್ತಿರುವ ರಾಸಾಯನಿಕಗಳು, ಗೊಬ್ಬರ ಮತ್ತು ಕೀಟನಾಶಕಗಳ ಬಳಕೆ ಮತ್ತು ಸ್ಥಳೀಯ ತಳಿಗಳು ಮಾಯವಾಗುತ್ತಿರು ವುದನ್ನು ಕಂಡು ಚಿಂತಿತರಾದ ಅವರು ಸ್ಥಳೀಯ ಅಕ್ಕಿ ತಳಿಗಳನ್ನು ರಕ್ಷಿಸಿ ಉಳಿಸಲು ಮುಂದಾದರು. ಆರಂಭದಲ್ಲಿ ಈ ಅಕ್ಕಿಗಳ ಬೀಜಗಳನ್ನು ಪ್ಯಾಕೆಟ್ಗಳಲ್ಲಿ ಹಾಕಿ ಸ್ಥಳೀಯ ರೈತರಿಗೆ ಬಿತ್ತಲು ನೀಡುತ್ತಿದ್ದರು. ಆದರೆ ಇದರಿಂದ ಖಾನ್ಗೆ ಸಮಾಧಾನವಾಗಲಿಲ್ಲ. ಇನ್ನೂ ಹೆಚ್ಚಿನ ಪ್ರಯತ್ನದ ಅಗತ್ಯವಿದೆ ಎಂದು ಅವರಿಗನಿಸಿತು. ಅದಕ್ಕಾಗಿ ಬೀಜಗಳ ಪೂರೈಕೆಯ ಜೊತೆಗೆ ಅವುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸಂಗ್ರಹಾಲಯವನ್ನು ನಿರ್ಮಿಸುವ ಯೋಚನೆಯನ್ನು ಮಾಡಿದರು. ಇದಕ್ಕಾಗಿ ಅವರ ಹೆಂಚಿನ ಮನೆಯ ಮೇಲಿನ ಮಹಡಿಯ ಎರಡು ಕೋಣೆಗಳನ್ನು ಸಿದ್ಧ ಗೊಳಿಸಲಾಯಿತು. ಒಂದು ಕೋಣೆಯ ಗೋಡೆಯಲ್ಲಿ ಹೂದಾನಿಗಳಂತಹ ಸಣ್ಣಸಣ್ಣ ತಟ್ಟೆಗಳನ್ನು ಇಡಲು ವಿಭಾಗಗಳನ್ನು ರಚಿಸಲಾದರೆ ಇನ್ನೊಂದು ಕೋಣೆಯಲ್ಲಿ ಬಾಟಲಿಗಳಲ್ಲಿ ಅಕ್ಕಿ ಬೀಜಗಳನ್ನು ಇಡಲಾಯಿತು. ಕೃಷಿಯ ವಾಣಿಜ್ಯೀಕರಣದಿಂದ ಧಾನ್ಯಗಳು, ದ್ವಿದಳ ಧಾನ್ಯಗಳು, ತರಕಾರಿ ಮತ್ತು ಹಣ್ಣುಗಳು ಹೀಗೆ ಎಲ್ಲದರ ಸಾಂಪ್ರದಾಯಿಕ ತಳಿಗಳ ತಿರಸ್ಕಾರಕ್ಕೆ ಕಾರಣವಾಗಿದೆ. ಉತ್ತಮ ಬೆಳೆ ಯನ್ನು ನೀಡುವ ಬೃಹತ್ ಸಂಸ್ಥೆಗಳು ಉತ್ಪಾದಿಸುವ ಬೀಜಗಳ ಜಾಹೀರಾತಿನಿಂದ ರೈತರು ಪ್ರಭಾವಿತರಾಗಿದ್ದಾರೆ. ಇದರ ಪರಿಣಾಮವಾಗಿ ರೈತರು ಸಾಮೂಹಿಕವಾಗಿ ಎಂಟಿಯು- 1001, ಐಆರ್- 64, ಜಯಾ ಇತ್ಯಾದಿ ಹೈಬ್ರಿಡ್ ವಿಧಗಳತ್ತ ಮುಖ ಮಾಡಿದ್ದಾರೆ. ಸ್ಥಳೀಯ ಅಕ್ಕಿ ತಳಿಗಳಲ್ಲಿ ಕೆಲವು ಔಷಧೀಯ ಗುಣಗಳನ್ನು ಹೊಂದಿದ್ದರೆ ಇನ್ನು ಕೆಲವು ಬೇಯಿಸುವ ಸಮಯದಲ್ಲಿ ಉತ್ತಮ ಪರಿಮಳ ಬೀರುತ್ತವೆ. ಕೆಲವು ತಳಿಗಳು ಬರಗಾಲ ವನ್ನು ಎದುರಿಸುವ ಶಕ್ತಿ ಹೊಂದಿದ್ದರೆ ಇನ್ನು ಕೆಲವಕ್ಕೆ ಕೇವಲ ಒಂದೆರಡು ಮಳೆ ಸಾಕಾಗುತ್ತದೆ. ಹಾಗಾಗಿ ಸಾಂಪ್ರದಾಯಿಕ ತಳಿಗಳನ್ನು ಸಂರಕ್ಷಿಸುವುದು ಸಮರ್ಥನೀಯ ಕೃಷಿಗೆ ಅತ್ಯಗತ್ಯವಾಗಿದೆ ಎಂದು ಖಾನ್ ವಿವರಿಸುತ್ತಾರೆ. ಭವಿಷ್ಯಕ್ಕಾಗಿ ಈ ತಳಿಗಳನ್ನು ಉಳಿಸಲು ಬಯಸಿದ ಖಾನ್ ಅದಕ್ಕಾಗಿ ರತ್ನಚೂಡಿ, ಗಂಧ ಸಾಲೆ, ರಸಕದಮ್, ರಾಜಾಮುಡಿ, ಗಂಗದಲೆ, ದೊಡ್ಡಿಬಟ್ಟ, ದೊಡ್ಡಬ್ಯಾರೆನೆಲ್ಲು, ಚಿನ್ನ ಪೊಣ್ಣಿ, ಮೈಸೂರು ಮಲ್ಲಿಗೆ, ಜೀರಿಗೆ ಸಣ್ಣ, ಪರಿಮಳ ಸಣ್ಣ, ಬಾಸ್ಮತಿ, ಬರ್ಮ ಕಪ್ಪು, ಥಾಯ್ ಜಾಸ್ಮಿನ್ ಮತ್ತು ಪಾಕಿಸ್ತಾನ್ ಬಾಸ್ಮತಿ ಇತ್ಯಾದಿ ವಿಧಗಳನ್ನು ಸಂಗ್ರಹಿಸಲು ಆರಂಭಿಸಿದರು. ಕೃಷಿ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು ಬೀಜಗಳನ್ನು ಸಂರಕ್ಷಿಸಲು ಫ್ರೀಝರ್ಗಳನ್ನು ಬಳಸಿದರೆ ಖಾನ್ ತಮ್ಮ ಗದ್ದೆಯನ್ನೇ ಸಂರಕ್ಷಣಾ ತಾಣ ವಾಗಿ ಬದಲಾಯಿಸಿದ್ದಾರೆ. ಈ ವಿಧಾನದ ಮೂಲಕ ಭತ್ತದ ಬೀಜಗಳನ್ನು ಯಾವುದೇ ಕೀಟನಾಶಕ ಬಳಸದೆ ಕನಿಷ್ಠ 18 ತಿಂಗಳು ಸಂರಕ್ಷಿಸಬಹುದಾಗಿದೆ. ತಮ್ಮ ಜಮೀನಿನ ಒಂದು ಎಕರೆ ಜಾಗದಲ್ಲಿ ಹಲವು ವಿಭಾಗಗಳಲ್ಲಿ ಹಲವು ವಿಧದ ಅಕ್ಕಿಗಳ ಬೀಜಗಳನ್ನು ಅವರು ಬಿತ್ತಿದ್ದಾರೆ. ಸ್ಥಳೀಯ ಅಕ್ಕಿ ವಿಧಗಳನ್ನು ಸಂರಕ್ಷಿಸಿ ಉಳಿಸಲುಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆಗ್ರಹಿಸಿ ಖಾನ್ಕರ್ನಾಟಕದ ಮುಖ್ಯಮಂತ್ರಿ ಗಳಿಗೂ ಪತ್ರ ಬರೆದಿದ್ದಾರೆ. ಆದರೆ ಅದಕ್ಕೆ ಈವರೆಗೆ ಯಾವುದೇ ಸ್ಪಂದನೆ ದೊರೆತಿಲ್ಲ. ತನ್ನ ಬಳಿ ಆಗಮಿಸುವ ಮತ್ತು ಬೀಜಗಳನ್ನು ಖರೀದಿಸುವವರ ಮಾಹಿತಿಯನ್ನು ಖಾನ್ ಪುಸ್ತಕದಲ್ಲಿ ಬರೆದಿಡುತ್ತಾರೆ. ಇವರಿಂದ 200 ವಿಧಗಳ ಬೀಜಗಳನ್ನು ಖರೀದಿಸಿರುವ ಹೈದರಾಬಾದ್ನ ಹೊರವಲಯದ ರೈತ ಶಿವಪ್ರಸಾದ್ ಅದರಿಂದ ಬೆಳೆದ ಬೀಜಗಳನ್ನು ತನ್ನ ಆಪ್ತರಿಗೂ ನಾಟಿ ಮಾಡಲು ನೀಡಿದ್ದಾರೆ. ಸಮೀಪದ ಮದ್ದೂರು ಗ್ರಾಮದ ಕೃಷಿಕ ಕೃಷ್ಣ ಅವರು ಖಾನ್ನ ಖಾಯಂ ಗ್ರಾಹಕರಾಗಿದ್ದಾರೆ. ಟಿ.ನರಸೀಪುರದ ಹೊಸಮಲಂಗಿ ಗ್ರಾಮದ ರಚನಾ ಅವರು ಖಾನ್ನಿಂದ ಖರೀದಿಸಿದ 25 ವಿಧಗಳ ಅಕ್ಕಿ ತಳಿಯನ್ನು ಯಶಸ್ವಿಯಾಗಿ ಬೆಳೆಸಿದ್ದಾರೆ. ಖಾನ್ ಮನೆಯ ಮೂಲೆಯೊಂದರಲ್ಲಿ, ಸ್ಥಳೀಯ ಅಕ್ಕಿ ವಿಧಗಳ ಸಂರಕ್ಷಣೆಯ ಕಾರ್ಯಕ್ಕಾಗಿ ಅವರಿಗೆ ನೀಡಲಾದ ಪ್ರಶಸ್ತಿಗಳು, ಪದಕಗಳು ಮತ್ತು ಪ್ರಮಾಣ ಪತ್ರಗಳನ್ನು ಇಡಲಾಗಿದೆ. 2008ರಲ್ಲಿ ಕರ್ನಾಟಕ ಸರಕಾರ ಖಾನ್ಗೆ ಕೃಷಿ ಪಂಡಿತ ಪ್ರಶಸ್ತಿ ನೀಡಿ ಗೌರವಿ ಸಿತ್ತು. ಸಸ್ಯ ರಕ್ಷಣೆ ವೇದಿಕೆ ಖಾನ್ ಅವರಿಗೆ ರಾಷ್ಟ್ರೀಯ ಜೀನೊಮ್ ಬೀಜ ರಕ್ಷಕ ಪ್ರಶಸ್ತಿ ನೀಡಿ ಗುರುತಿಸಿತು. ಹೈದರಾಬಾದ್ನ ಅಕ್ಕಿ ಸಂಶೋಧನೆ ನಿರ್ದೇಶನಾಲಯ ಖಾನ್ ಅವರನ್ನು 2011 -12ರ ಅಕ್ಕಿ ಆವಿಷ್ಕಾರ ರೈತರ ಪ್ರಶಸ್ತಿಯಿಂದ ಸನ್ಮಾನಿಸಿತು. ಕರ್ನಾಟಕ ಸರಕಾರ ಖಾನ್ಗೆ 2010ರಲ್ಲಿ ಪ್ರತಿಷ್ಠಿತ ಜೀವವೈವಿಧ್ಯ ಪ್ರಶಸ್ತಿ ನೀಡಿ ಗೌರವಿಸಿದರೆ ಸುವರ್ಣಾ ವಾಹಿನಿ 2017ರಲ್ಲಿ ಖಾನ್ರನ್ನು ವರ್ಷದ ವ್ಯಕ್ತಿ ಪ್ರಶಸ್ತಿಯಿಂದ ಸನ್ಮಾನಿಸಿತು. ಘನಿ ಖಾನ್ ಪ್ರಕಾರ, ಭಾರತ ಸಾವಿರಾರು ಅಕ್ಕಿ ತಳಿಗಳನ್ನು ಹೊಂದಿದೆ ಮತ್ತು ಇಲ್ಲಿ ಪ್ರತಿ 40 ಕಿ.ಮೀ. ಅಂತರದಲ್ಲಿ ಅಕ್ಕಿ ವಿಧಗಳಲ್ಲಿ ಬದಲಾವಣೆಯನ್ನು ಕಾಣಬಹುದಾಗಿದೆ. ಇವುಗಳಲ್ಲಿ ಅನೇಕ ತಳಿಗಳು ಔಷಧೀಯ ಗುಣದಿಂದ ಹೆಸರುವಾಸಿಯಾಗಿವೆ. ಕೇರಳದ ನವರ ತಳಿ ಗಂಟು ನೋವಿಗೆ ಉತ್ತಮವಾಗಿದ್ದರೆ ಕರ್ನಾಟಕದ ಕರಿಗಜ್ವಿಲ್ಲಿ ಮತ್ತು ಅಂಬೆ ಮೊಹರ್ ಹಾಲುಣಿಸುವ ತಾಯಂದಿರಿಗೆ ಉತ್ತಮ ಎಂದು ಹೇಳಲಾಗುತ್ತದೆ. ಮೆಹ್ದಿ ತಳಿ ಎಲುಬಿನ ಬಿರುಕಿಗೆ ಉತ್ತಮ ಔಷಧಿಯಾಗಿದ್ದರೆ ತಮಿಳು ನಾಡಿನ ಮಾಪಿಳೈ ಸಾಂಬಾ ಪುರುಷತ್ವವನ್ನು ಹೆಚ್ಚಿಸುತ್ತದೆ. ಮೂಲವ್ಯಾಧಿಯಿಂದ ಬಳಲುತ್ತಿರುವವರಿಗೆ ಖೈಮಾ ತಳಿ ಉತ್ತಮವಾಗಿದೆ ಎಂದು ಖಾನ್ ತಿಳಿಸುತ್ತಾರೆ. ಅಕ್ಕಿಗಳ ವಿಧಗಳ ವಿಷಯದಲ್ಲಿ ಘನಿ ಖಾನ್ ಓರ್ವ ಚಲಿಸುವ ಜ್ಞಾನಕೋಶವಾಗಿದ್ದಾರೆ. ಅವರು ಹೇಳುವಂತೆ, ಭತ್ತವನ್ನು ನೀರಾವರಿ ಬೆಳೆ ಎಂದು ತಿಳಿಯುವುದು ತಪ್ಪು. ದೊಡ್ಡಿ ಬಟ್ಟ, ಗಂಗದಲೆ ಮತ್ತು ಬಿಡ್ಡಿ ದೊಡ್ಡಿಯಂಥ ಅಕ್ಕಿ ತಳಿಗಳನ್ನು ಒಂದೆರಡು ಮಳೆ ಪಡೆ ಯುವ ಜಮೀನಿನಲ್ಲೂ ಬೆಳೆಯಬಹುದು ಎಂದು ಅವರು ಹೇಳುತ್ತಾರೆ. ರತ್ನಚೂಡಿ, ಎಚ್ಎಂಟಿ, ಎನ್ಎಂಎಸ್-11 ಇತ್ಯಾದಿ ಹೆಚ್ಚು ಇಳುವರಿ ನೀಡುವ ತಳಿಗಳಾಗಿದ್ದರೆ ಜೀರಿಗೆ ಸಣ್ಣ, ರಸಕದಮ್, ಗಂಧಸಾಲೆ, ಪರಿಮಳ ಸಣ್ಣ ಮತ್ತು ಮುಗದ್ ಸುಗಂಧ್ ಬೇಯಿಸುವ ವೇಳೆ ಉತ್ತಮ ಪರಿಮಳ ಹೊರಸೂಸುತ್ತವೆ ಎಂದು ಖಾನ್ ವಿವರಿಸುತ್ತಾರೆ. ಕಳೆದ ಕೆಲವು ವರ್ಷಗಳಿಂದ ಖಾನ್ ಸ್ಥಳೀಯ ಮಾವುಗಳ ತಳಿಯನ್ನೂ ಸಂರಕ್ಷಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ. ಅದಕ್ಕಾಗಿ ಅವರು ತಮ್ಮ ಹೆಸರನ್ನು ಹೊಸದಿಲ್ಲಿಯ ಸಸ್ಯ ವಂಶವಾಹಿಯ ರಾಷ್ಟ್ರೀಯ ಮಂಡಳಿಯಲ್ಲಿ ನೋಂದಾಯಿಸಿದ್ದಾರೆ.